- ಹೊಟ್ಟೆಯ ಭಾಗದಲ್ಲಿರುವ ಅತಿಯಾದ ಕೊಬ್ಬನ್ನು ಇಳಿಸುವುದು ಅತ್ಯಂತ ಕಷ್ಟಕರವಾದ ಕೆಲಸ
- ಕೊಬ್ಬನ್ನು ಶಾಶ್ವತವಾಗಿ ಕಳೆದುಕೊಳ್ಳಲು ಪ್ರಯತ್ನ ಈ ಸಲಹೆಗಳನ್ನು ಪಾಲಿಸಿ
- ಹೊಟ್ಟೆಯಲ್ಲಿ ಹೆಚ್ಚಾದ ಕೊಬ್ಬನ್ನು ಕಡಿಮೆ ಮಾಡುವ ಮೊದಲು 12:12 ಉಪವಾಸ ಮಾಡಿ
High-Fibre Diet : ಹೊಟ್ಟೆಯ ಭಾಗದಲ್ಲಿರುವ ಅತಿಯಾದ ಕೊಬ್ಬನ್ನು ಇಳಿಸುವುದು ಅತ್ಯಂತ ಕಷ್ಟಕರವಾದ ಕೆಲಸ ಎಂದು ನೀವು ಗಮನಿಸಿದ್ದೀರಾ? ಇದು ನೀವು ಸರಿಯಾಗಿ ಊಟ ಮಾಡಿದರು, ವ್ಯಾಯಾಮ ದಿನಚರಿಯನ್ನು ಅಭ್ಯಾಸ ಮಾಡಿದರೂ, ಕೂಡಾ ಬೊಜ್ಜು ಕರಗದೆ ಹಾಗೆ ಉಳಿದುಬಿಡುತ್ತದೆ.
ಈ ರೀತಿಯ ಸಮಸ್ಯೆಯನ್ನು ಹಲವಾರು ಜನರು ಅನುಭವಿಸುತ್ತಾರೆ. ಹಾಗಾಗಿ ನೀವೇನಾದರೂ ಈ ಕೊಬ್ಬನ್ನು ಶಾಶ್ವತವಾಗಿ ಕಳೆದುಕೊಳ್ಳಲು ಪ್ರಯತ್ನ ನಡೆಸಿದರೆ ಹೆಪಟಾಲಜಿಸ್ಟ್ ಡಾ. ಸೌರಭ್ ಸೇಥಿ ಅವರು ಸೂಚಿಸಿದ ಈ 3 ಅತ್ಯುತ್ತಮ ಸಲಹೆಗಳನ್ನು ತಿಳಿಯಿರಿ. ಇದು ಬೊಜ್ಜನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಹೊಟ್ಟೆಯ ಕೊಬ್ಬನ್ನು ಕರಗಿಸಲು ಬೇಕಾದ 3 ಸಲಹೆಗಳು
ಹೊಟ್ಟೆಯಲ್ಲಿ ಹೆಚ್ಚಾದ ಕೊಬ್ಬನ್ನು ಕಡಿಮೆ ಮಾಡುವ ಮೊದಲು 12:12 ಉಪವಾಸ ವೇಳಾಪಟ್ಟಿಯನ್ನು ಅನುಸರಿಸುವ ಮೂಲಕ ಪ್ರಾರಂಭಿಸಬೇಕು ಎಂದು ವೈದ್ಯರು ತಿಳಿಸಿದ್ದಾರೆ. ಇದು ಸೌಮ್ಯ ಆಯ್ಕೆ ಆಗಿದ್ದು, ನೀವು ಚೆನ್ನಾಗಿ ನಿದ್ರೆ ಮಾಡಲು ಸಹಾಯ ಮಾಡುತ್ತದೆ. ಹಾಗೆಯೇ ದೇಹಕ್ಕೆ ಬೇಡವಾದ ಆಹಾರಗಳನ್ನು ಸೇವಿಸುವುದನ್ನು ತಡೆಯುತ್ತದೆ.
