ಲೈಫ್‌ಸ್ಟೈಲ್

ಅನ್ನ ತಿನ್ನುವುದು ಆರೋಗ್ಯಕರವೇ.. ಇಲ್ಲವೇ?; ಗೊಂದಲ ಹೋಗಲಾಡಿಸುವ ಮಾಹಿತಿ ಇಲ್ಲಿದೆ

ಭಾರತದಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ 99 ಪ್ರತಿಶತ ಜನರು ತಮ್ಮ ದೈನಂದಿನ ಆಹಾರಪದ್ಧತಿಯಲ್ಲಿ ಅನ್ನ ತಿನ್ನುವುದನ್ನು ರೂಢಿಸಿಕೊಂಡಿರುತ್ತಾರೆ. ಊಟದಲ್ಲಿ ಅನ್ನ ಇಲ್ಲದಿದ್ದರೆ ಅದು ಅಪೂರ್ಣ ಎಂದೇ ಅರ್ಥ. ಕೆಲವರು ಅಕ್ಕಿ ಲಘು ಆಹಾರ ಎಂದು ನಂಬಿದರೆ, ಮತ್ತೆ ಕೆಲವರು ತೂಕವನ್ನು ಹೆಚ್ಚಿಸುತ್ತದೆ ಎನ್ನುತ್ತಾರೆ. ಅನ್ನ ತಿನ್ನುವುದು ಆರೋಗ್ಯಕರವೆಂದು ಪರಿಗಣಿಸದಿರಲು ಇದು ಕಾರಣವಾಗಿರಬಹದು. ಆದರೆ ಅನ್ನ ತಿನ್ನುವುದರಿಂದ ನಿಜವಾಗಿಯೂ ಆರೋಗ್ಯಕ್ಕೆ ಹಾನಿಯಾಗುತ್ತದೆಯೇ? ಈ ಪ್ರಶ್ನೆಗೆ ಇನ್ನು ಉತ್ತರ ಸಿಕ್ಕಿಲ್ಲ. ಹಾಗಾದ್ರೆ ಅನ್ನ ತಿನ್ನುವುದರಿಂದ ಏನೆಲ್ಲಾ ಪ್ರಯೋಜನ ಇದೆ ನಿಮಗೆ ಗೊತ್ತೆ? ಏನೆಲ್ಲಾ ಪ್ರಯೋಜನವಾಗಲಿದೆ ಎಂಬುದರ ಮಾಹಿತಿ ಇಲ್ಲಿ ನೀಡಲಾಗಿದೆ.

