ಆರೋಗ್ಯ

ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ ​ಬೆಂಡೆಕಾಯಿ ನೀರು; ಕರುಳಿನ ಆರೋಗ್ಯ, ಮಧುಮೇಹಿಗಳಿಗೆ ಅತ್ಯುತ್ತಮ, ತಯಾರಿಸುವುದು ಹೇಗೆ?..Health Tips

  • ನೀರಿನಲ್ಲಿ ನೆನಸಿಟ್ಟ ಬೆಂಡೆಕಾಯಿ ನೀರನ್ನು, ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಸಿಗುವ ಲಾಭಗಳೇನು?.

  • ಕರುಳಿನ ಆರೋಗ್ಯ, ಜೀರ್ಣಕ್ರಿಯೆ, ಮಲಬದ್ಧತೆ ನಿವಾರಣೆಗೆ ಸಹಾಯ ಮಾಡುತ್ತದೆ ಬೆಂಡೆಯಲ್ಲಿರುವ ನಾರಿನಾಂಶ.

  • ಬೆಂಡೆಕಾಯಿಯಲ್ಲಿರುವ ನಾರಿನಾಂಶವು ಪರೋಕ್ಷವಾಗಿ ತೂಕ ಇಳಿಕೆಗೆ ಸ್ಪಂದಿಸುತ್ತದೆ.

Drink Okra Water Every Day: ಇತ್ತೀಚೆಗೆ ಇನ್​ಸ್ಟಾಗ್ರಾಮ್​ನಲ್ಲಿ ಆರೋಗ್ಯದ ಬಗ್ಗೆ ರೀಲ್ಸ್​​ಗಳು ಹೆಚ್ಚಾಗುತ್ತಿದೆ. ಶುಂಠಿ, ಲವಂಗ, ಚಕ್ಕೆ, ಬೆಟ್ಟದ ನೆಲ್ಲಿಕಾಯಿ ಇವನ್ನು ನೀರಿನಲ್ಲಿ ಹಾಕಿ ಕುಡಿಯುವುದರಿಂದ ಆರೋಗ್ಯ ಲಾಭ ದಕ್ಕುತ್ತದೆ ಎಂದು ನುರಿತ ವೈದ್ಯರು ತಮ್ಮ ವಿಡಿಯೋದಲ್ಲಿ ಮಾಹಿತಿ ಹಂಚಿಕೊಳ್ಳುತ್ತಾರೆ. ಅದರಂತೆ ಬೆಂಡೆಕಾಯಿಯ ತಿರುಳನ್ನು ನೀರಿನಲ್ಲಿ ನೆನೆಸಿ ಕುಡಿಯುವದರಿಂದ ಏನೆಲ್ಲ ಲಾಭ ಸಿಗುತ್ತದೆ ಎನ್ನುವುದನ್ನು ಇಂದು ತಿಳಿದುಕೊಳ್ಳೋಣ

ವಿಟಮಿನ್ ಎ, ಸಿ ಮತ್ತು ಕೆ, ಫೋಲೇಟ್ ಮತ್ತು ಮೆಗ್ನೀಸಿಯಮ್‌ನಿಂದ ತುಂಬಿರುವ ಪೌಷ್ಟಿಕ-ಸಮೃದ್ಧ ಹೊಂದಿರುವ ತರಕಾರಿ ಎಂದರೆ, ಅದು ಬೆಂಡೆಕಾಯಿ ಇದು ಕರುಳಿನ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ. ಇದರಲ್ಲಿರುವ ನಾರಿನಾಂಶವು ಉತ್ತಮ ಜೀರ್ಣಕ್ರಿಯೆಗೆ ಪ್ರೇರೇಪಿಸುತ್ತದೆ.

ಬೆಂಡೆಕಾಯಿಯ ಪ್ರಯೋಜನವಿದು

ಬೆಂಡೆಕಾಯಿಯ ತಿರುಳನ್ನು ನೀರಿನಲ್ಲಿ ನೆನೆಸಿದಾಗ ಅದರಲ್ಲಿರುವ ಲೋಳೆ ಬಿಟ್ಟುಕೊಂಡು ದಪ್ಪ ಜೆಲ್​ ಆಗಿ ಕನ್ವರ್ಟ್​ ಆಗುತ್ತದೆ. ಜೆಲ್​​ ತರಹ ನಾರು ನಿಮ್ಮ ದೇಹಕ್ಕೆ ಒಕ್ಕಾಗ ಕೆಲವು ಸೌಮ್ಯ ಪ್ರಯೋಜನಗಳನ್ನು ನೀಡಬಹುದು.

ಅಧಿಕ ರಕ್ತದ ಸಕ್ಕರೆ

ರಕ್ತದಲ್ಲಿ ಗ್ಲೂಕೋಸ್​ ಮಟ್ಟ ಸಾಮಾನ್ಯಕ್ಕಿಂತ ಹೆಚಾಗುವುದು. ಇದು ಸಾಮಾನ್ಯವಾಗಿ ಮಧುಮೇಹಿಗಳಲ್ಲಿ ಕಂಡು ಬರುತ್ತದೆ. ನೀರನ್ನು ಬೆರೆತ ಬೆಂಡೆಕಾಯಿ ಲೋಳೆಯು ಜೀರ್ಣಾಂಗದಲ್ಲಿ ಸಕ್ಕರೆ ಹೀರಿಕೊಳ್ಳುವುದನ್ನು ನಿಧಾನಗೊಳಿಸುತ್ತದೆ. ಊಟದ ನಂತರದ ರಕ್ತದಲ್ಲಿನ ಗ್ಲೂಕೋಸ್ ಸ್ಪೈಕ್‌ಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಟೈಪ್​2 ಮಧುಮೇಹಿಗಳಿಗೆ ಬೆಂಡೆಕಾಯಿ ಅತ್ಯುತ್ತಮ ತರಕಾರಿ.

