Colours Of Water Bottle Caps
- ಒಂದೊಂದು ಪ್ಲಾಸ್ಟಿಕ್ ವಾಟರ್ ಬಾಟಲ್ನ ಬಣ್ಣ ಒಂದೊಂದು ಇರುತ್ತದೆ ಯಾಕೆ ಗೊತ್ತಾ?
- ಬಿಳಿ, ಹಸಿರು, ಕೆಂಪು, ಕಪ್ಪು ಮುಚ್ಚಳದ ಬಾಟಲ್ ಇರೋದ್ಯಾಕೆ?
- ಯಾವ ಬಣ್ಣದ ನೀರಿನ ಬಾಟಲ್ನ ಕ್ಯಾಪ್ ಏನನ್ನು ಹೇಳುತ್ತದೆ?
Reason Behind The Colours Of Water Bottle Caps: ನಾವು ಹೊರಗಡೆ ಸುತ್ತಾಡಲೂ ಹೋದಾಗ, ಪ್ರವಾಸಕ್ಕೆ ತೆರಳಿದ್ದಾಗ ಸಾಮಾನ್ಯವಾಗಿ ನೀರಿನ ಬಾಟಲ್ ಖರೀದಿ ಮಾಡುತ್ತೇವೆ. ರೆಸ್ಟೋರೆಂಟ್, ಹೋಟೆಲ್, ರಸ್ತೆ ಬದಿಯ ಅಂಗಡಿ ಒಂದೊಂದು ಕಡೆ, ಒಂದೊಂದು ಬಣ್ಣದ ಕ್ಯಾಪ್ವುಳ್ಳ ಬಾಟಲ್ ಹಣಕ್ಕೆ ಖರೀದಿ ಮಾಡುತ್ತೇವೆ. ಆದರೆ, ಒಮ್ಮೆಯಾದರೂ ಬಾಟಲಿನ ಮುಚ್ಚಳದ ಕಲರ್ ನೋಡಿ ಅದರ ಬಗ್ಗೆ ಆಲೋಚನೆ ಮಾಡಿದ್ದೀರಾ? ಇಲ್ಲ. ಹಾಗಾದ್ರೆ ಬಾಟಲಿಗಳ ಬಣ್ಣ ನೀಲಿ, ಬಿಳಿ, ಕೆಂಪು ಸೇರಿದಂತೆ ನಾನಾ ಇರೋದ್ಯಾಕೆ ಎಂಬುದರ ಬಗ್ಗೆ ಈ ಲೇಖನದಲ್ಲಿದೆ.
ಲರ್ನ್ ವಿತ್ ಪಿಕೆ ಎನ್ನುವ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ ಮಾಹಿತಿ ಹೀಗಿದೆ.
- ನೀಲಿ ಬಣ್ಣದ ಕ್ಯಾಪ್ ಇರುವ ಬಾಟಲಿಗಳು ನೈಸರ್ಗಿಕ ಖನಿಜವುಳ್ಳ ಬಾಟಲ್ಗಳು. ಇದರಲ್ಲಿ ಕ್ಯಾಲ್ಸಿಯಂ, ಮೆಗ್ನೀಶಿಯಂ ಸೇರಿದಂತೆ ನೈಸರ್ಗಿಕ ಖನಿಜವಿರುತ್ತದೆ ಎನ್ನಲಾಗಿದೆ.
- ಬಿಳಿ ಬಣ್ಣದ ಕ್ಯಾಪ್ ಇರುವ ಬಾಟಲಿಗಳು ಸಾಮಾನ್ಯವಾಗಿ ಬಟ್ಟಿ ಇಳಿಸಿದ ಅಂದರೆ ಶುದ್ಧೀಕರಿಸಿದ ನೀರು, ಇದು ಹೆಚ್ಚು ಫಿಲ್ಟರ್ ಮಾಡಿರುವುದನ್ನು ಸೂಚಿಸುತ್ತದೆ ಎನ್ನಲಾಗಿದೆ.
