ಎಎಮ್ಎಸ್ ಎಡ್ಜ್ ರೋಬೋಟಿಕ್ ಸರ್ಜಿಕಲ್ ಸಿಸ್ಟಮ್, ಎನ್‌ಯು ಆ್ಯಪ್ ಹಾಗೂ 'ದಿ ಲಿಂಕ್ 2024-26' ಬಿಡುಗಡೆ ಏಜೆನ್ಸಿ
ಆರೋಗ್ಯ

ಎನ್‌ಯು ಹಾಸ್ಪಿಟಲ್ಸ್‌ನಿಂದ ಮೂರು ನೂತನ ಉಪಕ್ರಮಗಳಿಗೆ ಚಾಲನೆ

-ರೋಗಿ-ಕೇಂದ್ರಿತ ಆರೋಗ್ಯ ಸೇವೆಗಳ ಉನ್ನತೀಕರಣ-

ಬೆಂಗಳೂರು (ಅ. 23, 2026): ಯೂರಾಲಜಿ, ಕಿಡ್ನಿ ಆರೈಕೆ, ಫರ್ಟಿಲಿಟಿ ಹಾಗೂ ಕಿಡ್ನಿ ಟ್ರಾನ್ಸ್‌ಪ್ಲಾಂಟ್ ಚಿಕಿತ್ಸೆಗಳಲ್ಲಿ ಮುಂಚೂಣಿಯಲ್ಲಿರುವ ಪ್ರತಿಷ್ಠಿತ ಎನ್‌ಯು ಹಾಸ್ಪಿಟಲ್ಸ್, ತಂತ್ರಜ್ಞಾನ ಆಧಾರಿತ ಹಾಗೂ ರೋಗಿ-ಸ್ನೇಹಿ ಆರೋಗ್ಯ ಸೇವೆಗಳನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಮೂರು ಮಹತ್ವದ ಉಪಕ್ರಮಗಳನ್ನು ಅನಾವರಣಗೊಳಿಸಿದೆ.

ಬೆಂಗಳೂರಿನ ರಾಜಾಜಿನಗರ, ಪದ್ಮನಾಭನಗರ ಮತ್ತು ಮಿಷನ್ ರಸ್ತೆ ಸೇರಿದಂತೆ ಶಿವಮೊಗ್ಗ, ತಮಿಳುನಾಡಿನ ಆಂಬೂರ್ ಮತ್ತು ಮಾಲ್ಡೀವ್ಸ್‌ನಲ್ಲೂ ಆಸ್ಪತ್ರೆ ತನ್ನ ಶಾಖೆಗಳನ್ನು ಹೊಂದಿದೆ. ಈ ನೂತನ ಉಪಕ್ರಮಗಳ ಚಾಲನಾ ಕಾರ್ಯಕ್ರಮದಲ್ಲಿ ಖ್ಯಾತ ನಟ, ನಿರ್ದೇಶಕ ಹಾಗೂ ನಿರೂಪಕ ರಮೇಶ್ ಅರವಿಂದ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ, ನಟ, ನಿರ್ದೇಶಕ ರಮೇಶ್ ಅರವಿಂದ್, "ತಂತ್ರಜ್ಞಾನ ಮತ್ತು ಮಾನವೀಯ ಅನುಕಂಪಗಳು ಜೊತೆಯಾಗಿ ಸಾಗಿದಾಗ ಮಾತ್ರ, ಆರೋಗ್ಯ ಸೇವೆಯು ಜನರ ಬದುಕಿನಲ್ಲಿ ವಾಸ್ತವಿಕ ಬದಲಾವಣೆ ತರಲು ಸಾಧ್ಯ. ಎನ್‌ಯು ಹಾಸ್ಪಿಟಲ್ಸ್ ಈ ನಿಟ್ಟಿನಲ್ಲಿ ಅತ್ಯುತ್ತಮ ಹೆಜ್ಜೆ ಇಟ್ಟಿದೆ," ಎಂದು ಶ್ಲಾಘಿಸಿದರು.

ಮೂರು ಯೋಜನೆಗಳು ಯಾವುವು?

