ಆರೋಗ್ಯ

ಪಾರ್ಲರ್​​ ತಿರುಗಾಟ, ದುಬಾರಿ ಕ್ರೀಂ ಕೊಂಡುಕೊಳ್ಳೋದು ಬಿಡಿ; ಮುಖದ ಕಾಂತಿ ಹೆಚ್ಚಿಸಲು ಮನೆಯಲ್ಲಿಯೇ ತಯಾರಿಸಿ ಈ ಫೇಸ್ ಪ್ಯಾಕ್..Skin Care

  • ಚಳಿಗಾಲದಲ್ಲಿ ಮುಖದ ಕಾಂತಿ, ಚರ್ಮದ ಆರೋಗ್ಯಕ್ಕೆ ನೀಡಿ ಒತ್ತು

  • ಕಡಲೆ ಹಿಟ್ಟು, ಬೆಣ್ಣೆ, ಮೊಸರು ಮುಖದ ಕಾಂತಿ ಹೆಚ್ಚಳಕ್ಕೆ ಸಹಕಾರಿ

  • ಮೂರು ಪದಾರ್ಥಗಳು ಪ್ರತ್ಯೇಕವಾಗಿ ಚರ್ಮದ ರಕ್ಷಣೆಗೆ ಕೆಲಸ ಮಾಡುತ್ತದೆ.

Skin Care Tips: ಚಳಿಗಾಲದಲ್ಲಿ ಮುಖದ ಕಾಂತಿ ಕಾಪಾಡುವ ಜೊತೆಗೆ, ಚರ್ಮದ ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯ. ಹೀಗಾಗಿ ಹಲವರು ಪಾರ್ಲರ್​ಗಳಿಗೆ ತೆರಳಿ ಪೇಷಿಯಲ್​ ಸೇರಿದಂತೆ ನಾನಾ ವಿಧದ ಫೇಸ್​ ಪ್ಯಾಕ್​​ಗೆ ಒತ್ತು ನೀಡುತ್ತಾರೆ. ಇನ್ನೂ ಕೆಲವರು ರೀಲ್ಸ್​ಗಳಲ್ಲಿ ಕಾಣುವ ದುಬಾರಿ ಕ್ರೀಂ ಕೊಂಡು ಹಣ ವೆಚ್ಚ ಮಾಡುತ್ತಾರೆ. ಇದರ ಬದಲಾಗಿ ಮನೆಯಲ್ಲಿಯೇ ನೈಸರ್ಗಿಕವಾಗಿ ಮುಖದ ಕಾಂತಿ ಹೆಚ್ಚಿಸಿಕೊಳ್ಳಲು ಕೆಲವು ಟಿಪ್ಸ್ ಫಾಲೋ ಮಾಡಿ ಸಾಕು.

ಕಡಲೆ ಹಿಟ್ಟು, ಬೆಣ್ಣೆ ಹಾಗೂ ಮೊಸರು ಬಳಸಿ ಫೇಸ್​ ಪ್ಯಾಕ್​ ತಯಾರಿಸಿಕೊಂಡು ವಾರಕ್ಕೆ ಎರಡು ಬಾರಿ ಬಳಕೆ ಮಾಡುವುದರಿಂದ ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದಾಗಿದೆ. ಮೂರು ಪದಾರ್ಥಗಳಲ್ಲಿ ಇರುವ ಔಷಧೀಯ ಗುಣವು ಪ್ರತ್ಯೇಕವಾಗಿ ಚರ್ಮದ ಆರೋಗ್ಯದ ರಕ್ಷಣೆಗೆ ಸಹಕಾರಿ. ಫೇಸ್​ ಪ್ಯಾಕ್​ ತಯಾರಿಸಿಕೊಳ್ಳೋದು ಹೇಗೆ ಎನ್ನುವ ಬಗ್ಗೆ ಮಾಹಿತಿ ಈ ಲೇಖನದಲ್ಲಿ ಇದೆ.

ಮೂರು ಹೇಗೆ ಕೆಲಸ ಮಾಡುತ್ತದೆ?

ಕಡಲೆ ಹಿಟ್ಟು, ಬೆಣ್ಣೆ ಹಾಗೂ ಮೊಸರು ಬಳಸಿ ನೈಸರ್ಗಿಕವಾಗಿ ಪೇಷಿಯಲ್​ ಮಾಡಿಕೊಳ್ಳಬಹುದಾಗಿದೆ. ಇದು ಚರ್ಮದಲ್ಲಿರುವ ಎಣ್ಣೆಯನ್ನು ತೆಗೆದು ಹಾಕಲು ಹಾಗೂ ಚರ್ಮದಲ್ಲಿರುವ ಸತ್ತ ಜೀವಕೋಶವನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಇದರಲ್ಲಿರುವ ಸತು. ಉತ್ಕರ್ಷಣ ನಿರೋಧಕ, ಸಪೋನಿನ್​​ ಚರ್ಮದ ಕಾಂತಿ ಹೆಚ್ಚಿಸಲು ನೈಸರ್ಗಿಕವಾಗಿ ಬುಡದಿಂದ ಕೆಲಸ ಮಾಡುತ್ತದೆ.

