ಗೋಡಂಬಿಯನ್ನು ಆರೋಗ್ಯಕರ ತಿಂಡಿ ಎಂದು ಪರಿಗಣಿಸಲಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ನಕಲಿ ಗೋಡಂಬಿಗಳೂ ಸಿಗುತ್ತಿವೆ. ಇನ್ನೂ ದೀಪಾವಳಿ ಹಬ್ಬ ಹತ್ತಿರದಲ್ಲಿದೆ. ಹಬ್ಬದಂದು ಸಿಹಿತಿಂಡಿಗಳನ್ನು ಉಡುಗೊರೆಯಾಗಿ ನೀಡಲಾಗುತ್ತದೆ. ಅದರಲ್ಲೂ ದೀಪಾವಳಿಯಲ್ಲಿ ಡ್ರೈಫ್ರೂಟ್ಸ್ ಕೊಡುವ ಅಭ್ಯಾಸ ಇದೆ. ಆದ್ದರಿಂದ ಬೇಡಿಕೆಯನ್ನು ಪೂರೈಸಲು ಉದ್ಯಮಿಗಳು ನಕಲಿ ಮತ್ತು ಹಳೆ ಗೋಡಂಬಿಯನ್ನು ಬಳಸುತ್ತಾರೆ ಎಂಬುದು ನಿಮಗೆ ತಿಳಿದಿದೆಯೇ?. ಆದ್ದರಿಂದ ನಕಲಿ ಮತ್ತು ಅಸಲಿ ನಡುವಿನ ವ್ಯತ್ಯಾಸ ತಿಳಿಯುವುದು ಹೇಗೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ.(Health Tips)
ಆರೋಗ್ಯಕರ ತಿಂಡಿಯು ಅನಾರೋಗ್ಯಕ್ಕೆ ದಾರಿ ಮಾಡಿಕೊಡುತ್ತದೆ ಎಂದರೆ ಎಚ್ಚರವಹಿಸುವುದು ಮುಖ್ಯವಾಗುತ್ತದೆ. ನಕಲಿ ಗೋಡಂಬಿ ಸೇವಿಸುವುದರಿಂದ ಎಷ್ಟೆಲ್ಲಾ ಅನಾನುಕೂಲವಾಗುತ್ತದೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ.
ಮೊದಲನೆಯದಾಗಿ ನಿಜವಾದ ಗೋಡಂಬಿಯ ಬಣ್ಣ ಬಿಳಿಯಾಗಿದ್ದರೆ, ನಕಲಿ ಗೋಡಂಬಿ ತಿಳಿ ಹಳದಿ ಬಣ್ಣದ್ದಾಗಿದೆ. ಬಣ್ಣದ ಈ ವ್ಯತ್ಯಾಸವನ್ನು ಒಂದು ನೋಟದಲ್ಲಿ ಕಾಣಬಹುದು. ಆದ್ದರಿಂದ ಗೋಡಂಬಿಯನ್ನು ಖರೀದಿಸುವಾಗ ಅವುಗಳ ಬಣ್ಣಕ್ಕೆ ಗಮನ ಕೊಡಿ.
ನಿಜವಾದ ಗೋಡಂಬಿಯ ಗಾತ್ರವೂ ಮುಖ್ಯವಾಗಿದೆ. ನಿಜವಾದ ಗೋಡಂಬಿ ಸುಮಾರು 1 ಇಂಚು ಉದ್ದ ಮತ್ತು ಸ್ವಲ್ಪ ದಪ್ಪವಾಗಿರುತ್ತದೆ. ಗಾತ್ರದಲ್ಲಿ ವ್ಯತ್ಯಾಸವಿದ್ದರೆ ಗೋಡಂಬಿ ನಕಲಿಯಾಗಿರಬಹುದು ಎಂಬುದನ್ನು ಅರ್ಥಮಾಡಿಕೊಳ್ಳಿ. ಅವುಗಳ ಆಕಾರ ಮತ್ತು ವಿನ್ಯಾಸವನ್ನು ನೋಡುವ ಮೂಲಕ ನೀವು ನಕಲಿ ಗೋಡಂಬಿಯನ್ನು ಗುರುತಿಸಬಹುದು.
ನೈಜ ಮತ್ತು ನಕಲಿ ಗೋಡಂಬಿ ರುಚಿಯಲ್ಲಿ ಸ್ವಲ್ಪ ವ್ಯತ್ಯಾಸವಿದೆ. ನಿಜವಾದ ಗೋಡಂಬಿ ಎಂದಿಗೂ ಹಲ್ಲುಗಳಿಗೆ ಅಂಟಿಕೊಳ್ಳುವುದಿಲ್ಲ ಆದರೆ ನಕಲಿ ಗೋಡಂಬಿಗಳು ಹಲ್ಲುಗಳ ನಡುವೆ ಸಿಲುಕಿಕೊಳ್ಳುತ್ತವೆ. ಹೆಚ್ಚುವರಿಯಾಗಿ ನಕಲಿ ಗೋಡಂಬಿಗಳನ್ನು ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ. ನಿಜವಾದ ಗೋಡಂಬಿಯನ್ನು ಅಗಿಯುವಾಗ ಸುಲಭವಾಗಿ ಒಡೆಯುತ್ತದೆ ಹಾಗೂ ಜೀರ್ಣಿಸಿಕೊಳ್ಳಲು ಸುಲಭವಾಗುತ್ತದೆ.
ನಿಜವಾದ ಗೋಡಂಬಿಯನ್ನು ಗುರುತಿಸುವ ಇನ್ನೊಂದು ವಿಧಾನವೆಂದರೆ ಅವುಗಳ ಗುಣಮಟ್ಟವನ್ನು ಅರ್ಥಮಾಡಿಕೊಳ್ಳುವುದು. ನಿಜವಾದ ಗೋಡಂಬಿ ದೀರ್ಘಕಾಲದವರೆಗೆ ಕೆಡುವುದಿಲ್ಲ, ಆದರೆ ನಕಲಿ ಗೋಡಂಬಿಗಳು ಬೇಗನೆ ಕೆಡುತ್ತವೆ. ಕಳಪೆ ಗುಣಮಟ್ಟದ ಗೋಡಂಬಿಗಳು ಕೀಟಗಳಿಗೆ ಗುರಿಯಾಗುತ್ತವೆ. ಸರಿಯಾಗಿ ಸಂಗ್ರಹಿಸಿದರೆ ನಿಜವಾದ ಗೋಡಂಬಿ ಆರು ತಿಂಗಳವರೆಗೆ ತಾಜಾವಾಗಿರುತ್ತದೆ.