1. ಎಎಮ್ಎಸ್ ಎಡ್ಜ್ ರೋಬೋಟಿಕ್ ಸರ್ಜಿಕಲ್ ಸಿಸ್ಟಮ್'

ವಿಶೇಷ ಶಸ್ತ್ರಚಿಕಿತ್ಸಾ ಕ್ಷೇತ್ರದಲ್ಲಿ 'ಎಎಮ್ಎಸ್ ಎಡ್ಜ್ ರೋಬೋಟಿಕ್ ಸರ್ಜಿಕಲ್ ಸಿಸ್ಟಮ್' (AMS EDGE Robotic Surgical System) ಒಂದು ಮೈಲಿಗಲ್ಲು. 10 ಪಟ್ಟು ಹೆಚ್ಚು ಮ್ಯಾಗ್ನಿಫಿಕೇಷನ್ ಹೈ-ಡೆಫಿನಿಷನ್ 3D ದೃಶ್ಯ, ನಾಲ್ಕು ತೋಳುಗಳ ಫ್ಲೆಕ್ಸಿಬಲ್ ರೋಬೋಟಿಕ್ ವ್ಯವಸ್ಥೆ ಹಾಗೂ ಅತ್ಯಾಧುನಿಕ ಉಪಕರಣಗಳನ್ನು ಇದು ಒಳಗೊಂಡಿದೆ. ಸಂಕೀರ್ಣ ಶಸ್ತ್ರಚಿಕಿತ್ಸೆಗಳ ವೇಳೆ ವೈದ್ಯರಿಗೆ ತೀಕ್ಷ್ಣ ತೋರುವಿಕೆ, ಅದ್ಭುತ ನಿಖರತೆ ಮತ್ತು ನಿಯಂತ್ರಣ ಸಾಧಿಸಲು ಇದು ನೆರವಾಗುತ್ತದೆ. ಎಐ ಆಧಾರಿತ ಇಮೇಜಿಂಗ್, ಇಂಡೋಸೈಯನೈನ್ ಗ್ರೀನ್ ಫ್ಲೋರೊಸೆನ್ಸ್ ತಂತ್ರಜ್ಞಾನ ಮತ್ತು ಸುಧಾರಿತ ಡಿಸ್‌ಪ್ಲೇ ವ್ಯವಸ್ಥೆಗಳಿಂದಾಗಿ ದೇಹದ ಸೂಕ್ಷ್ಮ ಅಂಗರಚನೆಗಳನ್ನು ಅತ್ಯಂತ ಸ್ಪಷ್ಟವಾಗಿ ನೋಡಲು ಸಾಧ್ಯ. ಅಲ್ಲದೆ, ರಿಮೋಟ್ ಮೂಲಕ ಚಿಕಿತ್ಸೆ ನೀಡುವ ಟೆಲಿಸರ್ಜರಿ ತಂತ್ರಜ್ಞಾನವೂ ಇದರಲ್ಲಿದೆ.

ಸಾಂಪ್ರದಾಯಿಕ 'ಓಪನ್ ಸರ್ಜರಿ' ಹಾಗೂ 'ಲ್ಯಾಪರೊಸ್ಕೋಪಿ' ವಿಧಾನಗಳಿಗೆ ಹೋಲಿಸಿದರೆ, ಈ ರೋಬೋಟಿಕ್-ಅಸಿಸ್ಟೆಡ್ ಶಸ್ತ್ರಚಿಕಿತ್ಸೆಯು ಉಪಕರಣಗಳ ನಿರ್ವಹಣೆಯಲ್ಲಿ ಹೆಚ್ಚು ನಮ್ಯತೆ ಹಾಗೂ ನಿಖರತೆಯನ್ನು ಒದಗಿಸುತ್ತದೆ. ಇದರಿಂದಾಗಿ ಶಸ್ತ್ರಚಿಕಿತ್ಸೆ ವೇಳೆ ರಕ್ತಸ್ರಾವ ಗಣನೀಯವಾಗಿ ಕಡಿಮೆಯಾಗಲಿದ್ದು, ಶಸ್ತ್ರಚಿಕಿತ್ಸೆಯ ನಂತರದ ನೋವು ಕೂಡ ತಗ್ಗುತ್ತದೆ. ರೋಗಿಗಳು ಆಸ್ಪತ್ರೆಯಲ್ಲಿ ಹೆಚ್ಚು ದಿನ ಉಳಿಯುವ ಅಗತ್ಯವಿರುವುದಿಲ್ಲ ಮತ್ತು ಶೀಘ್ರವಾಗಿ ಚೇತರಿಸಿಕೊಳ್ಳಬಹುದು. ವೈದ್ಯರ ಪರಿಣತಿಗೆ ತಂತ್ರಜ್ಞಾನದ ಬೆಂಬಲ ಸಿಗುವುದರಿಂದ ರೋಗಿಗಳ ಸುರಕ್ಷತೆಗೆ ಇಲ್ಲಿ ಅತ್ಯುನ್ನತ ಆದ್ಯತೆ ನೀಡಲಾಗುತ್ತದೆ.

