ಲೈಫ್‌ಸ್ಟೈಲ್

ಕಾರಣವಿಲ್ಲದೆ ಅನಾವಶ್ಯಕವಾಗಿ ಕೋಪ ಮಾಡಿಕೊಳ್ಳುತ್ತಿದ್ದೀರಾ?; ನಿಮ್ಮ ಗೊಂದಲಕ್ಕೆ ಇಲ್ಲಿದೆ ಪರಿಹಾರ | Health Tips

ಮಾನವನ ಸ್ವಭಾವದಲ್ಲಿ ಕೋಪಗೊಳ್ಳುವುದು ಸಹಜ. ಏನಾದರೂ ತಪ್ಪಾದಾಗ ಅಥವಾ ಇಷ್ಟವಾಗದಂತೆ ನಡೆದುಕೊಂಡಾಂಗ ಕೋಪಗೊಳ್ಳುತ್ತಾರೆ. ಆದರೆ ಅನೇಕ ಬಾರಿ ನಮಗೆ ಯಾವುದೇ ಕಾರಣವಿಲ್ಲದೆ ನಮ್ಮ ಪ್ರೀತಿಪಾತ್ರರ ಮೇಲೆ ಅಥವಾ ನಮ್ಮ ಮೇಲೆ ಕೋಪಗೊಳ್ಳಲು ಪ್ರಾರಂಭಿಸುತ್ತೇವೆ. ಏಕಿರಬಹುದು ಎಂದು ಎಂದಾದರೂ ನೀವು ಯೋಚಿಸಿದ್ದೀರಾ. ಅನಗತ್ಯವಾಗಿ ಕೋಪ ಮಾಡಿಕೊಳ್ಳಲು ಕಾರಣ ಏನು ಎಂಬುದನ್ನು ಇಲ್ಲಿ ತಿಳಿಸಲಾಗಿದೆ.(Health Tips)

ಅನಗತ್ಯ ಕೋಪಕ್ಕೆ ಕಾರಣ

ಒತ್ತಡ ಮತ್ತು ಹತಾಶೆ

ನಿಮ್ಮ ಕೆಲಸದಲ್ಲಿ ನೀವು ಒತ್ತಡದಲ್ಲಿದ್ದರೆ ಅಥವಾ ಸಣ್ಣ ವಿಷಯಗಳಲ್ಲಿ ನಿರಾಶೆಗೊಳ್ಳಲು ಪ್ರಾರಂಭಿಸಿದರೆ ಅದು ನಿಮ್ಮ ಕೋಪದ ಸ್ವಭಾವವನ್ನು ಮತ್ತಷ್ಟು ಹೆಚ್ಚಿಸಬಹುದು. ನಿಮ್ಮ ಪ್ರೀತಿಪಾತ್ರರ ಮೇಲೆ ಅಥವಾ ನಿಮ್ಮ ಮೇಲೆ ಕೋಪಗೊಳ್ಳಬಹುದು.

ಹಾರ್ಮೋನ್ ಅಸಮತೋಲನ

ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ, ಟೆಸ್ಟೋಸ್ಟೆರಾನ್ ಹಾರ್ಮೋನ್‌ನಲ್ಲಿನ ಏರಿಳಿತಗಳು ಹಠಾತ್ ಪ್ರವೃತ್ತಿ, ಕೋಪ ಮತ್ತು ಕಿರಿಕಿರಿಯನ್ನು ಹೆಚ್ಚಿಸುತ್ತದೆ. ವಿಶೇಷವಾಗಿ ಮಹಿಳೆಯರಲ್ಲಿ ಟೆಸ್ಟೋಸ್ಟೆರಾನ್ ಹಾರ್ಮೋನ್ ಅಸಮತೋಲನವು ಋತುಚಕ್ರದ ಸಮಯದಲ್ಲಿ ಸಂಭವಿಸುತ್ತದೆ.

