ಇಂದಿನ ಕಾಲದಲ್ಲಿ ಜೀವನಶೈಲಿ ಸಂಬಂಧಿತ ಕಾಯಿಲೆಗಳ ಅಪಾಯವು ಬಹಳಷ್ಟು ಹೆಚ್ಚಾಗಿದೆ. ಅದಕ್ಕಾಗಿಯೇ ಆರೋಗ್ಯ ತಜ್ಞರು ಯುವಕರು ಸೇರಿದಂತೆ ಎಲ್ಲಾ ವಯೋಮಾನದ ಜನರಲ್ಲಿ ದೈಹಿಕವಾಗಿ ಸಕ್ರಿಯರಾಗಿರುವುದು ಮತ್ತು ಆರೋಗ್ಯಕರ ಆಹಾರವನ್ನು ಸೇವಿಸುವ ಬಗ್ಗೆ ಅರಿವು ಮೂಡಿಸುವುದನ್ನು ಹೆಚ್ಚಾಗಿ ಕಾಣಬಹುದು.(Health Tips)
ದೈಹಿಕವಾಗಿ ಸಕ್ರಿಯರಾಗಿರುವುದರಿಂದ ಮಧುಮೇಹ, ಬೊಜ್ಜು, ನಿದ್ರೆಯ ಸಮಸ್ಯೆ, ಆತಂಕ, ಖಿನ್ನತೆ ಮುಂತಾದ ಆರೋಗ್ಯ ಸಂಬಂಧಿತ ಸಮಸ್ಯೆ ಸೇರಿದಂತೆ ಅನೇಕ ರೋಗಗಳ ಅಪಾಯವನ್ನು ತಪ್ಪಿಸಬಹುದು. ದೈಹಿಕವಾಗಿ ಸಕ್ರಿಯರಾಗಿರಲು ನಡಿಗೆ ಉತ್ತಮ ಮಾರ್ಗವೆಂದು ಪರಿಗಣಿಸಲಾಗಿದೆ. ಕರುಳಿನ ಆರೋಗ್ಯಕ್ಕೆ ನಡಿಗೆ ಸಹಕಾರಿ ಎಂಬುದು ನಿಮಗೆ ಗೊತ್ತೆ. ಹಾಗಾದ್ರೆ 10 ನಿಮಿಷ ನಡೆಯುವುದರಿಂದ ಏನೆಲ್ಲಾ ಆರೋಗ್ಯ ಪ್ರಯೋಜನ ಇದೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ.
- ನಡೆಯುವುದರಿಂದ ಜಠರಗರುಳಿನ ವ್ಯವಸ್ಥೆಯ ಮೂಲಕ ಆಹಾರದ ಉತ್ತಮ ಚಲನೆಯನ್ನು ಉತ್ತೇಜಿಸುತ್ತದೆ. ಇದು ಊತ ಮತ್ತು ಅಸ್ವಸ್ಥತೆಯನ್ನು ಕಡಿಮೆ ಮಾಡುತ್ತದೆ.
- ನಡಿಗೆಯು ಕಾರ್ಟಿಸೋಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದು IBS (ಇರಿಟೇಬಲ್ ಬವೆಲ್ ಸಿಂಡ್ರೋಮ್) ನಂತಹ ಒತ್ತಡ ಪ್ರೇರಿತ ಕರುಳಿನ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ.
- ಇದಲ್ಲದೆ ನೀವು ಪ್ರತಿದಿನ ನಡೆದರೆ ಅದು ರಕ್ತದ ಹರಿವು ಮತ್ತು ಕರುಳಿನ ಚಟುವಟಿಕೆಯನ್ನು ಹೆಚ್ಚಿಸುತ್ತದೆ ಮತ್ತು ಕರುಳಿನ ಚಲನೆಯು ಹೆಚ್ಚು ಉತ್ತಮ ಮತ್ತು ನಿಯಮಿತವಾಗುತ್ತದೆ.
- ತಜ್ಞರ ಪ್ರಕಾರ, ನಡಿಗೆ ನಿಮ್ಮ ಕರುಳಿನ ಬ್ಯಾಕ್ಟೀರಿಯಾವನ್ನು ವೈವಿಧ್ಯಗೊಳಿಸಲು ಸಹಾಯ ಮಾಡುತ್ತದೆ. ಇದು ಒಟ್ಟಾರೆ ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ. ಪ್ರತಿ ಮೈಲಿಯ ನಂತರ ಹತ್ತು ನಿಮಿಷಗಳ ಕಾಲ ನಡೆಯಲು ಪ್ರಯತ್ನಿಸಬೇಕು. ಇದು ನಿಮ್ಮ ಕರುಳಿನ ಆರೋಗ್ಯವನ್ನು ಉತ್ತಮವಾಗಿಡುತ್ತದೆ ಎಂದು ಹೇಳುತ್ತಾರೆ.