ಜಠರದ ಒಳಪದರದಲ್ಲಿನ ಉರಿಯೂತವೇ ಗ್ಯಾಸ್ಟ್ರಿಕ್ ಸಮಸ್ಯೆ. ಇದರಿಂದಾಗಿ ಎದೆಯುರಿಯನ್ನು ಕಾಣಬಹುದಾಗಿದೆ. ನಾವು ತಿನ್ನುವ ಆಹಾರದ ವ್ಯತ್ಯಾಸದಿಂದ ಹೆಚ್ಚಾಗಿ ಈ ಸಮಸ್ಯೆ ಕಂಡು ಬರುತ್ತದೆ. ಸಾಮಾನ್ಯವಾಗಿ ಈ ಸಮಸ್ಯೆಯು ಬಹಳ ಯಾತನೆಯನ್ನು ಕೊಡುತ್ತದೆ. ಕೆಲವರಿಗೆ ಒಮ್ಮೆಮ್ಮೆ ಕಾಡಿದರೆ ಇನ್ನು ಹಲವರಿಗೆ ಯಾವಾಗಲು ಕಾಣಿಸುತ್ತದೆ. ಕೆಲವರಿಗೆ ಎದೆಯಲ್ಲಿ ಬೆಂಕಿಯಾದ ಅನುಭವವಾಗುತ್ತದೆ. ಜಠರದ ಒಳಪದರದಲ್ಲಿನ ಉರಿಯೂತವೇ ಇದಕ್ಕೆಲ್ಲ್ಲ ಕಾರಣ.
ಕಾರಣಗಳು: ಸರಿಯಾದ ಸಮಯಕ್ಕೆ ಆಹಾರ ಸೇವಿಸುವುದು, ಮಾನಸಿಕ ಒತ್ತಡ ದೀರ್ಘಕಾಲದವರೆಗೂ ಹಲವಾರು ಕಾರಣಗಳಿಂದ ತೆಗೆದುಕೊಳ್ಳುವಂತಹ ಔಷಧಿಗಳು, ಧೂಮಪಾನ, ಮದ್ಯಪಾನ
ಲಕ್ಷಣಗಳು: ಹೊಟ್ಟೆ ಉಬ್ಬರ ಕಾಣಿಸಿಕೊಳ್ಳುವುದು, ಎದೆ ಉರಿ, ಹುಳಿ ತೇಗು, ಹೊಟ್ಟೆ ನೋವು ಅಜೀರ್ಣ, ತಲೆನೋವು ವಾಂತಿಯಾಗುವುದು ಬಾಯಿ ಒಣಗುವಿಕೆ, ಹಸಿವಾಗದಿರುವುದು ತೂಕ ಕಡಿಮೆಯಾಗುವುದು.
- ಅತಿಯಾಗಿ ಟೀ, ಕಾಫಿ, ಮಾರುಕಟ್ಟೆಯಲ್ಲಿ ತಂಪು ಪಾನೀಯಗಳನ್ನು ಸೇವಿಸಬೇಡಿ
- ಮದ್ಯಪಾನ ಮತ್ತು ದೂಮಪಾನಗಳೆರೆಡು ಎದೆಯುರಿ ಸಮಸ್ಯೆಯನ್ನು ಹೆಚ್ಚಿಸುತ್ತವೆ.
- ಅತಿಯಾದ ಕೊಬ್ಬಿನಂಶವಿರುವ ಪದಾರ್ಥಗಳನ್ನು ಸೇವಿಸಬೇಡಿ.
- ಮಸಾಲೆಯುಕ್ತ, ಎಣ್ಣೆಯಲ್ಲಿ ಕರಿದ ಆಹಾರ, ಹುರಿದ ಪದಾರ್ಥಗಳ ಸೇವನೆ ಮಾಡಬೇಡಿ.
- ನಿಗದಿತ ಸಮಯಕ್ಕೆ ಊಟ, ಉಪಹಾರ, ಸೇವನೆ ಮಾಡಿ
- ಪ್ರತಿದಿನ 8-10 ಗಂಟೆ ನಿದ್ರೆ ಮಾಡಿ.
- ಪ್ರತಿದಿನ 3-4 ಲೀಟರ್ ನೀರು ಕುಡಿಯಿರಿ
- ಆಹಾರದಲ್ಲಿ ಹಣ್ಣು, ತರಕಾರಿ ಮತ್ತಿತರ ನಾರಿನಂಶವಿರುವ ಪದಾರ್ಥಗಳನ್ನು ಸೇವಿಸಿ.
- ಧಾನ್ಯಗಳು ಹಾಗೂ ಬೆಳೆ ಕಾಳುಗಳ ಸೇವನೆಗೆ ಹೆಚ್ಚು ಮಹತ್ವ ಕೊಡಿ. ಕಲ್ಲಂಗಡಿ ಹಣ್ಣು, ಮಾವಿನ ಹಣ್ಣು, ಸೇಬು ಇತ್ಯಾದಿ ಸೇವಿಸಿ
ಹೋಮಿಯೋಕೇರ್ ಚಿಕಿತ್ಸೆ: ಹೋಮಿಯೋಕೇರ್ ಇಂಟರ್ನ್ಯಾಷನಲ್ನಲ್ಲಿ ಜೆನಿಟಿಕ್ ಕಾನ್ಸಿಟ್ಯೂಷನಲ್ ಚಿಕಿತ್ಸಾ ವಿಧಾನದಿಂದ ಸಮಸ್ಯೆಯ ಮೂಲ ಕಾರಣ ಹುಡುಕಿ ಯಾವುದೇ ಶಸ್ತ್ರಚಿಕಿತ್ಸೆ ಇಲ್ಲದೆ ಪರಿಹಾರ ಮಾಡಲಾಗುವುದು.