ನಿಮ್ಮ ಕಣ್ಣಿನ ಕೆಳಗೆ ಇರುವ ಕಪ್ಪು ಕಲೆ ನಿಮ್ಮನ್ನು ಚಿಂತೆ ಮಾಡುವಂತೆ ಮಾಡಿದೆಯೇ.. ಸುಂದರ ಮುಖದ ಮೇಲೆ ಈ ಡಾರ್ಕ್ ಸರ್ಕಲ್ ನಿಮ್ಮ ನೋಟವನ್ನು ಉತ್ತಮವಾಗಿ ಕಾಣಲು ಬಿಡುವುದಿಲ್ಲ. ಹಾಗಾದ್ರೆ ಅದನ್ನು ಕಡಿಮೆ ಮಾಡಲು ಏನು ಮಾಡುವುದು ಎಂದು ಯೋಚಿಸುತ್ತಿದ್ದರೆ, ನಿಮಗಾಗಿಯೇ ಈ ಮನೆಮದ್ದು(Health Tips).
ಐ ಮಾಸ್ಕ್ಗೆ ಪರಿಹಾರ ಬಳಸಬಹುದು. ಆದರೆ ಯಾವುದೇ ಪರಿಹಾರವು ಒಂದೇ ಬಾರಿಗೆ ಕೆಲಸ ಮಾಡುವುದಿಲ್ಲ. ಆದ್ದರಿಂದ ನೀವು ಪ್ರತಿ ಮೂರನೇ ದಿನಕ್ಕೊಮ್ಮೆ ನಾವು ಹೇಳಿರುವ ಟಿಪ್ಸ್ ಅನ್ನು ಅನುಸರಿಸುತ್ತಾ ಬಂದರೆ ಕಣ್ಣಿನ ಕೆಳಗಿನ ಕಪ್ಪು ವಲಯಗಳು ಕಡಿಮೆಯಾಗಲು ಪ್ರಾರಂಭಿಸುತ್ತವೆ. ನಿಮ್ಮ ಗುಡ್ ಲುಕ್ ಮತ್ತೆ ಬರುತ್ತದೆ.
ನಮ್ಮ ಜೀವನ ಶೈಲಿ ಹಾಗೂ ಕಳಪೆ ಆಹಾರ ಪದ್ಧತಿ ಕಣ್ಣುಗಳ ಕೆಳಗೆ ಕಪ್ಪು ವರ್ತುಲಗಳಿಗೆ ಕಾರಣಗಳಿರಬಹುದು. ಇದಕ್ಕಾಗಿ ಮೊದಲನೆಯದಾಗಿ ನೀವು ನಿದ್ರೆಯನ್ನು ಸರಿಯಾಗಿ ಮಾಡಬೇಕು. ನಿಮ್ಮ ಆಹಾರ ಮತ್ತು ವ್ಯಾಯಾಮವನ್ನು ತಪ್ಪಿಸಬಾರದು. ನಿಮ್ಮ ಕಣ್ಣುಗಳನ್ನು ಆರೋಗ್ಯವಾಗಿಡಲು ವೈದ್ಯರ ಸಲಹೆಯಂತೆ ಔಷಧಿಯನ್ನು ತೆಗೆದುಕೊಳ್ಳುವುದು ಮುಖ್ಯವಾಗಿದೆ. ಅದರ ಜತಗೆ ಈ ಮನೆಮದ್ದನ್ನು ಬಳಸಿ
ಕಪ್ಪು ವರ್ತುಲಗಳಿಗೆ ಅತ್ಯಂತ ಶಕ್ತಿಶಾಲಿ ಪರಿಹಾರವೆಂದರೆ ಆಲೂಗೆಡ್ಡೆ ರಸ. ಇದು ಕಣ್ಣುಗಳ ಕೆಳಗಿರುವ ಡಾರ್ಕ್ ಸರ್ಕಲ್ ಅನ್ನು ಕಡಿಮೆ ಮಾಡುವುದರ ಜತೆಗೆ ಪಿಗ್ಮೆಂಟೇಶನ್ ಅನ್ನು ಕಡಿಮೆ ಮಾಡಲು ಕೆಲಸ ಮಾಡುತ್ತದೆ. ಇದಲ್ಲದೆ ಇದು ನೈಸರ್ಗಿಕ ಶುದ್ಧೀಕರಣ ಗುಣಗಳನ್ನು ಹೊಂದಿದೆ. ಇದು ಮುಖದ ಮೇಲಿನ ಕಲೆಗಳು ಕಡಿಮೆ ಮಾಡಲು ಸಹ ಪ್ರಯೋಜನಕಾರಿಯಾಗಿದೆ.
ಆಲೂಗೆಡ್ಡೆ ರಸದಂತೆಯೇ ಕಾಫಿ ಕೂಡ ಡಾರ್ಕ್ ಸರ್ಕಲ್ ಕಡಿಮೆಮಾಡಲು ಪ್ರಯೋಜನಕಾರಿಯಾಗಿದೆ. ಇದು ಆಂಟಿ-ಆಕ್ಸಿಡೆಂಟ್‌ಗಳಲ್ಲಿ ಸಮೃದ್ಧವಾಗಿದೆ. ಇದು ಕಣ್ಣುಗಳ ಕೆಳಗೆ ಊತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದಲ್ಲದೆ ಇದು ಚರ್ಮದ ಟೋನ್ ಅನ್ನು ಸಮವಾಗಿ ಇಡಲು ಸಹ ಕೆಲಸ ಮಾಡುತ್ತದೆ.
ಗಮನಿಸಿ: ನಿಮ್ಮ ಚರ್ಮವು ಸೂಕ್ಷ್ಮವಾಗಿರಬಹುದು ಆದ್ದರಿಂದ ಮೊದಲು ಪ್ಯಾಚ್ ಪರೀಕ್ಷೆಯನ್ನು ಮಾಡುವುದನ್ನು ಮರೆಯಬೇಡಿ. ನಿಮಗೆ ಯಾವುದೇ ರೀತಿಯ ಅಲರ್ಜಿ ಉಂಟಾದರೆ ವೈದ್ಯರನ್ನು ಸಂಪರ್ಕಿಸಿ ನಂತರ ಬಳಸಿ.