ಕೋಳಿ ಮಾಂಸವನ್ನು ವಿತ್​ ಸ್ಕಿನ್​ ತಿನ್ನುತ್ತಿದ್ದೀರಾ? ಹಾಗಿದ್ರೆ, ಈ ವಿಚಾರ ಮಾತ್ರ ನಿಮಗೆ ಗೊತ್ತಿರಲೇಬೇಕು! Chicken  
ಆರೋಗ್ಯ

ಕೋಳಿ ಮಾಂಸವನ್ನು ವಿತ್​ ಸ್ಕಿನ್​ ತಿನ್ನುತ್ತಿದ್ದೀರಾ? ಹಾಗಿದ್ರೆ, ಈ ವಿಚಾರ ಮಾತ್ರ ನಿಮಗೆ ಗೊತ್ತಿರಲೇಬೇಕು! Chicken

Chicken: ನಾನ್​ವೆಜ್​ ಪ್ರಿಯರಂತು ಮಾಂಸಹಾರಿ ಭಕ್ಷ್ಯಗಳಲ್ಲಿ ತುಂಬಾ ಇಷ್ಟಪಟ್ಟು ತಿನ್ನುವುದೆಂದರೆ ಅದು ಚಿಕನ್. ಕೋಳಿ ಕಬಾಬ್​, ನಾಟಿ ಕೋಳಿ ಸಾರು, ಚಿಕನ್​ ಮಸಾಲಾ ಫ್ರೈ, ಪೆಪ್ಪರ್​ ಚಿಕನ್​ ಸೇರಿದಂತೆ ಹಲವು ಬಗೆಯ ಕೋಳಿ ಮಾಂಸದ ಐಟಂಗಳನ್ನು ಬಾಯಿ ಚಪ್ಪರಿಸಿಕೊಂಡು ಸೇವಿಸುತ್ತಾರೆ. ಕೆಲವರು ವಾರದಲ್ಲಿ ಎರಡು ಬಾರಿ ತಿಂದರೆ, ಇನ್ನೂ ಕೆಲವರು ದಿನವೂ ಸೇವಿಸುತ್ತಾರೆ. ಅಸಲಿಗೆ, ಈ ಚಿಕನ್​ ಪ್ರಿಯರಲ್ಲಿ ವಿತ್​ ಸ್ಕಿನ್​ ಮತ್ತು ಸ್ಕಿನ್​ಲೆಸ್ ಪ್ರಿಯರು ಎಂಬ ಎರಡು ವರ್ಗವಿದೆ. ಇವರಲ್ಲಿ ವಿತ್ ಸ್ಕಿನ್​ ಚಿಕನ್ ತಿನ್ನುವವರು ಈ ಸುದ್ದಿಯನ್ನು ಪೂರ್ತಿಯಾಗಿ ಓದಲೇಬೇಕು.

150ರಿಂದ 200 ಗ್ರಾಂ

ಅನೇಕರು ಪ್ರತಿದಿನ ಚಿಕನ್​ ತಿಂದರೂ ತೂಕ ಹೆಚ್ಚಾಗುವುದಿಲ್ಲ. ಹಲವರು ತೂಕ ಹೆಚ್ಚಳಕ್ಕೆಂದೇ ಜಿಮ್‌ಗೆ ಹೋಗುತ್ತಾರೆ. ಇಲ್ಲಿ, ಅವರಿಗೆ ಪ್ರೋಟೀನ್‌ಗಾಗಿ ಪ್ರತಿದಿನ 150ರಿಂದ 200 ಗ್ರಾಂ ಚಿಕನ್ ತಿನ್ನಲು ಹೇಳುತ್ತಾರೆ. ಸಾಮಾನ್ಯವಾಗಿ ಚಿಕನ್ ತಿಂದರೆ ಆರೋಗ್ಯಕ್ಕೆ ಒಳ್ಳೆಯದೇ. ಆದರೆ, ಸ್ಕಿನ್ ಜತೆ ಚಿಕನ್ ತಿನ್ನುವುದರಿಂದ ಆರೋಗ್ಯ ಸಮಸ್ಯೆಗಳು ಬರಬಹುದು ಎಂಬ ಅಭಿಪ್ರಾಯಗಳಿವೆ. ಕೋಳಿ ಚರ್ಮದೊಂದಿಗೆ ಮಾಂಸ ಸೇವನೆ ಮಾಡಿದ್ದಲ್ಲಿ, ಹೃದ್ರೋಗ, ಬಿಪಿ ಮತ್ತು ತೂಕ ಹೆಚ್ಚಾಗುವಂತಹ ಸಮಸ್ಯೆಗಳು ಕಾಡುತ್ತದೆ ಎಂಬ ವಾದಗಳಿವೆ. ಅಷ್ಟಕ್ಕೂ, ಸ್ಕಿನ್​ ಸಮೇತ ತಿಂದರೆ ಹೀಗಾಗುತ್ತಾ? ಸಮಸ್ಯೆಗಳು ಉಲ್ಬಣಿಸುತ್ತಾ? ಎಂಬ ಕೆಲವು ಗೊಂದಲಮಯ ಪ್ರಶ್ನೆಗಳಿಗೆ ಹೀಗಿದೆ ನೋಡಿ ಉತ್ತರ.

