1) ರಾತ್ರಿ ಊಟವನ್ನು ಹೆಚ್ಚು ಮಾಡುವುದರಿಂದ ಮತ್ತು ತಡವಾಗಿ ಉಂಡಷ್ಟು ತೂಕ ಹೆಚ್ಚಾಗುವುದು.
2) ಫಾಸ್ಟ್ಫುಡ್ನಲ್ಲಿ ಕೊಬ್ಬು ಮತ್ತು ಉಪ್ಪಿನ ಅಂಶ ಗಣನೀಯವಾಗಿ ಹೆಚ್ಚಿರುತ್ತದೆ.
ನಿರಂತರ ಜಂಕ್ಫುಡ್ ಸೇವನೆಯಿಂದ ಸೊಂಟದ ಸುತ್ತಳತೆ ಹಲವು ತಿಂಗಳಲ್ಲಿಯೇ 2-3 ಇಂಚು ಬೆಳೆಯುತ್ತದೆ. ಹುಟ್ಟುವ ಕಾಲಕ್ಕೆ ಬಹಳ ದುಂಡಾಗಿ, ಮುದ್ದಾಗಿ ಕಾಣುವ ಕೂಸುಗಳಲ್ಲಿ ವಯಸ್ಸು ಆದಂತೆ ಬೊಜ್ಜು ಶೇಖರಣೆಗೊಳ್ಳುವುದು.
ನಿರಂತರ ಹೋಟೆಲ್ ಊಟದಿಂದ ಬೊಜ್ಜು ಕಡಿಮೆ ಮಾಡುವುದು ಕಠಿಣ. ‘34’ಕ್ಕಿಂತ ಹೆಚ್ಚು (BMI) ಇರುವವರು ಬ್ಯಾರಿಯಾಟ್ರಿಕ್ ಸರ್ಜರಿ (bariatric surgery) ಮುಖಾಂತರ ಇಪ್ಪತ್ತು ಕಿಲೋ ತೂಕ ಇಳಿಸಬಹುದು. ಅತಿಯಾದ ಕೊಬ್ಬನ್ನು ಶಸ್ತ್ರಚಿಕಿತ್ಸೆಯಿಂದ ಕಡಿಮೆ ಮಾಡಿಕೊಳ್ಳುವವರು ಭಾರತದಲ್ಲಿ ಸಾಕಷ್ಟು ಮುಂದುವರಿದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು.
ಆದರೆ, ‘ಬ್ಯಾರಿಯಾಟ್ರಿಕ್’ ಸರ್ಜರಿಯನ್ನು ಮಾಡಿಸುವ ಮುನ್ನ ಆಹಾರ ಪಥ್ಯ, ಜೀವನಶೈಲಿ ಬದಲಾವಣೆ ಇವೆಲ್ಲವನ್ನೂ ಗಂಭೀರವಾಗಿ ಪರಿಗಣಿಸಿ ತೂಕ ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸಬೇಕು. ಹಲವಾರು ಮಾತ್ರೆಗಳು ಲಭ್ಯವಿದ್ದರೂ ಇವುಗಳೊಂದಿಗೆ ಆಹಾರ ಪಥ್ಯ ಮಾಡದಿದ್ದಲ್ಲಿ ಅವುಗಳ ಪ್ರಭಾವ ಕಂಡುಬರುವುದಿಲ್ಲ. ಒಮ್ಮೆ ಕಡಿಮೆ ತೂಕವನ್ನು ಅಲಕ್ಷಿಸಿದಲ್ಲಿ ಹಲವಾರು ತಿಂಗಳುಗಳಲ್ಲಿಯೇ ‘ಮುಂಚಿನ’ ತೂಕಕ್ಕೆ ಬರುವುದು.
ಹೆಣ್ಣುಮಕ್ಕಳಲ್ಲಿ ಜೀರೋ ಸೈಜ್ (zero size) ಮತ್ತು ಗಂಡುಮಕ್ಕಳಲ್ಲಿ ಸಿಕ್ಸ್ ಆಬ್ಸ್ 6 abs abdomen) ಹೊಟ್ಟೆ ಇರಬೇಕೆಂದು ಚಿತ್ರತಾರೆಯರನ್ನು ನೋಡಿ ಅವರಂತೆಯೇ ತಾವು ಇರಬೇಕೆಂದು ಇಚ್ಛಿಸಿದಲ್ಲಿ ಬೊಜ್ಜು ನಿಯಂತ್ರಣವನ್ನು ಒಂದು ತಪಸ್ಸೆಂದು ಅನುಸರಿಸಿ. ತೂಕ ಕಡಿಮೆ ಮಾಡುವವರಿಗಾಗಿಯೇ ಆಹಾರತಜ್ಞರು ‘800’ರಿಂದ ‘1200’ ಕ್ಯಾಲೋರಿಯವರೆಗೆ ಯಾದಿ ಪಟ್ಟಿಯನ್ನು ತಯಾರಿಸಿರುತ್ತಾರೆ. ನಿಯತ ವ್ಯಾಯಾಮದಿಂದ ಹೆಚ್ಚಿನ ಕ್ಯಾಲೋರಿ ವ್ಯಯಿಸಿದರೂ 40 ವರ್ಷ ಮೇಲ್ಪಟ್ಟವರು ಜಿಮ್ ಸೇರಿಕೊಳ್ಳುವ ಮೊದಲು ತಜ್ಞ ವೈದ್ಯರಿಂದ ಪರೀಕ್ಷಿಸಿಕೊಳ್ಳಬೇಕು.
ತೀವ್ರ ನಡಿಗೆ, ಸೈಕಲ್ ತುಳಿಯುವುದು, ಟೆನ್ನಿಸ್ ಆಡುವುದು, ಈಜುವುದು, ಸ್ಕಿಪಿಂಗ್ ಮಾಡುವುದು ಮುಂತಾದ ದೈಹಿಕ ವ್ಯಾಯಾಮ ಆರಿಸಿಕೊಳ್ಳಬಹುದು. ಇತ್ತೀಚೆಗೆ ಯುಟ್ಯೂಬ್ನಲ್ಲಿ ಸಂಗೀತದೊಂದಿಗೆ ಮಾಡುವ ವ್ಯಾಯಾಮಗಳು ಯುವಕರಲ್ಲಿ ಹೆಚ್ಚು ಪ್ರಚಲಿತದಲ್ಲಿವೆ.