- ಸಾಮಾನ್ಯವಾಗಿ ಬಿಸ್ಲರಿ ಬಾಟಲ್ಗಳೇ ಸೇಲ್ ಆಗೋದು ಇದರ ಕ್ಯಾಪ್ನ ಬಣ್ಣ ಹಸಿರು. ಈ ಬಾಟಲ್ಗೆ ಗ್ರೀನ್ ಕ್ಯಾಪ್ ಹಾಕುವುದರ ಹಿಂದಿನ ಉದ್ದೇಶ ಏನೆಂದರೆ,ಅದು ಮಿನರಲ್ನಿಂದ ಕೂಡಿದ್ದಾಗಿರುವುದರಿಂದ. ಅಥವಾ ಸುವಾಸನೆಯದ್ದು ಇಲ್ಲವೇ ವಿಟಮಿನ್ ಇನ್ಫ್ಯೂಸ್ಡ್ ಆಗಿರುವುದರಿಂದ ಇದಕ್ಕೆ ಹಸಿರು ಬಣ್ಣದ ಕ್ಯಾಪ್ ಇರಲಿದೆ.
-
- ಲರ್ನ್ ವಿತ್ ಪಿಕೆ ಅವರ ಇನ್ಸ್ಟಾಗ್ರಾಮ್ ಪೋಸ್ಟ್
- ಕಪ್ಪು ಕ್ಯಾಪಿನ ಬಾಟಲ್ ಇದನ್ನು ಕ್ಷಾರಿಯಾ ಅಥವಾ ಪ್ರೀಮಿಯಂ ನೀರಿಗೆ ಬಳಕೆ ಮಾಡಲಾಗುತ್ತದೆ. ಕೆಲವು ಅಧ್ಯಯನ ಪ್ರಕಾರ ಈ ಬಾಟಲಿನ ನೀರು ಮೂಳೆ ನಷ್ಟ ಹಾಗೂ ಖನಿಜಗಳಲ್ಲಿ ಇರುವ ಜೀವ ಕೋಶ ಹೀರಿಕೊಳ್ಳಲು, ವ್ಯಾಯಾಮದ ನಂತರ ಎಲೆಕ್ಟ್ರೋಲೈಟ್ ಮರು ನೀಡಲು ಬಳಸಲಾಗುತ್ತದೆ ಎನ್ನಲಾಗಿದೆ.
- ಹಳದಿ ಕ್ಯಾಪ್ವುಳ್ಳ ಬಾಟಲ್ಗಳ ನೀರಿನಲ್ಲಿ ವಿಟಮಿನ್ ಭರಿತ ಅಥವಾ ಪೋಷಕಾಂಶಗಳುಳ್ಳ ನೀರು ಇರಿಯ್ಯದೆ ಎನ್ನುವ ಸೂಚನೆಯಾಗಿದೆ. ಕೆಂಪು ಬಣ್ಣದ ಕ್ಯಾಪ್ ಇರುವ ಬಾಟಲ್ನ ನೀರಿನಲ್ಲಿ ಎಲೆಕ್ಟ್ರೋಲೈಟ್ ವರ್ದಿತ, ಸ್ಪಾರ್ಕಲಿಂಗ್ ನೀರು ಅಥವಾ ಕಾರ್ಬೋನೇಟೆಡ್ ನೀರು ಇರುತ್ತದೆ ಎನ್ನಲಾಗಿದೆ.
ಲರ್ನ್ ವಿತ್ ಪಿಕೆ ಅವರ ವಿಡಿಯೋಗಳು ಐದು ಸಾವಿರಕ್ಕೂ ಹೆಚ್ಚು ವ್ಯೂವ್ಸ್ ಪಡೆದುಕೊಂಡಿದ್ದು, ಹಲವಾರು ಕಾಮೆಂಟ್ಗಳಿದ್ದಾವೆ. ಕೆಲವರು ಯಾವ ನೀರು ಬೆಸ್ಟ್, ಯಾವುದು ಕುಡಿಯಲು ಯೋಗ್ಯ ಎಂದು ಪ್ರಶ್ನೆ ಮಾಡಿದರೆ ಇನ್ನೂ ಕೆಲವರು ಮಾಹಿತಿ ನೀಡಿದ್ದಕ್ಕಾಗಿ ಧನ್ಯವಾದ ಎಂದಿದ್ದಾರೆ, (ಏಜೆನ್ಸೀಸ್).