ಉಪವಾಸದ ಸಮಯದಲ್ಲಿ ಆದಷ್ಟು ಕಪ್ಪು ಕಾಫಿ, ಹಸಿರು ಚಹಾ, ಕಪ್ಪು ಚಹಾ, ನೀರು, ಆಪಲ್ ಸೈಡರ್ ವಿನೆಗರ್, ನಿಂಬೆ ನೀರು, ಫೆನ್ನೆಲ್ ಅಥವಾ ತುಳಸಿ ನೀರು, ಕ್ಯಾಮೊಮೈಲ್, ಶುಂಠಿ ಚಹಾವನ್ನು ಮಾತ್ರ ಸೇವಿಸುವುದು ಮುಖ್ಯ ಎಂದು ವೈದ್ಯರು ಸೂಚನೆ ನೀಡಿದ್ದಾರೆ.
ಡಾ. ಸೌರಭ್ ಸೇಥಿ ಅವರು ಸೂಚಿಸಿದಂತೆ ಜನರು ಊಟದ ಸಮಯದಲ್ಲಿ ಹೆಚ್ಚಿನ ಫೈಬರ್ ಮತ್ತು ಹೆಚ್ಚಿನ ಪ್ರೋಟೀನ್ ಆಹಾರದತ್ತ ಗಮನಹರಿಸಬೇಕು ಎಂದು ಶಿಫಾರಸ್ಸು ಮಾಡಿದ್ದಾರೆ. ಅವರು ತಿಳಿಸಿದಂತೆ ಹೆಚ್ಚಿನ ಪ್ರೋಟೀನ್ ಆಹಾರಗಳಾದ ಪನೀರ್, ತೋಫು, ಕಡಲೆ, ಕೋಳಿ, ಟರ್ಕಿ ಮತ್ತು ಮೀನು, ಹಣ್ಣು ತರಕಾರಿಗಳನ್ನು ಸೇವಿಸಬೇಕು ಎಂದು ತಿಳಿಸಿದ್ದಾರೆ. ಈ ಸಂಯೋಜನೆಯು ಕೊಬ್ಬು ನಷ್ಟವನ್ನು ಉತ್ತೇಜಿಸುವಾಗ ನಿಮ್ಮನ್ನು ಪೂರ್ಣವಾಗಿ ಮತ್ತು ತೃಪ್ತಿಯಿಂದ ಇರಿಸುವಂತೆ ಮಾಡುತ್ತದೆ ಎಂದು ಡಾ ಸೇಥಿ ತಿಳಿಸಿದ್ದಾರೆ.
ಮಧ್ಯಂತರ ಉಪವಾಸ ಎಂದರೇನು?
ಮಧ್ಯಂತರ ಉಪವಾಸ ಎಂದರೆ, ಉಪವಾಸ ಮತ್ತು ತಿನ್ನುವ ಅವಧಿಗಳ ನಡುವೆ ಪರ್ಯಾಯವಾಗಿ ತಿನ್ನುವ ಆಹಾರ ಪದ್ಧತಿಯಾಗಿದೆ. ಇದು ಆರೋಗ್ಯ ಮತ್ತು ಫಿಟ್ನೆಸ್ನ ಜನಪ್ರಿಯ ವಿಧಾನವಾಗಿದೆ. ಮಧ್ಯಂತರ ಉಪವಾಸವು ನೀವು ಯಾವ ರೀತಿಯ ಆಹಾರನ್ನು ಸೇವಿಸಬೇಕು ಎಂಬುದನ್ನು ಕೇಂದ್ರಿಕರಿಸುವುದಿಲ್ಲ. ಬದಲಾಗಿ, ಇದು ಆಹಾರ ಸೇವನೆಯ ಸಮಯದ ಮಹತ್ವವನ್ನು ಒತ್ತಿಹೇಳುತ್ತದೆ.
ಮಧ್ಯಂತರ ಉಪವಾಸವು ತೂಕ ನಷ್ಟವನ್ನು ಉತ್ತೇಜಿಸಬಹುದೇ?
ಯಾವುದೇ ವ್ಯಕ್ತಿಯು ಆಹಾರವನ್ನು ಸೇವಿಸುವುದನ್ನು ಕಡಿಮೆ ಮಾಡಿದಾಗ ನಿಮಗೆ ಅರಿವಿಲ್ಲದೆಯೇ ಕಡಿಮೆ ಕ್ಯಾಲೋರಿಗಳನ್ನು ಸೇವಿಸಲು ಪ್ರಾರಂಭಿಸುತ್ತೀರಿ. ಇದು ಹಾರ್ಮೋನುಗಳ ಮಟ್ಟವನ್ನು ಸರಿದೂಗಿಸಿ, ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