ಲೈಫ್‌ಸ್ಟೈಲ್

ತಿಳಿ ಸಾರನ್ನ ಮೊದಲನೇ ಸಲ ಮಾಡಿದ್ದು ಯಾರು ಗೊತ್ತಾ?!

ಸಸ್ಯಾಹಾರಿ ಊಟವೆಂದ ಮೇಲೆ ಅಲ್ಲಿ ರಸಂ ಇಲ್ಲದೆ ಇದ್ದರೆ ಅದೊಂದು ಪರಿಪೂರ್ಣ ಊಟವೆಂದು ಅನಿಸದು. ಅದರಲ್ಲೂ ದಕ್ಷಿಣ ಭಾರತದಲ್ಲಿ ಸಿಗುವಂತಹ ರಸಂಗೆ ಸ್ಪರ್ಧೆಯೇ ಇಲ್ಲ. ಅದನ್ನು ಕುಡಿದರೆ ಅದು ದೇಹ ಹಾಗೂ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅನಾರೋಗ್ಯಕಾರಿ ಕೆಲವೊಂದು ಸೂಪ್ ಗಳನ್ನು ಕುಡಿಯುವ ಬದಲು ರಸಂ ಕುಡಿದರೆ ಅದು ತುಂಬಾ ಲಾಭಕಾರಿ.

ಮಧ್ಯಾಹ್ನ ಹಾಗೂ ರಾತ್ರಿ ಊಟದ ವೇಳೆ ರಸಂ ಬಳಸಬಹುದು. ಮಳೆಗಾಲದಲ್ಲಿ ಬಿಸಿ ಬಿಸಿಯಾದ ರಸಂ ಕುಡಿದರೆ ಆಗ ಯಾವುದೇ ರೀತಿಯ ಸೋಂಕಿನ ಸಮಸ್ಯೆಗಳು ಕಾಡದು. ರಸಂ ತಯಾರಿಸಲು ಟೊಮೆಟೊ, ಹುಣಸೆ ಹುಳಿ ಮತ್ತು ಇತರ ಕೆಲವು ಸಾಂಬಾರ ಪದಾರ್ಥಗಳಾಗಿರುವಂತಹ ಕರಿಮೆಣಸು, ಜೀರಿಗೆ ಇತ್ಯಾದಿಗಳನ್ನು ಬಳಸಲಾಗುತ್ತದೆ.

ಹಾಗಿದ್ರೆ ಈ ತಿಳಿಸಾರನ್ನ ಮೊದಲು ಮಾಡಿದ್ದು ಯಾರು ಗೊತ್ತಾ?!

ತಿಳಿ ಸಾರನ್ನ ಮೊದಲನೇ ಸಲ ಮಾಡಿದ್ದು ಯಾರು ಗೊತ್ತಾ ನಿಮಗೆ. ಒಂದು ಕಥೆ ಹೇಳೋ ಪ್ರಕಾರ 16ನೇ ಶತಮಾನದಲ್ಲಿ ಮಥುರೈನಲ್ಲಿ ವಿಜಯನಗರ ಸಾಮ್ರಾಜ್ಯದ ಪಥನದ ನಂತರ 1947-56ರವರೆಗೆ ಸೌರಾಷ್ಟ್ರರ ಆಳ್ವಿಕೆ ಶುರುವಾಗುತ್ತೆ. ಇವರು ನಮ್ಮ ದಕ್ಷಿಣ ಭಾರತದವರಲ್ಲ ಗಜಿನಿ ಸೋಮಾಥಪುರದ ಮೇಲೆ ದಾಳಿ ಮಾಡಿದಾಗಿನಿಂದ, ಅಲ್ಲಿಂದ ಈ ಪ್ರದೇಶಕ್ಕೆ ವಲಸೆ ಬಂದವರು.


ಇಲ್ಲಿ ಸಿಗುವಂತಹ ಹುಣಸೆ ಹಣ್ಣು ಮೆಣಸು ಇದನ್ನೆಲ್ಲ ಬಳಸಿ, ಸೂಪ್​ ತರದ ಒಂದು ಅಡುಗೆಯನ್ನ ತಯಾರು ಮಾಡ್ತಾರೆ. ಅದನ್ನ ರಸ ಅಂತ ಕರೀತಾರೆ. ಸಂಸ್ಕೃತದ ರಸ ಎಂಬ ಪದದ ಅರ್ಥ ಇಂಗ್ಲೀಷನಲ್ಲಿ ಜ್ಯೂಸ್​ ಎಕ್ಸಟ್ರ್ಯಾಕ್ಟ್​​. ಈ ಸಂಸ್ಕೃತದ ರಸಾನೇ ಮುಂದೆ ತಮಿಳಿ​ನಲ್ಲಿ ರಸಂ ಆಯ್ತು. ತೆಲುಗುವಿನಲ್ಲಿ ಚಾರು ಆಯ್ತು ಹಾಗು ನಮ್ಮ ಕನ್ನಡದಲ್ಲಿ ತಿಳಿಸಾರಾಯ್ತು.


ಇನ್ನೊಂದು ಕಥೆ ಹೇಳೋ ಪ್ರಕಾರ, ಮಥುರೈನಲ್ಲಿ ರಾಜ ಓರ್ವನ ಮಗನಿಗೆ ಆರೋಗ್ಯ ಸಮಸ್ಯೆಯಿಂದ ಊಟವೇ ಸೇರುತ್ತಿರಲಿಲ್ಲವಂತೆ. ಆಗ ಮಹಾರಾಜ ಯಾರು ರುಚಿಯಾಗಿರುವಂತಹ ಹಾಗು ಅವನು ಇಷ್ಟ ಪಡುವಂತಹ ಒಂದು ಅಡುಗೆಯನ್ನ ತಯಾರು ಮಾಡ್ತಾರೋ ಅವರಿಗೆ ವಿಶೇಷವಾದ ಬಹುಮಾನ ಕೊಡ್ತೀನಿ ಅಂತಾ ಘೋಷಣೆ ಮಾಡುತ್ತಾನಂತೆ. ಆಗ ಮಥುರೈನ ಅಡುಗೆ ಭಟ್ಟರಾಗಿದ್ದಂತಹ ಕರುಣಾಸ್​ ಅನ್ನುವವರು ಹುಳಿಹುಳಿಯಾಗಿ ರುಚಿರುಚಿಯಾಗಿ ಆ ಹುಡುಗನಿಗೆ ಬಾಯಿಗೆ ಹಿತವಾಗಿರುವಂತಹ ಒಂದು ಅಡುಗೆಯನ್ನ ತಯಾರು ಮಾಡ್ತಾರೆ ಇದೇನೆ ತಿಳಿ ಸಾರು.


ಹೀಗೆ ತಿಳಿ ಸಾರನ್ನ ಮೊಟ್ಟ ಮೊದಲಿಗೆ ಮಾಡಲಾಯ್ತು ಎಂದು ಇತಿಹಾಸದಲ್ಲಿ ಹೇಳಲಾಗಿದೆ. ಒಟ್ಟಾರೆಯಾಗಿ ರುಚಿಯೊಂದಿಗೆ ಆರೋಗ್ಯವನ್ನು ನೀಡುವಂತಹ ಆಯುರ್ವೇದಿಕ್ ಆಹಾರವೆಂದರೆ ಅದು ರಸಂ ಎಂದು ಹೇಳಬಹುದು.