ತೂಕ ಇಳಿಕೆಗೆ ಪರೋಕ್ಷವಾಗಿ ಬೆಂಬಲ

ಬೆಂಡೆಕಾಯಿ ಮುಂಜಾನೆ ಕುಡಿಯುವುದರಿಂದ ಇದರಲ್ಲಿರುವ ನಾರಿನಾಂಶವು ಹೊಟ್ಟೆ ತುಂಬಿದಂತೆ ಮಾಡುತ್ತದೆ.ಹಸಿವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಆ ಮೂಲಕ ನೀವು ಹಸಿವಾದಾಗೆಲ್ಲ ಸೇವಿಸುವ ಅನಗತ್ಯ ಆಹಾರವನ್ನು ತಿನ್ನುವುದನ್ನು ತಪ್ಪಿಸುತ್ತೀರಿ.

ದೇಹಕ್ಕೆ ಬೇಕಾಗುವಷ್ಟು ನೀರು ಕುಡಿಯಲು ಸಹಾಯ

ಬೆಳಗೆದ್ದ ತಕ್ಷಣ ಬೆಂಡೆಕಾಯಿ ನೀರು ಕುಡಿಯುವುದರಿಂದ ಆ ದಿನ ಹೆಚ್ಚು ನೀರು ಕುಡಿಯಲು ಸಹಾಯ ಮಾಡುತ್ತದೆ. ಇದು ದೇಹಕ್ಕೆ ಫಾಲಿಫಿನಾಲ್​​, ವಿಟಮಿನ್​ ಸಿ ಹಾಗೂ ಖನಿಜಗಳನ್ನು ಅಲ್ಪ ಪ್ರಮಾಣದಲ್ಲಿ ನೀಡುತ್ತದೆ.

ಜೀರ್ಣಕ್ರಿಯೆಗೆ ಬೆಂಡೆಕಾಯಿ ನೀರು

ನೀರಿನಲ್ಲಿ ನೆನಸಿಟ್ಟ ಬೆಂಡೆಕಾಯಿಯಲ್ಲಿ ಉಂಟಾದ ಲೋಳೆಯಲ್ಲಿರುವ ನಾರಿನಾಂಶವು ಜೀರ್ಣಕ್ರಿಯೆಗೆ ಬೆಂಬಲ ನೀಡುತ್ತದೆ. ಕರಳು ಚಲನೆಗೆ ಸಹಕರಿಸುತ್ತದೆ. ಇದು ಮಲಬದ್ಧತೆ ನಿವಾರಣೆಗೆ ಸಹಕರಿಸಿ..ಸರಾಗವಾದ ಮಲವಿಸರ್ಜನೆಗೆ ಸಹಾಯ ಮಾಡುತ್ತದೆ ಎನ್ನುತ್ತಾರೆ ವೈದ್ಯರು.

ಹೆಚ್ಚಿನ ನಾರಿನಾಂಶದಿಂದ ಹೊಟ್ಟೆ ಉಬ್ಬುವ ಸಮಸ್ಯೆ ಕಾಣಿಸಿಕೊಂಡರೆ, ಮೆಟ್‌ಫಾರ್ಮಿನ್ ಅಥವಾ ಇನ್ಸುಲಿನ್‌ನಂತಹ ಔಷಧ ತೆಗೆದುಕೊಳ್ಳುತ್ತಿದ್ದರೆ, ಬೆಂಡೆಕಾಯಿ ನೀರನ್ನು ಸೇವಿಸುವ ಮುನ್ನ ನಿಮ್ಮ ವೈದ್ಯರ ಸಲಹೆ ಪಡೆದುಕೊಳ್ಳೋದು ಮುಖ್ಯ.

ಬೆಂಡೆಕಾಯಿ ನೀರು ತಯಾರಿಸೋದು ಹೇಗೆ?

4-5 ಕತ್ತರಿಸಿದ ಬೆಂಡೆಕಾಯಿಯನ್ನು ತೊಳೆದು, ಅಡಿ ಮತ್ತು ಮುಡಿಯಲ್ಲಿ ಕತ್ತರಿಸಿ,. ಕತ್ತರಿಸಿದ ಬೆಂಡೆಕಾಯಿಯನ್ನು ಮಧ್ಯ ಸೀಳು ಮಾಡಿ ಈಗ ಕುಡಿಯುವ ನೀರಿಗೆ ಬೆಂಡೆಕಾಯಿ ಹಾಕಿ ರಾತ್ರಿಯಿಡೀ ನೆನಸಿಡುವಂತೆ ನೋಡಿಕೊಳ್ಳಿ. ಬೆಳಗೆದ್ದು ಚೆನ್ನಾಗಿ ನೀರಿನಲ್ಲಿ ನೆಂದ ಬೆಂಡೆಕಾಯಿಯನ್ನು ತೆಗೆದು ನೀರನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ, (ಏಜೆನ್ಸೀಸ್).

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