ಸ್ಕಿನ್​ ಇದ್ದರೆ ಬಲು ರುಚಿ

ಕೋಳಿ ಮಾಂಸವನ್ನು ಸ್ಕಿನ್​ ಸಮೇತ ಹೆಚ್ಚು ತಿನ್ನುವುದರಿಂದ ಆರೋಗ್ಯಕ್ಕೆ ಆಗುವ ಅಪಾಯಗಳಿವೆ. ಕೋಳಿ ಚರ್ಮವು ಬಹಳಷ್ಟು ಸ್ಯಾಚುರೇಟೆಡ್ ಕೊಬ್ಬನ್ನು ಹೊಂದಿರುತ್ತದೆ. ಅವು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಗಣನೀಯವಾಗಿ ಹೆಚ್ಚಿಸುತ್ತವೆ. ಪದೇ ಪದೇ ವಿತ್ ಸ್ಕಿನ್ ಚಿಕನ್​​ ತಿನ್ನುವುದರಿಂದ ಕೊಬ್ಬಿನ ಶೇಖರಣೆ ಮತ್ತು ಹೃದಯ ಕಾಯಿಲೆಗೆ ಕಾರಣವಾಗಬಹುದು. ಇದಲ್ಲದೆ, ಅಧಿಕ ರಕ್ತದೊತ್ತಡವನ್ನು ಅಭಿವೃದ್ಧಿಪಡಿಸುವ ಸಾಧ್ಯತೆಗಳು ಸಹ ಹೆಚ್ಚಾಗುತ್ತವೆ. ಚರ್ಮವಿಲ್ಲದ ಕೋಳಿಗೆ ಹೋಲಿಸಿದರೆ, ಚರ್ಮದೊಂದಿಗೆ ಚಿಕನ್ ಕ್ಯಾಲೋರಿಗಳಲ್ಲಿ ತುಂಬಾ ಹೆಚ್ಚು.

ತೂಕ ಇಳಿಸಿಕೊಳ್ಳಲು ಬಯಸುವವರು ಇದನ್ನು ಆದಷ್ಟು ತಪ್ಪಿಸಬೇಕು. ಚಿಕನ್ ಬೇಯಿಸುವ ಮೊದಲು ಚರ್ಮವನ್ನು ಸಂಪೂರ್ಣವಾಗಿ ತೆಗೆದುಹಾಕಿ ಅಥವಾ ಕಟ್​ ಮಾಡಿಸಿಕೊಂಡು ಬರುವಾಗಲೇ ಸ್ಕಿನ್​ ರಹಿತ ಮಾಂಸವನ್ನು ಕೊಡಿ ಇದು ಕೇಳಿ ಪಡೆಯಿರಿ. ಇದು ಕೊಬ್ಬಿನಾಂಶವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ನಿಮಗೆ ಸ್ಕಿನ್​ ಇಲ್ಲದೆಯೇ ಬೇಯಿಸಿದರೆ ಮಾಂಸ ರುಚಿ ಹಿಡಿಯುವುದಿಲ್ಲ ಎನ್ನಿಸಿದರೆ, ಅಡುಗೆ ಆದಮೇಲೆ ಚರ್ಮವನ್ನು ಬದಿಗಿಟ್ಟು ಮಾಂಸವನ್ನು ಮಾತ್ರ ತಿನ್ನಿ. ಮತ್ತು ಚಿಕನ್ ಅನ್ನು ಆದಷ್ಟು ಎಣ್ಣೆಯಲ್ಲಿ ಡೀಪ್ ಫ್ರೈ ಮಾಡುವ ಬದಲಿಗೆ ಗ್ರಿಲ್ ಮಾಡುವುದು, ಬೇಯಿಸಿ ಸೇವಿಸುವುದು ಹೆಚ್ಚು ಆರೋಗ್ಯಕರ,(ಏಜೆನ್ಸೀಸ್).

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.