ನೆತ್ತಿಯ ಆರೋಗ್ಯ ಕಾಪಾಡಿಕೊಳ್ಳಲು, ಕೂದಲು ಉದುರುವಿಕೆ ಕಡಿಮೆಯಾಗಬೇಕಾ?.
ದಾಸವಾಳ, ಅಂಟುವಾಳ, ಮೆಂತ್ಯೆ ಸೇರಿದಂತೆ ಕೆಲವು ನೈಸರ್ಗಿಕ ಪದಾರ್ಥದಿಂದ ತಯಾರಿಸಿ ಶಾಂಪೂ.
ಇಂದಿನಿಂದಲೇ ಕೆಮಿಕಲ್ ಮುಕ್ತ ಶಾಂಪೂ ಬಳಕೆಗೆ ಮುಂದಾಗಿ, ಕೂದಲ ಆರೋಗ್ಯ ಕಾಪಾಡಿಕೊಳ್ಳಿ.
Get Thick Hair Naturally At Home: ಚರ್ಮದ ಆರೋಗ್ಯ ಕಾಪಾಡಿಕೊಳ್ಳಲು ಸಾಮಾನ್ಯವಾಗಿ ಇಂದಿನ ದಿನಗಳಲ್ಲಿ ನ್ಯಾಚುರಲ್ ಹೇರ್, ಸ್ಕಿನ್ ಕೇರ್ಗಳಿಗೆ ಒಗ್ಗಿಕೊಳ್ಳಲು ಬಯಸುತ್ತೇವೆ. ಹೀಗಾಗಿ ಶಾಂಪು, ಸೋಪು, ಫೇಸ್ ಪ್ಯಾಕ್ ಸೇರಿದಂತೆ ಹಲವು ಹೋಮ್ ರೆಮಿಡಿಗಳಿಗೆ ಒತ್ತು ನೀಡಲಾಗುತ್ತದೆ. ಹೆಚ್ಚು ರಾಸಾಯನಿಕ ಶಾಂಪು ಬಳಕೆ ಮಾಡುವುದರಿಂದ ನೆತ್ತಿಯ ಆರೋಗ್ಯದ ಮೇಲಾಗುವ ಪರಿಣಾಮವನ್ನು ಲೆಕ್ಕದಲ್ಲಿಟ್ಟುಕೊಂಡು ಶೀಗೆಕಾಯಿ, ಅಂಟುವಾಳ ಬಳಕೆ ಮಾಡೋದು ಸಾಮಾನ್ಯ. ಆದರೆ, ದಾಸವಾಳದ ಸಹಾಯದಿಂದ ಶಾಂಪು ತಯಾರಿಸಬಹುದು ಎನ್ನುವ ವಿಚಾರ ನಿಮಗೆ ಗೊತ್ತಿದೆಯಾ?
ಹೌದು, ಬಂಗಾಳದ ಪ್ರಸಿದ್ಧ ಬ್ಯೂಟಿಷಿಯನ್ ಜ್ಯೋತಿ ಅಗರ್ವಾಲ್ ಮನೆಯಲ್ಲಿಯೇ ದಾಸವಾಳ ಮತ್ತು ಇತರ ನೈಸರ್ಗಿಕ ಪದಾರ್ಥಗಳಿಂದ ಕಣ್ಮುಂದೆಯೇ ಶಾಂಪು ತಯಾರಿಸಿಕೊಳ್ಳುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಈ ಶಾಂಪು ತಯಾರಿಸಲು ಬೇಕಾಗುವ ಸಾಮಾಗ್ರಿಗಳ ಬಗ್ಗೆ ಪಟ್ಟಿ ಇಲ್ಲಿದೆ.
ಸಾಮಾನ್ಯವಾಗಿ ರಾಸಾಯನಿಕ ಶಾಂಪು, ಸೋಪು ಚರ್ಮದ ನೈಸರ್ಗಿಕ ಅಂಶವನ್ನು ಸೈಲಂಟಾಗಿ ಕೊಲ್ಲುತ್ತಾ ಸಾಗುತ್ತದೆ. ಹೀಗಾಗಲಿ ಹಲವು ನೈಸರ್ಗಿಕವಾಗಿ, ಹೆಚ್ಚು ರಾಸಾಯನಿಕ ಇಲ್ಲದ ಡಿಟರ್ಜೆಂಟ್ಗಳನ್ನು ಬಳಕೆ ಮಾಡಲು ಬಯಸುತ್ತಾರೆ. ರಾಸಾಯನಿಕ ವಸ್ತುಗಳು ಕೂದಲು ಉದುರುವಂತೆ, ನೆತ್ತಿಯ ಆರೋಗ್ಯ ಕೆಡಿಸುವಂತೆ ಮಾಡುತ್ತದೆ. ನಿಮಗೂ ಈ ಸಮಸ್ಯೆ ಕಾಡುತ್ತಿದ್ದರೆ, ಇಂದೇ ಕೆಮಿಕಲ್ ಶಾಂಪೂ ಗಳಿಗೆ ಗುಡ್ಬೈ ಹೇಳಿ.
