ದೇಹಕ್ಕೆ ವಿಟಮಿಟ್ ಡಿ ಬಹಳ ಮುಖ್ಯವಾಗಿದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಹಲವು ಕಾಯಿಲೆಗಳಿಂದ ನಮ್ಮನ್ನು ದೂರವಿಡುತ್ತದೆ. ಆದ್ದರಿಂದ ವಿಟಮಿನ್ ಡಿ ಸಮೃದ್ಧವಾಗಿರುವ ಆಹಾರವನ್ನು ನಾವು ಸೇವಿಸಬೇಕು. ನಾನ್ವೆಜ್ ತಿನ್ನುವವರಿಗೆ ವಿಟಮಿನ್ ಡಿ ಲಭ್ಯವಾಗುತ್ತದೆ. ಅಷ್ಟೇ ಸಮಾನವಾಗಿ ಸಸ್ಯಹಾರ ಇಷ್ಟ ಪಡುವವರು ವಿಟಮಿನ್ ಡಿ ಪಡೆಯುವುದು ಹೇಗೆ.. ಯಾವೆಲ್ಲಾ ಆಹಾರ ನಮಗೆ ಸಹಕಾರಿಯಾಗುತ್ತದೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ.
- ಮಶ್ರೂಮ್: ವಿಟಮಿನ್ ಡಿ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುವ ಏಕೈಕ ಸಸ್ಯ ಆಧಾರಿತ ಆಹಾರ ಇದಾಗಿದೆ. ಇದನ್ನು ಕೊಳ್ಳುವ ಮುನ್ನ ಬೆಳಸಿರುವ ಬಗ್ಗೆ ತಿಳಿಸುಕೊಳ್ಳಿ. ಏಕೆಂದರೆ ಕತ್ತಲೆಯಲ್ಲಿ ಬೆಳೆದ ಅಣಬೆಗಳು ಸೂರ್ಯನ ಬೆಳಕಿನಲ್ಲಿ ಬೆಳೆದ ಅಣಬೆಗಳಷ್ಟು ವಿಟಮಿನ್ ಡಿ ಅನ್ನು ಹೊಂದಿರುವುದಿಲ್ಲ.
- ಬಾದಾಮಿ ಹಾಲು: ಇದು ನಿಮ್ಮ ದೇಹದಲ್ಲಿನ ವಿಟಮಿನ್ ಡಿ ಕೊರತೆಯನ್ನು ಪೂರೈಸುತ್ತದೆ. ಬಾದಾಮಿ ಹಾಲಿನಲ್ಲಿ ವಿಟಮಿನ್ ಡಿ ಜತೆಗೆ ಬಲವರ್ಧಿತ ಕ್ಯಾಲ್ಸಿಯಂ ಕಂಡುಬರುತ್ತದೆ. ಇದರಿಂದ ನಮ್ಮ ಮೂಳೆಗಳು ಬಲಗೊಳ್ಳುತ್ತವೆ.
- ಅಕ್ಕಿ ಹಾಲು: ಅಕ್ಕಿ ಹಾಲಿನಲ್ಲಿ ಅನೇಕ ಪೋಷಕಾಂಶಗಳು ಇರುತ್ತವೆ. ವಿಟಮಿನ್ ಡಿ ಜತೆಗೆ ವಿಟಮಿನ್ ಎ, ಕಬ್ಬಿಣ ಮತ್ತು ಕ್ಯಾಲ್ಸಿಯಂ ಅಂಶ ಇರುತ್ತದೆ. ಹಲ್ಲುಗಳು ಮತ್ತು ಬಲವಾದ ಮೂಳೆಗಳನ್ನು ಪಡೆಯಲು ಇದು ಸಹಕಾರಿ.
- ಸೋಯಾ ಹಾಲು: ಒಂದು ಕಪ್ ಸೋಯಾ ಹಾಲಿನಲ್ಲಿ ಸುಮಾರು 2.9 ಎಂಸಿಜಿ ವಿಟಮಿನ್ ಡಿ ಇರುತ್ತದೆ. ಈ ಹಾಲನ್ನು ಕುಡಿಯುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.
- ಸೂರ್ಯನ ಬೆಳಕು: ಆಹಾರವಲ್ಲದೆ ಸೂರ್ಯನ ಬೆಳಕು ಅತಿ ಹೆಚ್ಚು ವಿಟಮಿನ್ ಡಿ ನೀಡುವ ಮೂಲವಾಗಿದೆ. ದಿನವಿಡಿ ಸೂರ್ಯನ ಬೆಳಕಿನಿಂದ ವಿಟಮಿನ್ ಡಿ ಸಿಗುತ್ತದೆ ಎಂದಲ್ಲ. ವೈದ್ಯರ ಪ್ರಕಾರ ಬೆಳಗ್ಗೆ 9 ಗಂಟೆಯೊಳಗೆ ಬರುವ ಎಳೆ ಬಿಸಿಲಿನಲ್ಲಿ ವಿಟಮಿನ್ ಡಿ ಲಭ್ಯವಾಗಿತ್ತದೆ.