ಮಾದಕ ವ್ಯಸನ

ನೀವು ಆಲ್ಕೋಹಾಲ್, ತಂಬಾಕು ಅಥವಾ ಇನ್ನಾವುದೇ ರೀತಿಯ ಅಮಲು ಪದಾರ್ಥವನ್ನು ಸೇವಿಸಿದರೆ ಅದು ಮನುಷ್ಯನಲ್ಲಿನ ಆಕ್ರಮಣಕಾರಿ ಸ್ವಭಾವವನ್ನು ಹೆಚ್ಚಿಸುತ್ತದೆ. ಮತ್ತು ಇದು ಕೌಟುಂಬಿಕ ಹಿಂಸೆ ಮತ್ತು ಸಾಮಾಜಿಕ ಆತಂಕವನ್ನು ಹೆಚ್ಚಿಸುತ್ತದೆ.

ಸಾಮಾಜಿಕ ಪ್ರಚೋದಕ

ವರದಿಯ ಪ್ರಕಾರ, ಬಾಲ್ಯದಲ್ಲಿ ಕೌಟುಂಬಿಕ ಹಿಂಸಾಚಾರ, ನಿಂದನೆ ಮತ್ತು ನಕಾರಾತ್ಮಕ ವಾತಾವರಣದಲ್ಲಿ ಬೆಳೆಯುವ ಮಕ್ಕಳು ಬೆಳೆದಾಗ ಆಕ್ರಮಣಕಾರಿಯಾಗುವ ಸಾಧ್ಯತೆಗಳು ಹೆಚ್ಚು, ಆದ್ದರಿಂದ ಮಕ್ಕಳನ್ನು ಯಾವಾಗಲೂ ಧನಾತ್ಮಕ ಮತ್ತು ಆರೋಗ್ಯಕರ ವಾತಾವರಣದಲ್ಲಿ ಬೆಳೆಸಬೇಕು.

ಜೆನೆಟಿಕ್ಸ್

ಕೆಲವು ಅಧ್ಯಯನಗಳು ಮಾನವರಲ್ಲಿ ಆಕ್ರಮಣಕಾರಿ ಸ್ವಭಾವವು ಆನುವಂಶಿಕ ಪ್ರಭಾವದಿಂದ ಕೂಡಿದೆ ಎಂದು ಹೇಳುತ್ತದೆ. ಹೆತ್ತವರು ಕೋಪದ ಸ್ವಭಾವವನ್ನು ಹೊಂದಿದ್ದರೆ ನಂತರ ಈ ಸಮಸ್ಯೆ ಮಗುವಿನಲ್ಲೂ ಉಂಟಾಗಬಹುದು.

ಕೋಪದ ಸ್ವಭಾವವನ್ನು ನಿಯಂತ್ರಿಸುವುದು ಹೇಗೆ

ನಿಮ್ಮ ಸ್ವಭಾವವು ತುಂಬಾ ಆಕ್ರಮಣಕಾರಿ ಆಗುತ್ತಿದೆ ಎಂದು ನೀವು ಭಾವಿಸಿದರೆ ಮತ್ತು ನೀವು ಸಣ್ಣ ವಿಷಯಗಳಿಗೆ ಕೋಪಗೊಳ್ಳುತ್ತಿದ್ದರೆ ಇದಕ್ಕೆ ಉತ್ತಮ ಪರಿಹಾರವೆಂದರೆ ಧ್ಯಾನ. ನಿಮ್ಮ ಮನಸ್ಸನ್ನು ನೀವು ಎಷ್ಟು ಶಾಂತವಾಗಿರಿಸಿಕೊಳ್ಳುತ್ತೀರೋ, ಯೋಗ ಮತ್ತು ಧ್ಯಾನವನ್ನು ಮಾಡುತ್ತೀರೋ ಅಷ್ಟು ಮನಸ್ಸಿಗೆ ಶಾಂತಿ ಸಿಗುತ್ತದೆ ಮತ್ತು ನಿಮ್ಮ ಕೋಪದ ಪ್ರವೃತ್ತಿಯು ಕ್ರಮೇಣ ಕಡಿಮೆಯಾಗುತ್ತದೆ.