Egg Pakoda Recipe 
ಲೈಫ್‌ಸ್ಟೈಲ್

ಮಳೆಗೆ ಬಿಸಿಯಾಗಿ ಕರಿದ ತಿಂಡಿ ತಿನ್ಬೇಕು ಅನ್ನೋ ಆಸೆ ಆಗ್ತಿದೆಯಾ?; ಈ ಬಾರಿ ಬಜ್ಜಿ, ಬೋಂಡಾದ ಬದಲಿಗೆ ಕ್ರಿಸ್ಪಿ ಮೊಟ್ಟೆ ಪಕೋಡ ಟ್ರೈ ಮಾಡಿ!

Egg Pakoda Recipe: ಕೇರಳಂಗೆ ಜೂ.4ರಂದು ಮುಂಗಾರು ಕಾಲಿಟ್ಟಿದ್ದೆ. ಇದರಿಂದಾಗಿ ಬೆಂಗಳೂರು ಸೇರಿದಂತೆ ಇತರ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ, ತಣ್ಣನೆ ಗಾಳಿ ಬೀಸುತ್ತಿದೆ. ಮಳೆ ಬೀಳುವ ಸೂಚನೆಯೂ ಇದೆ. ಇಂತಹ ಸಮಯದಲ್ಲಿ ಭಾರತೀಯರಾದ ನಾವು ಸಾಮಾನ್ಯವಾಗಿ ಕುರುಕಲು ತಿಂಡಿ ಅಥವಾ ಕರಿದ ಆಹಾರ ತಿನ್ನಲು ಬಯಸುತ್ತೇವೆ. ಪ್ರತಿ ಬಾರಿ ಮಳೆಯಾದಾಗ, ಬೋಂಡಾ, ಬಜ್ಜಿ, ವಡೆ, ಪಕೋಡ ಸೇರಿದಂತೆ ಇನ್ನೇನಾದ್ರು ಹೊಸದಾಗಿ ಟ್ರೈ ಮಾಡೋಣ ಅನ್ನೋದು ಹೆಂಗಳೆಯರ ಹಂಬಲ, ಈ ಬಾರಿ ಸಂಜೆಗೆ ಹೊಸದಾಗಿ ಸ್ನ್ಕ್ಯಾಕ್ಸ್​ ಏನು ಮಾಡೋದು ತಡಕಾಡ್ತಿದ್ದೀರಾ ಎಂದರೆ ನಿಮಗಾಗಿ ಇಲ್ಲೊಂದು ಸ್ಪೆಷಲ್​ ರೆಸಿಪಿ ಇದೆ.

ಮೊಟ್ಟೆ ಪಕೋಡ ಟ್ರೈ ಮಾಡಿ

ಸಾಮಾನ್ಯವಾಗಿ ನಾವು ಈರುಳ್ಳಿ ಪಕೋಡ ನೋಡೆ ಇರುತ್ತೇವೆ. ಈರುಳ್ಳಿಯಿಂದ ಮಾಡುವ ಬೋಂಡಾ ಕೂಡ ಬಾಯಲ್ಲಿ ನೀರುಳಿಸುವಂತೆ ಮಾಡುತ್ತದೆ. ಆದರೆ ನಾವಿಂದು ಹೇಳಲು ಹೊರಟಿರುವ ರೆಸಪಿ ಈರುಳ್ಳಿದಲ್ಲ, ಮೊಟ್ಟೆಯದ್ದು. ನಿಮಗೆ ಪಕೋಡ ತಿನ್ನುವ ಆಸೆಯಾಗಿದ್ದರೆ, ಈ ಬಾರಿ ಈರುಳ್ಳಿ ಬದಲು ಮೊಟ್ಟೆಯನ್ನು ಹಾಕಿ. ಹೌದು ಇಂದು ಈರುಳ್ಳಿ ಪಕೋಡ ಮಾಡೋದು ಹೇಗೆ ಎಂದು ತಿಳಿದುಕೊಳ್ಳೋಣ.