ಬೆಣ್ಣೆ

ಇನ್ನೂ ಬೆಣ್ಣೆ, ಇದರಲ್ಲಿರುವ ವಿಟಮಿನ್​ ಎ ಮತ್ತು ಇ ಅಂಶವು ಚರ್ಮದ ತೇವಾಂಶವನ್ನು ಕಾಪಾಡಲು ಆಳದಿಂದ ಕೆಲಸ ಮಾಡುತ್ತದೆ. ಬೆಣ್ಣೆಯಲ್ಲಿರುವ ಕೊಬ್ಬಿನಾಮ್ಲವು ಒಣ ಚರ್ಮವನ್ನು ತೇವಗೊಳಿಸಿ.. ಹೆಚ್ಚು ಕಾಲ ಹೈಡ್ರೇಟ್ ಆಗಿರಲು ಸಹಾಯ ಮಾಡುತ್ತದೆ. ಇದರಲ್ಲಿರುವ ವಿಟಮಿನ್​ ಇ ಮತ್ತು ಆಂಟಿ ಆಕ್ಸಿಡೆಂಟ್ ಚರ್ಮ ಸುಕ್ಕಾಗುವುದನ್ನು ತಡೆಯುವುದರ ಮೂಲಕ ವಯಸ್ಸಾಗಿರುವಂತೆ ಕಾಣುವುದನ್ನು ತಪ್ಪಿಸುತ್ತದೆ. ಚರ್ಮದ ಮೇಲಿನ ಧೂಳನ್ನು ತಡೆದು. ಚರ್ಮದ ರಕ್ಷಣಾ ಪದರವನ್ನು ಕಾಪಾಡಿಕೊಳ್ಳುತ್ತದೆ.

ಮೊಸರು

ಮೊಸರು ಚರ್ಮದ ಅನೇಕ ಸಮಸ್ಯೆಗಳಿಗೆ ಮುಕ್ತಿ ಕೊಡುವ ಮದ್ದು ಇದ್ದಂತೆ. ಇದರಲ್ಲಿರುವ ಲಾಕ್ಟಿಕ್​ ಆಮ್ಲ, ಸತು, ವಿಟಮಿನ್​​ ಬಿ, ಕ್ಯಾಲ್ಸಿಯಂ ಚರ್ಮದ ಆರೋಗ್ಯವನ್ನು ನೈಸರ್ಗಿಕವಾಗಿ ಕಾಪಾಡಿಕೊಳ್ಳಲು ಪರೋಕ್ಷವಾಗಿ ಕೆಲಸ ಮಾಡುತ್ತದೆ. ಒಣ ಚರ್ಮ, ಉರಿಯೂತ, ಕಪ್ಪು ಕಲೆ ಸೇರಿದಂತೆ ಹಲವು ವಿಚಾರಕ್ಕೆ ಇದನ್ನು ಬಳಕೆ ಮಾಡಲಾಗುತ್ತದೆ.

ಕಡಲೆ ಹಿಟ್ಟು, ಬೆಣ್ಣೆ ಹಾಗೂ ಮೊಸರು ಬಳಸಿ ಫೇಸ್​ ಪ್ಯಾಕ್ ತಯಾರಿಸೋದು ಹೇಗೆ?

  • ಕಡಲೆ ಹಿಟ್ಟು; 1ರಿಂದ 2 ಚಮಚ

  • ಬೆಣ್ಣೆ ; ಅರ್ಧ ಚಮಚ

  • ಮೊಸರು ; 1ರಿಂದ 2 ಚಮಚ

ಮೊಸರು ಮತ್ತು ಕಡಲೇ ಹಿಟ್ಟನ್ನು ತೆಗೆದುಕೊಂಡು ಎರಡರಲ್ಲಿಯೂ ಯಾವುದೇ ಗಂಟುಗಳಾಗದಂತೆ ಸರಿಯಾಗಿ ಕಲಿಸಿ. ಆ ನಂತರ ಅದಕ್ಕೆ ಬೆಣ್ಣೆ ಹಾಕಿ ಮತ್ತೆ ನಯವಾಗಿ ಕಲಿಸಿ. ಈಗ ನಿಮ್ಮ ಕೂದಲು ಮುಖದ ಮೇಲೆ ಬರದಂತೆ ಸರಿಯಾಗಿ ಬನ್ ಮಾಡಿಕೊಳ್ಳಿ. ಮುಖ ಹಾಗೂ ಕತ್ತಿನ ಭಾಗಕ್ಕೆ ಕಡಲೆ ಹಿಟ್ಟು ಹಾಗೂ ಬೆಣ್ಣೆ, ಮೊಸರು ಹಚ್ಚಿ 10ರಿಂದ 15 ನಿಮಿಷ ಹಾಗೆಯೇ ಬಿಡಿ. ಮಾತನಾಡಬೇಡಿ. ಪೇಸ್ಟ್​ ಒಣಗಿದ ನಂತರ ನಿಮ್ಮ ಮುಖವನ್ನು ಬೆಚ್ಚಿನ ನೀರಿನಲ್ಲಿ ಮೃದುವಾಗಿ ವಾಷ್​ ಮಾಡಿಕೊಳ್ಳಿ. ಮುಖ ಸ್ವಚ್ಛವಾದ ಟವಲ್​ನಿಂದ ಒರೆಸಿಕೊಂಡ ನಂತರ ಫೇಸ್ ಮಾಯಿಶ್ಚರೈಸರ್​ ಹಚ್ಚಿ,(ಏಜೆನ್ಸೀಸ್).

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.