ಈ ಬಗ್ಗೆ ಮಾತನಾಡಿದ ಎನ್‌ಯು ಹಾಸ್ಪಿಟಲ್ಸ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಸೀನಿಯರ್ ಕನ್ಸಲ್ಟೆಂಟ್ ಪೀಡಿಯಾಟ್ರಿಕ್ ಯೂರಾಲಜಿಸ್ಟ್ ಡಾ. ಪ್ರಸನ್ನ ವೆಂಕಟೇಶ್ ಎಂ.ಕೆ., “ರೋಗಿಗಳನ್ನು ಕೇಂದ್ರದಲ್ಲಿಟ್ಟುಕೊಂಡು ಅತ್ಯುನ್ನತ ಹಾಗೂ ವಿಶೇಷ ಆರೋಗ್ಯ ಸೇವೆಗಳನ್ನು ಒದಗಿಸುವುದು ನಮ್ಮ ಮೊದಲ ಆದ್ಯತೆ. ರೋಬೋಟಿಕ್ ಶಸ್ತ್ರಚಿಕಿತ್ಸಾ ತಂತ್ರಜ್ಞಾನದ ಅಳವಡಿಕೆಯು ನಮ್ಮ ವೈದ್ಯರ ಶಸ್ತ್ರಚಿಕಿತ್ಸಾ ಕೌಶಲಕ್ಕೆ ಇನ್ನಷ್ಟು ಬಲ ತುಂಬಲಿದ್ದು, ನಾವು ನೀಡುವ ಚಿಕಿತ್ಸೆಯ ಗುಣಮಟ್ಟವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲಿದೆ,” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಎನ್‌ಯು ಹಾಸ್ಪಿಟಲ್ಸ್‌ನ ಚೇರ್ಮನ್ ಡಾ. ವೆಂಕಟೇಶ್ ಕೃಷ್ಣಮೂರ್ತಿ ಮಾತನಾಡಿ, “ನಮ್ಮ ಆಸ್ಪತ್ರೆಯ ಪ್ರತಿಯೊಂದು ಮೈಲಿಗಲ್ಲೂ ರೋಗಿಗಳು ನಮ್ಮ ಮೇಲಿಟ್ಟಿರುವ ಅಪಾರ ನಂಬಿಕೆ ಹಾಗೂ ನಮ್ಮ ವೈದ್ಯಕೀಯ ತಂಡದ ಬದ್ಧತೆಗೆ ಸಾಕ್ಷಿಯಾಗಿದೆ. ವೈದ್ಯಕೀಯ ಕ್ಷೇತ್ರ ನಿರಂತರವಾಗಿ ವಿಕಸನಗೊಳ್ಳುತ್ತಿರುವುದರಿಂದ, ಕಾಲಕಾಲಕ್ಕೆ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದು ಹಾಗೂ ರೋಗಿಗಳಿಗೆ ಕರುಣಾಪೂರ್ಣ ಆರೈಕೆ ನೀಡುವುದನ್ನು ಮುಂದುವರಿಸುವುದು ನಮ್ಮ ಜವಾಬ್ದಾರಿಯಾಗಿದೆ,” ಎಂದರು.

2. ಎನ್ಯು ಆ್ಯಪ್

ಶಸ್ತ್ರಚಿಕಿತ್ಸಾ ವಿಭಾಗದ ಅಭಿವೃದ್ಧಿಯ ಜೊತೆಗೆ, ರೋಗಿಗಳಿಗೆ ಆರೋಗ್ಯ ಸೇವೆಗಳನ್ನು ಮತ್ತಷ್ಟು ಸುಲಭಗೊಳಿಸಲು 'ಎನ್‌ಯು ಆ್ಯಪ್' ಬಿಡುಗಡೆ ಮಾಡಲಾಗಿದೆ. ವೈದ್ಯರ ಅಪಾಯಿಂಟ್‌ಮೆಂಟ್, ಆನ್‌ಲೈನ್ ಪಾವತಿ, ಕನ್ಸಲ್ಟೇಶನ್‌, ವೈದ್ಯಕೀಯ ವರದಿಗಳು, ಪ್ರಿಸ್ಕ್ರಿಪ್ಷನ್, ಔಷಧಿಗಳ ಆನ್‌ಲೈನ್ ಆರ್ಡರ್ ಹಾಗೂ ಮನೆಯಿಂದಲೇ ಲ್ಯಾಬ್‌ ಟೆಸ್ಟ್‌ಗಳಿಗೆ ಸ್ಯಾಂಪಲ್ ನೀಡುವಂತಹ ಎಲ್ಲ ಸೇವೆಗಳೂ ಈ ಡಿಜಿಟಲ್ ವೇದಿಕೆಯಲ್ಲಿ ಲಭ್ಯ. ಈ ಆ್ಯಪ್ ಮೂಲಕ ರೋಗಿಗಳು ತಮ್ಮ ಆರೋಗ್ಯ ಸೇವೆಗಳನ್ನು ಮನೆಯಿಂದಲೇ ಅತ್ಯಂತ ಸುಲಭವಾಗಿ ನಿರ್ವಹಿಸಿಕೊಳ್ಳಬಹುದು.