ಬೇಕಾಗುವ ಸಾಮಾಗ್ರಿಗಳು?

  • ಮೂರು ಕೋಳಿ ಮೊಟ್ಟೆ,
  • ಕಾಲು ಕಪ್​ ಕಡಲೆ ಹಿಟ್ಟು
  • ಎರಡು ಚಮಚ ಅಕ್ಕಿ ಹಿಟ್ಟು,
  • ನೇರವಾಗಿ ಹಚ್ಚಿದ ಒಂದು ದೊಡ್ಡ ಈರುಳಿ,
  • ಕೊಂಚ ಕೊತ್ತಂಬರಿ,
  • ಎರಡು ಸಣ್ಣಗೆ ಹಚ್ಚಿದ ಮೆಣಸಿನಕಾಯಿ
  • ಅರ್ಧ ಚಮಚ ಮೆಣಸಿನ ಪುಡಿ
  • ಅರ್ಧ ಚಮಚ ಜೀರಿಗೆ,
  • ಅರ್ಧ ಚಮಚ ಧನಿಯಾ ಪುಡಿ,
  • ಕಾಲು ಚಮಚ ಅರಿಶಿನ ಹಾಗೂ
  • ಎಣ್ಣೆ

ಮಾಡುವ ವಿಧಾನ

ಒಂದು ಸಣ್ಣ ಬೌಲ್​ನಲ್ಲಿ ಸಣ್ಣಗೆ ಮೊಟ್ಟೆಯನ್ನು ಹೆಚ್ಚಿ ಇಡಿ. ಅದಕ್ಕೆ ಕಡಲೇ ಹಿಟ್ಟು, ಅಕ್ಕಿ ಹಿಟ್ಟು ಹಾಕಿ ಬೆರೆಸಿ, ಈರುಳ್ಳಿ, ಮೆಣಸಿನಕಾಯಿ, ಧನಿಯಾ, ಮೆಣಸಿನ ಪುಡಿ, ಕೊತ್ತಂಬರಿ, ಅರಿಶಿನಮ ಕೊಂಚ ನೀರು ಎಲ್ಲವನ್ನು ಹಾಕಿ ಮಿಶ್ರಣ ಮಾಡಿ ಬೋಂಡಕ್ಕೆ ರೆಡಿ ಮಾಡಿಕೊಂಡತೆ ಮಾಡಿ ಅದನ್ನು ನೆನಯಲು ಬಿಡಿ.
ಈಗ ಗ್ಯಾಸ್​ ಮೇಲೆ ಬಾಣಲಿ ಹಿಟ್ಟು ಎಣ್ಣೆ ಹಾಕಿ ಕೊಂಚ ಕಾಯಿಸಿ, ಆನಂತರ ಉಂಡೆ ಉಂಡೆಯಾಗಿ ಮೊಟ್ಟೆ ಪಕೋಡಕ್ಕಾಗಿ ತಯಾರಿಸಿದ ಕಚ್ಚಾ ಹಿಟ್ಟನ್ನು ಎಣ್ಣೆಗೆ ಹಾಕಿ. ಪಕೋಡ ಕೆಂಪು ಮಿಶ್ರಿತ ಬಣ್ಣಕ್ಕೆ ಬರುವವರೆಗೂ ಬಿಟ್ಟು ನಂತರ ಅದನ್ನು ತೆಗೆದು ಎಣ್ಣೆ ಹೀರಿಕೊಳ್ಳಲು ಸಹಾಯ ಮಾಡುವ ಟಿಶ್ಯೂ ಮೇಲೆ ಹಾಕಿ. ಈಗ ಕರಿದ ಗರಿಗರಿಯಾದ ಮೊಟ್ಟೆ ಪಕೋಡ ತಿನ್ನಲು ಲಭ್ಯ, (ಏಜೆನ್ಸೀಸ್​)