15-20 ಗ್ರಾಂ ಒಣಗಿದ ದಾಸವಾಳ ಹೂ‘
40 ಗ್ರಾಂ ಅಂಟುವಾಳ
40 ಗ್ರಾಂ ಒಣಗಿದ ಬೆಟ್ಟದ ನೆಲ್ಲಿಕಾಯಿ
4-5 ಗ್ರಾಂ ರೋಸ್ಮೆರಿ
ಭೃಂಗರಾಜ 5-6
15-20 ಮೆಂತ್ಯ ಬೀಜ
ಅಗಸೆ ಬೀಜ 25 ಗ್ರಾಂ
ಗುಲಾಬಿ ದಳ- 4-5 ಗ್ರಾಂ
ಅಂಟುವಾಳ, ರೋಸ್ಮೆರಿ, ಬೆಟ್ಟದ ನೆಲ್ಲಿಕಾಯಿ, ಮೆಂತ್ಯ, ಭೃಂಗರಾಜವನ್ನು ಒಂದು ದೊಡ್ಡ ಪಾತ್ರೆಗೆ ಹಾಕಿ ಅದಕ್ಕೆ 2-3 ಕಪ್ ನೀರು ಹಾಕಿ, ರಾತ್ರಿಯಿಡೀ ನೆನಯಲು ಇಡಿ. ಬೆಳಗ್ಗೆ ಇದಕ್ಕೆ ಎಲ್ಲ ಸಾಮಾಗ್ರಿಗಳನ್ನು ಹಾಕಿ ಚೆನ್ನಾಗಿ ಕುದಿಸಿ ತಣ್ಣಗಾಗಲು ಬಿಡಿ. ನಂತರ ಅದನ್ನು ಸೋಸಿ ಪಕ್ಕಕ್ಕೆ ಇಡಿ. ಈ ಮಿಶ್ರಣವು ನಿಮಗೆ ನೊರೆ ಬರುತ್ತಿದೆಯಾ ಎನ್ನುವುದನ್ನು ಗಮನಿಸಿ.
ಈಗ ಮತ್ತೊಂದು ಕಡೆ, ಗುಲಾಬಿ ದಳ, ಅಗಸೆ ಬೀಜ ಹಾಗೂ ಒಣ ದಾಸವಾಳವನ್ನು ಇಟ್ಟು ನೀರಿನಲ್ಲಿ ನೆನೆಸಲು ಬಿಡಿ. ನಂತರ ಅದನ್ನು ಚೆನ್ನಾಗಿ ಕುದಿಸಿ. ನೀವು ಕುದಿಸುತ್ತಿರುವ ನೀರು ಗಾಢ ಕಂದು ಬಣ್ಣಕ್ಕೆ ತಿರುಗಿದೆಯಾ ಎಂಬುದರ ಬಗ್ಗೆ ಗಮನ ಹರಿಸಿ. ಈಗ ನಿಮ್ಮ ಶಾಂಪು ಮಿಶ್ರಣ ಕಂದು ಬಣ್ಣಕ್ಕೆ ತಿರುಗಿದ ನಂತರ ಸ್ಟವ್ ಆಫ್ ಮಾಡಿ. ಮೊದಲಿನ ಮಿಶ್ರಣದ ನೀರಿಗೆ, ಸದ್ಯ ಕುದಿಸಿದ ನೀರನ್ನು ಶೋಧಿಸಿ ಹಾಕಿ, ಚೆನ್ನಾಗಿ ಕಲಿಸಿ. ಈಗ ನ್ಯಾಚುರಲ್ ಶಾಂಪು ಬಳಸಿ ನಿಮ್ಮ ತಲೆ ತೊಳೆದುಕೊಳ್ಳಬಹುದಾಗಿದೆ.