ಗ್ರೂಪ್ ಮೆಡಿಕಲ್ ಡೈರೆಕ್ಟರ್ ಡಾ. ದಿಲೀಪ್ ರಂಗರಾಜನ್ ಈ ಕುರಿತು ವಿವರಿಸಿ, “ತಂತ್ರಜ್ಞಾನವು ರೋಗಿಗಳಿಗೆ ಮತ್ತು ವೈದ್ಯಕೀಯ ತಂಡಕ್ಕೆ ಸೇವೆಗಳನ್ನು ಸರಳಗೊಳಿಸಿದಾಗ ಮಾತ್ರ ಅದಕ್ಕೊಂದು ನೈಜ ಅರ್ಥ ಬರುತ್ತದೆ. ಎನ್‌ಯು ಆ್ಯಪ್ ಮೂಲಕ ನಾವು ಅತ್ಯಗತ್ಯ ಆರೋಗ್ಯ ಸೇವೆಗಳನ್ನು ರೋಗಿಗಳಿಗೆ ಸುಲಭವಾಗಿ ತಲುಪಿಸುವ ಗುರಿ ಹೊಂದಿದ್ದೇವೆ. ಇದರಿಂದ ಅವರ ಸಮಯ ಉಳಿಯಲಿದ್ದು, ವೈದ್ಯಕೀಯ ಮಾಹಿತಿಯನ್ನು ಪಡೆಯುವುದು ಹೆಚ್ಚು ಅನುಕೂಲಕರವಾಗಲಿದೆ,” ಎಂದು ತಿಳಿಸಿದರು.

3. 'ದಿ ಲಿಂಕ್ 2024 - 26' ಅನಾವರಣ:

ಮೂರನೇ ಉಪಕ್ರಮವಾದ 'ದಿ ಲಿಂಕ್ 2024 - 26' (The Link 2024 - 26) ವಾರ್ಷಿಕ ಸಂಚಿಕೆಯು ಎನ್‌ಯು ಹಾಸ್ಪಿಟಲ್ಸ್‌ನ ಭವಿಷ್ಯದ ದೃಷ್ಟಿಕೋನ, ಸಾಧನೆಗಳು ಮತ್ತು ಸಿಬ್ಬಂದಿಯ ಅನುಭವಗಳ ಕೈಗನ್ನಡಿಯಾಗಿದೆ. ಸಂಸ್ಥೆಯ ವೈದ್ಯಕೀಯ ಶ್ರೇಷ್ಠತೆಯ ಪಯಣವನ್ನು ದಾಖಲಿಸಿರುವ ಈ ಪ್ರಕಟಣೆಯು, ಆಸ್ಪತ್ರೆಯ ಯಶಸ್ಸಿನ ಹಿಂದಿರುವ ವೈದ್ಯರು ಹಾಗೂ ಸಿಬ್ಬಂದಿಯ ನಿರಂತರ ಶ್ರಮವನ್ನು ಗೌರವಿಸುತ್ತದೆ.

ಸಾಧನೆಯ ಹಾದಿಯಲ್ಲಿ ಎನ್‌ಯು ಹಾಸ್ಪಿಟಲ್ಸ್:

ತನ್ನ ಸುದೀರ್ಘ ವೈದ್ಯಕೀಯ ಪಯಣದಲ್ಲಿ ಎನ್‌ಯು ಹಾಸ್ಪಿಟಲ್ಸ್ ಈವರೆಗೆ 750ಕ್ಕೂ ಹೆಚ್ಚು ಕಿಡ್ನಿ ಟ್ರಾನ್ಸ್ಪ್ಲಾಂಟ್, 200ಕ್ಕೂ ಹೆಚ್ಚು ರೋಬೋಟಿಕ್ ಸರ್ಜರಿಗಳು ಹಾಗೂ 50ಕ್ಕೂ ಅಧಿಕ ಮಕ್ಕಳ ರೋಬೋಟಿಕ್ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ಪೂರೈಸಿದೆ. ಈ ಮೂಲಕ ಬರೋಬ್ಬರಿ 12 ಲಕ್ಷಕ್ಕೂ ಹೆಚ್ಚು ರೋಗಿಗಳ ಬಾಳಿನಲ್ಲಿ ಭರವಸೆಯ ಬೆಳಕಾಗಿದೆ. ಟೈಮ್ಸ್ ಹೆಲ್ತ್ ಸರ್ವೆ ಹಾಗೂ ಔಟ್‌ಲುಕ್-ಎನ್‌ಇಬಿ 2026ರ ಶ್ರೇಯಾಂಕಗಳ ಅನ್ವಯ.