Health Tips: ಸೂರ್ಯಕಾಂತಿ ಬೀಜಗಳು ಆರೋಗ್ಯಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತವೆ. ಅವು ಉತ್ಕರ್ಷಣ ನಿರೋಧಕಗಳು, ಜೀವಸತ್ವಗಳು ಮತ್ತು ಖನಿಜಗಳ ಉತ್ತಮ ಮೂಲವಾಗಿದೆ. ಸೂರ್ಯಕಾಂತಿ ಬೀಜಗಳನ್ನು ತಿನ್ನುವುದರಿಂದ ಹೃದಯದ ಆರೋಗ್ಯ, ರೋಗ ನಿರೋಧಕ ಶಕ್ತಿ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸಬಹುದು.
ಆರೋಗ್ಯಕರ ಜೀವನಶೈಲಿಯನ್ನು ಬಯಸುವ ಅವರಿಗೆ ಸನ್ ಫ್ಲವರ್ ಸೀಡ್ಸ್ (ಸೂರ್ಯಕಾಂತಿ ಬೀಜ) ಒಂದು ಅದ್ಭುತ ಆಹಾರ. ಇವುಗಳಲ್ಲಿ ಕೇವಲ ಜೀವಸತ್ವಗಳಲ್ಲದೆ, ದೇಹಕ್ಕೆ ಅಗತ್ಯವಾದ ಅನೇಕ ಪ್ರಮುಖ ಪೌಷ್ಟಿಕಾಂಶಗಳು ಅಧಿಕವಾಗಿ ಲಭ್ಯವಿದೆ. ಸನ್‌ಫ್ಲವರ್ ಸೀಡ್ಸ್ನಲ್ಲಿ ವಿಟಮಿನ್ B2, B3, B6, C, E, K ಮುಂತಾದ ಪೌಷ್ಟಿಕಾಂಶಗಳು ಇವೆ ಎಂದು ತಜ್ಞರು ಹೇಳುತ್ತಾರೆ.
ವಿಟಮಿನ್ ಬಿ 1 ಕೊರತೆ!
ವಿಟಮಿನ್ B1 ಅಥವಾ ಥಯಾಮಿನ್ ಎಂಬುದು ನೀರಿನಲ್ಲಿ ಕರಗುವ ಒಂದು ವಿಟಮಿನ್, ಇದು ದೇಹದ ಕಾರ್ಬೋಹೈಡ್ರೇಟ್ಗಳನ್ನು ಶಕ್ತಿಯಾಗಿ ಬಳಸಲು ಸಹಾಯ ಮಾಡುತ್ತೆ. ವಿಟಮಿನ್-ಬಿ 1 ಕೊರತೆ ಸಾಮಾನ್ಯವಾಗಿ ಬೆರಿಬೆರಿ ರೋಗಕ್ಕೆ ಕಾರಣವಾಗುತ್ತದೆ. ಜೊತೆಗೆ ನರಗಳ ಅಸ್ವಸ್ಥತೆಗಳು ಕೂಡ ಹೆಚ್ಚಿಸುತ್ತದೆ.
ತೂಕ ಕಡಿಮೆ ವಿಟಮಿನ್ ಬಿ1 ಕೊರತೆಯಿಂದ ತೂಕ ಕಡಿಮೆಯಾಗುವುದು, ವಿಟಮಿನ್ ಕೊರತೆ ಜಾಸ್ತಿ ಆಗಾದ ಗಂಭೀರವಾದ ಸಂದರ್ಭಗಳಲ್ಲಿ ಗೊಂದಲ, ನೆನಪಿನ ಶಕ್ತಿ ಸಮಸ್ಯೆಗಳು ಸಹ ಸಂಭವಿಸುತ್ತದೆ ಎಂದು ವೈದ್ಯರು ಬಹಿರಂಗಪಡಿಸುತ್ತಿದ್ದಾರೆ.
ಊಟದಲ್ಲಿ ಕೆಲ ಅಂಶಗಳನ್ನು ಸೇರಿಸುವ ಮೂಲಕ ವಿಟಮಿನ್ ಬಿ1 ಅನ್ನು ಪಡೆಯಬಹುದು. ಅವುಗಳಲ್ಲಿ ಸನ್ ಫ್ಲವರ್ ಸೀಡ್ಸ್ ಬಹಳ ಮುಖ್ಯವಾದವು. ಸೂರ್ಕಾಂತಿಯಲ್ಲಿ ವಿಟಮಿನ್ ಬಿ1 ಸಾಕಷ್ಟು ಒಟ್ಟು ಇರುತ್ತದೆ. 100 ಗ್ರಾಂಗಳ ಸೂರ್ಯಕಾಂತಿ ಬೀಜಗಳಲ್ಲಿ 0.106 ಮಿಗ್ರಾಂ ವಿಟಮಿನ್ ಬಿ1 ಪಡೆಯಬಹುದು ಎಂದು ವೈದ್ಯರು ಹೇಳುತ್ತಾರೆ.(ಏಜೆನ್ಸೀಸ್)
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.