ಮಾಡುವ ವಿಧಾನ ಬೀಟ್ ರೂಟ್ ಸಿಪ್ಪೆ ತೆಗೆದು ಸಣ್ಣ ಸಣ್ಣ ತುಂಡುಗಳಾಗಿ ಹೆಚ್ಚಿಕೊಳ್ಳಿ. ಒಂದು ಮಿಕ್ಸಿ ಜಾರಿನಲ್ಲಿ ಬೀಟ್ ರೂಟ್ ಹೋಳುಗಳು ,ಶುಂಠಿ, ಹಸಿಮೆಣಸು ಇವುಗಳನ್ನು ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ ನಂತರ ಈ ರುಬ್ಬಿದ ಮಿಶ್ರಣವನ್ನು ಅರ್ಧ ಲೋಟ ನೀರು ಹಾಕಿ ಜರಡಿ ಹಿಡಿದು ಸೋಸಿಕೊಳ್ಳಿ. ಸೋಸಿದ ಬೀಟ್ ರೂಟ್ ರಸಕ್ಕೆ ಉಪ್ಪು ,ಇಂಗು ಹಾಗೂ ಮಜ್ಜಿಗೆ ಹಾಕಿ, ಬೇಕಿದ್ದರೆ 1 ಚಮಚ ಸಕ್ಕರೆ ಹಾಕಿ ನಾಲ್ಕು ತುಂಡು ಐಸ್ ಕ್ಯೂಬ್ ಹಾಕಿದರೆ ರುಚಿರುಚಿಯಾದ ಬೀಟ್ ರೂಟ್ ಲಸ್ಸಿ ಸವಿಯಲು ಸಿದ್ಧವಾಗುತ್ತದೆ.
ಮಾಡುವ ವಿಧಾನ; ಮೊದಲು ಬೀಟ್ ರೂಟನ್ನು ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿ ಕುಕ್ಕರ್ ನಲ್ಲಿ ಬೇಯಿಸಿಕೊಳ್ಳಿ.ನಂತರ ಬೇಯಿಸಿದ ಬೀಟ್ ರೂಟನ್ನು ನೀರು ಹಾಕದೆ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ.ನಂತರ ಗೋದಿಹಿಟ್ಟಿಗೆ ರುಬ್ಬಿದ ಮಿಶ್ರಣ ,2ಚಮಚ ಎಣ್ಣೆ ಮತ್ತು ಉಳಿದೆಲ್ಲ ಸಾಮಗ್ರಿಗಳನ್ನು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಿಸಿ 1/2 ಗಂಟೆಗಳ ಕಾಲ ನೆನೆಯಲು ಬಿಡಿ.ಇದರ ಚಿಕ್ಕ ಚಿಕ್ಕ ಉಂಡೆ ಮಾಡಿ ಚಪಾತಿಯಂತೆ ಲಟ್ಟಿಸಿ ಕಾವಲಿಯ ಮೇಲೆ ಎಣ್ಣೆ ಹಾಕಿ ಎರಡೂ ಬದಿ ಕಾಯಿಸಿದರೆ ಆರೋಗ್ಯಕರ ಮತ್ತು ರುಚಿಕರವಾದ ಬೀಟ್ ರೂಟ್ ಪರೋಟ ತಯಾರು.