  • ಕಾರ್ಬೋಹೈಡ್ರೇಟ್‌ನ ಉತ್ತಮ ಮೂಲ: ಅನ್ನ ತಿನ್ನುವುದರಿಂದ ದೇಹದಲ್ಲಿನ ಕಾರ್ಬೋಹೈಡ್ರೇಟ್ ಮತ್ತು ವಿಟಮಿನ್ ಬಿ ಕೊರತೆಯನ್ನು ಪೂರೈಸಲು ಸಹಕಾರಿ. ಇದು ವಿಟಮಿನ್ ಬಿ ಮತ್ತು ಉತ್ಕರ್ಷಣ ನಿರೋಧಕಗಳಿಂದ ಕೂಡಿದೆ.
  • ಅಕ್ಕಿ ಒಂದು ಪ್ರಿಬಯಾಟಿಕ್: ಅಕ್ಕಿ ಒಂದು ಪ್ರಿಬಯಾಟಿಕ್ ಆಗಿದೆ. ಇದು ನಿಮ್ಮ ಹೊಟ್ಟೆಯನ್ನು ತುಂಬುವುದಲ್ಲದೆ, ನಿಮ್ಮಲ್ಲಿರುವ ಸೂಕ್ಷ್ಮಜೀವಿಗಳ ಪರಿಸರ ವ್ಯವಸ್ಥೆಯನ್ನು ಸಹ ನೋಡಿಕೊಳ್ಳುತ್ತದೆ. ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಕಾರಿ: ಅಕ್ಕಿಯಲ್ಲಿ ಪಿಷ್ಟವಿದೆ ಮತ್ತು ಅದರಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ ಕೂಡ ಹೆಚ್ಚಿರುತ್ತದೆ ಎಂದು ಕೇಳಿರಬಹುದು. ಆದರೆ ಅನ್ನವನ್ನು ತರಕಾರಿಗಳ ಜತೆಗೆ ತಿಂದರೆ ಅದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸುವುದಿಲ್ಲ ಎಂಬುದು ಸತ್ಯ. ನೀವು ಮಧುಮೇಹಿಗಳಾಗಿದ್ದರೆ ವೈದ್ಯರನ್ನು ಕೇಳಿದ ನಂತರವೇ ಅನ್ನವನ್ನು ಸೇವಿಸಿ.
  • ಜೀರ್ಣಕ್ರಿಯೆ ಸುಲಭ: ಅನ್ನವನ್ನು ಮಾಡುವುದು ಎಷ್ಟು ಸುಲಭವೋ ಅಷ್ಟೆ ಸುಲಭವಾಗಿ ಹೊಟ್ಟೆಯು ಅದನ್ನು ಜೀರ್ಣಿಸಿಕೊಳ್ಳುತ್ತದೆ. ಬಿಳಿ ಅಕ್ಕಿಯಲ್ಲಿ ಫೈಟಿಕ್ ಆಮ್ಲ ಎಂಬ ಸಂಯುಕ್ತ ಇರುವುದಿಲ್ಲ. ಆದ್ದರಿಂದ ಇದು ಜೀರ್ಣಕಾರಿ ಸಮಸ್ಯೆ ಉಂಟುಮಾಡುತ್ತದೆ. ಊಟಕ್ಕೆ ತಡವಾಗಿ ಬರುವ ದಿನಗಳಲ್ಲಿ ಅನ್ನವನ್ನು ಬೇಳೆಕಾಳುಗಳ ಜತೆ ಮಾತ್ರ ಸೇವಿಸಬೇಕು ಎಂದು ಪೌಷ್ಟಿಕತಜ್ಞರು ಶಿಫಾರಸು ಮಾಡುತ್ತಾರೆ. ಇದು ನಿಮ್ಮ ಹೊಟ್ಟೆಯನ್ನು ಹಗುರವಾಗಿರಿಸುವುದು ಮಾತ್ರವಲ್ಲದೆ, ಚೆನ್ನಾಗಿ ನಿದ್ರಿಸಲು ಸಹಕಾರಿಯಾಗಿದೆ.
  • ಕರುಳನ್ನು ಆರೋಗ್ಯವಾಗಿರಿಸುತ್ತದೆ: ರಿಫೈನ್ಡ್ ರೈಸ್ ತಿಂದರು ಅದರಿಂದ ಉತ್ತಮ ಪ್ರಮಾಣದ ಫೈಬರ್ ಸಿಗುತ್ತದೆ. ಇದರಿಂದಾಗಿ ನಿಮ್ಮ ಕರುಳಿನಲ್ಲಿ ಯಾವುದೇ ಊತವಿರುವುದಿಲ್ಲ ಮತ್ತು ಅದರ ಆರೋಗ್ಯವು ಸಹ ಉತ್ತೇಜಿಸುತ್ತದೆ. ಆದ್ದರಿಂದಲೇ ಅತಿಸಾರ ಅಥವಾ ಹೊಟ್ಟೆನೋವಿನ ಸಂದರ್ಭದಲ್ಲಿ ಬೇಯಿಸಿದ ಅನ್ನವನ್ನು ತಿನ್ನಲು ಸಲಹೆ ನೀಡಲಾಗುತ್ತದೆ.
  • ಅಂಟು-ಮುಕ್ತ: ಅಕ್ಕಿ ಹೈಪೋಲಾರ್ಜನಿಕ್ ಆಹಾರವಾಗಿದೆ. ವಿಶೇಷವಾಗಿ ಅಂಟು-ಮುಕ್ತ ಆಯ್ಕೆಯನ್ನು ಬಯಸುವರು ಅಕ್ಕಿಯಿಂದ ಹಿಟ್ಟು, ನೂಡಲ್ಸ್ ಮತ್ತು ಬ್ರೆಡ್​​ ಅನ್ನು ಸಹ ಮಾಡಬಹುದು.
  • ಪೂರ್ಣ ಶಕ್ತಿ ಲಭ್ಯ: ಅನ್ನವು ಕಾರ್ಬೋಹೈಡ್ರೇಟ್ ಭರಿತ ಆಹಾರವಾಗಿರುವುದರಿಂದ, ಅದನ್ನು ತಿನ್ನುವುದರಿಂದ ನಿಮಗೆ ತ್ವರಿತ ಶಕ್ತಿ ಬರುತ್ತದೆ.