ಕಡಿಮೆ ಸಮಯದಲ್ಲಿ ಮಂಗಳೂರು ಸೌತೆಕಾಯಿ ಚಟ್ನಿ ಮಾಡುವುದು ಹೇಗೆ?
ಸಾಂಪ್ರದಾಯಿಕ ಕಡಲೇ ಬೀಜ, ಪಪ್ಪು, ಪುದೀನ ಚಟ್ನಿ ಬಿಟ್ಟು ಹೊಸ ರೆಸಿಪಿ ಟ್ರೈ ಮಾಡಿ
ತೂಕ ನಿಯಂತ್ರಣ, ಕಿಡ್ನಿ ಸಮಸ್ಯೆ, ಮಲಬದ್ಧತೆಗೆ ರಾಮಬಾಣ ಈ ಮಂಗಳೂರು ಸೌತೆಕಾಯಿ
ಮಂಗಳೂರು ಸೌತೆಕಾಯಿಯಲ್ಲಿ ಸಾರು ಅಥವಾ ಚಟ್ನಿ ಮಾಡಿಕೊಳ್ಳುವ ಅಭ್ಯಾಸ ಶೇ.70ರಷ್ಟು ಮಂದಿಗೆ ಗೊತ್ತೇ ಇರೋದಿಲ್ಲ. ಇದು ಕರಾವಳಿ ಮತ್ತು ಮಲೆನಾಡಿನಲ್ಲಿ ಬೆಳೆಯುವ ಪ್ರಸಿದ್ಧ ತರಕಾರಿಯಾಗಿದೆ. ತುಳು ಭಾಷಿಕರು ಇದನ್ನು ಸಾಂಪ್ರದಾಯಿಕವಾಗಿ ಮದುವೆ ಸಮಾರಂಭದಲ್ಲಿ ಬಳಕೆ ಮಾಡುತ್ತಾರೆ. ಇದರಿಂದ ದೋಸೆ, ಸಾರು, ಚಟ್ನಿ ಸೇರಿದಂತೆ ಹಲವು ವಿಧವಾದ ಆಹಾರ ತಯಾರಿ ಮಾಡಲಾಗುತ್ತದೆ.
ಇಂದು ಯಾವ ಆಹಾರ ತಯಾರಿ ಮಾಡಿಕೊಳ್ಳೋದು. ನಿತ್ಯ ಚಿತ್ರನ್ನಾ, ಟೊಮ್ಯಾಟೋ ಬಾತ್ ತಿಂದು ಸಾಕಾಗಿದೆ ಎಂದು ಬ್ಯಾಚುಲರ್ಗಳು ಬೇಸರಿಸಿಕೊಳ್ಳುತ್ತಾರೆ. ಹೀಗಾಗಿ ಅಂತಹ ಯುವಕ ಮತ್ತು ಯುವತಿಯರಿಗಾಗಿ ಸಿಂಪಲ್ ಮಂಗಳೂರು ಸೌತೆಕಾಯಿ ಚಟ್ನಿ ರೆಸಿಪಿ ಇಲ್ಲಿದೆ.
ಯಾವ ಮಸಾಲೆ ಇಲ್ಲದೆ, ಕಡಿಮೆ ಎಣ್ಣೆಯಿಂದ, ತಾಜಾ ತೆಂಗಿನ ಕಾಯಿಯ ಸಹಾಯದಿಂದ ಮಂಗಳೂರು ಸೌತೆಕಾಯಿ ಚಟ್ನಿಯನ್ನು ತಯಾರಿಸಿ ರೊಟ್ಟಿ, ಅನ್ನ, ಮುದ್ದೆ ಜೊತೆಗೆ ಸೇವನೆ ಮಾಡಬಹುದಾಗಿದೆ. ಇದಕ್ಕೆ ಬೇಕಾದ ಸಾಮಗ್ರಿಗಳ ಪಟ್ಟಿ ಹೀಗಿದೆ.