ಮಾಡುವ ವಿಧಾನ: ಮೊದಲು ಬೀಟ್ ರೂಟನ್ನು ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿ ಕುಕ್ಕರ್ ನಲ್ಲಿ ಬೇಯಿಸಿ.ಇದು ತಣ್ಣಗಾದ ನಂತರ ಇದಕ್ಕೆ ಕಾಯಿತುರಿ ಹಾಕಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ರುಬ್ಬಿದ ಮಿಶ್ರಣಕ್ಕೆ ಸಾರಿನ ಹದ ಬರುವವರೆಗೆ ನೀರು ಹಾಕಿ ಇದಕ್ಕೆ ಉಪ್ಪು ,ಸಾರಿನಪುಡಿ, ಬೆಲ್ಲ, ನೆನೆಸಿದ ಹುಣಿಸೆಹಣ್ಣಿನ ರಸ,ಕೊತ್ತಂಬರಿ ಸೊಪ್ಪುಎಲ್ಲವನ್ನು ಹಾಕಿ ಚೆನ್ನಾಗಿ ಕುದಿಸಿರಿ. ನಂತರ ಬೆಳ್ಳುಳ್ಳಿ ಒಗ್ಗರಣೆ ಕೊಟ್ಟರೆ ರುಚಿಕರವಾದ ಬೀಟ್ ರೂಟ್ ಸಾರು ಸಿದ್ಧ.
ಮಾಡುವ ವಿಧಾನ: ಮೊದಲು ಬೀಟ್ ರೂಟ್ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿ ಕುಕ್ಕರ್ ನಲ್ಲಿ ಚೆನ್ನಾಗಿ ಬೇಯಿಸಿಕೊಳ್ಳಿ.ಬೇಯಿಸಿದ ಹೋಳುಗಳು ತಣ್ಣಗಾದ ಮೇಲೆ ಇದಕ್ಕೆ ಶುಂಠಿ ಹಾಕಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ಈ ಮಿಶ್ರಣಕ್ಕೆ ನೀರು ಹಾಕಿ ಕರಡಿ ಜರಡಿ ಹಿಡಿಯಿರಿ.ಹೀಗೆ ಸೋಸಿದ್ದಕ್ಕೆ ಸಕ್ಕರೆ ಹಾಕಿ ಕರಡಿ ಫ್ರಿಜ್ ನಲ್ಲಿಟ್ಟು ಅರ್ಧ ಗಂಟೆ ಬಿಟ್ಟರೆ ರುಚಿಕರವಾದ ಬೀಟ್ ರೂಟ್ ಜೂಸ್ ರೆಡಿ. ಬೀಟ್ರೂಟ್ ಹೋಳುಗಳನ್ನು ಹಸಿಯಾಗಿಯೂ ರುಬ್ಬಿಕೊಂಡು ಜ್ಯೂಸ್ ಅನ್ನು ತಯಾರಿಸಬಹುದು.
ಮಾಡುವ ವಿಧಾನ; ಬೀಟ್ ರೂಟ್ ಹೋಳುಗಳನ್ನು ಮತ್ತು ಹಸಿಮೆಣಸನ್ನು ಕುಕ್ಕರ್ ನಲ್ಲಿ ಸ್ವಲ್ಪ ನೀರು ಹಾಕಿ ಚೆನ್ನಾಗಿ ಬೇಯಿಸಿ.ನಂತರ ಇದಕ್ಕೆ ಕಾಯಿತುರಿ,ಹುಣಿಸೆಹಣ್ಣು,ಉಪ್ಪು ಸೇರಿಸಿ ,ಬೇಕಾದಷ್ಟು ನೀರು ಹಾಕಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ಒಂದು ಒಗ್ಗರಣೆ ಸೌಟಿನಲ್ಲಿ 2 ಚಮಚ ಎಣ್ಣೆ ಸಾಸಿವೆ ,ಉದ್ದಿನಬೇಳೆ, ಕರಿಬೇವು ,ಒಣಮೆಣಸಿನ ತುಂಡು ಹಾಕಿ ಒಗ್ಗರಣೆ ತಯಾರಿಸಿ, ಚಟ್ನಿಗೆ ಒಗ್ಗರಣೆ ಹಾಕಿ. ಇದು ದೋಸೆ,ಇಡ್ಲಿ, ಮತ್ತು ಅನ್ನದ ಜೊತೆ ತಿನ್ನಲು ರುಚಿಯಾಗಿರುತ್ತದೆ.
ಸವಿತಾ ಮಾಧವ ಶಾಸ್ತ್ರಿ