ಮಧ್ಯಮ ಗಾತ್ರದ ಒಂದು ಸೌತೆಕಾಯಿ
ಹಸಿ ತೆಂಗಿನಕಾಯಿ ತುರಿ
ಒಂದು ನಿಂಬೆಗಾತ್ರದ ಹುಣಸೆ ಹಣ್ಣು
ಉದ್ದಿನ ಬೇಳೆ-3 ಚಮಚ ಒಗ್ಗರಣ್ಣೆಗೆ
1/4 ಚಮಚ ಜೀರಿಗೆ
ಬೆಳ್ಳುಳ್ಳಿ 5-6 ಎಸಳು
5-6 ಒಣ ಮೆಣಸಿನಕಾಯಿ
1ಅಥವಾ 2 ಕತ್ತರಿಸಿಕೊಂಡ ಹಸಿ ಮೆಣಸಿನಕಾಯಿ
ಸಾಸಿವೆ
1/4 ಅಡುಗೆ ಎಣ್ಣೆ
ಅರ್ಧ ಹೋಳು ಮಾಡಿದ ಮಂಗಳೂರು ಸೌತೆಕಾಯಿಯನ್ನು ಚೆನ್ನಾಗಿ ಕಟ್ ಮಾಡಿಕೊಳ್ಳಿ. ಅದು ಕಹಿ ಇದೆಯೇ ಎಂದೊಮ್ಮೆ ನೋಡಿಕೊಳ್ಳಿ. ನಂತರ ಅರ್ಧ ಮಂಗಳೂರು ಸೌತೆಕಾಯಿ ತುರಿಯಲು ಹಾಕಿ ಇನ್ನರ್ಧ ಕೊನೆಗೆ ಇಡಿ. ಈಗ ಅರ್ಧಂಬರ್ಧ ರುಬ್ಬಿದ ಸೌತೆಕಾಯಿಗೆ ನಿಂಬೆ ಗಾತ್ರದ ತೊಳೆದ ಹುಣಸೆ ಹಾಕಿ ಸಂಪೂರ್ಣ ರುಬ್ಬಿಕೊಳ್ಳಿ.
ಈಗ ಒಲೆ ಮೇಲೆ ಪ್ಯಾನ್ವೊಂದನ್ನು ಇಟ್ಟು ಮೆಂತ್ಯ ಮತ್ತು ಉದ್ದಿನ ಬೇಳೆ ಉರಿದುಕೊಳ್ಳಿ ಇದು ಕೆಂಪಗಾಗುವಂತೆ ಉರಿದುಕೊಳ್ಳಿ ನಂತರ ಅದಕ್ಕೆ ಒಣ ಮೆಣಸಿನಕಾಯಿ, ಜೀರಿಗೆಹಾಕಿ ಉರಿದು ಅದು ತಣ್ಣಗಾಗಲು ಕೊಂಚ ಹೊತ್ತು ಹಾಗೆಯೇ ಬಿಡಿ. ಈಗ ತಣ್ಣಗಾದ ಉದ್ದಿನ ಬೇಳೆ, ಜೀರಿಗೆ ಸೇರಿದಂತೆ ಇನ್ನಿತರ ಸಾಮಾಗ್ರಿ ಹಾಕಿ ರುಬ್ಬಿ ಆನಂತರ ತೆಂಗಿನಕಾಯಿಯನ್ನು ಸಣ್ಣದಾಗಿ ರುಬ್ಬಿಕೊಳ್ಳಿ.
ಈಗ ಪಕ್ಕಕ್ಕಿಟ್ಟ ಸೌತೆಕಾಯಿ ಫ್ರೈ ಮಾಡಿ, ತಿನ್ನಲು ಆಗುವಂತೆ ಮಾಡಿ. ಈಗ ಬಾಂಡ್ಲಿಗೆ ಸಾಸಿವೆ ಹಾಕಿ ಒಗ್ಗರಣೆ ಕೊಟ್ಟ ನಂತರ ಪೇಸ್ಟ್ ಮತ್ತು ಸೌತೆಕಾಯಿ ಫ್ರೈ ಹಾಕಿ ರೊಟ್ಟಿ, ಅನ್ನ, ದೋಸೆ, ಚಪಾತಿ ಜೊತೆಗೆ ತಿನ್ನಬಹುದು. ಗಮಿನಿಸಿ ಸೌತೆಕಾಯಿ ರುಬ್ಬುವಾಗ
ಮಂಗಳೂರು ಸೌತೆಕಾಯಿಯಲ್ಲಿ ಶೇ. 95ರಷ್ಟು ನೀರಿನಾಂಶ ಇರುವ ಕಾರಣ ಬೇಸಿಗೆಯಲ್ಲಿ ದೇಹವನ್ನು ಹೈಡ್ರೇಟ್ ಮಾಡಿಡಲು ಸಹಾಯ ಮಾಡುತ್ತದೆ. ಜೀರ್ಣಕ್ರಿಯೆ ಸಮಸ್ಯೆಯಿಂದ ಬಳಲುತ್ತಿರುವವರು ಮಂಗಳೂರು ಸೌತೆಕಾಯಿ ತಿನ್ನುವುದು ಸೂಕ್ತ. ಏಕೆಂದರೆ, ಇದರಲ್ಲಿರುವ ನಾರಿನಾಂಶ ಮಲಬದ್ಧತೆಯನ್ನು ತಡೆದು, ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯವಾಗಿಡುತ್ತದೆ. ತೂಕ ನಿಯಂತ್ರಣಕ್ಕೆ ಸಹಕಾರಿ. ಮೂತ್ರ ಪಿಂಡ ಸಮಸ್ಯೆಗೂ ಇದೊಂದು ರೀತಿಯಲ್ಲಿ ಮದ್ದು ಎಂದು ಹೇಳಲಾಗುತ್ತದೆ, (ಏಜೆನ್ಸೀಸ್).