ಲೈಫ್‌ಸ್ಟೈಲ್

ಕಣ್ಣಿನ ಅಲರ್ಜಿಗೆ ಸಿಂಪಲ್​ ಮನೆಮದ್ದು; ನಿಮಗಾಗಿ ಈ ಹೆಲ್ತಿ ಟಿಪ್ಸ್​​ | Health Tips

ಪ್ರಸ್ತುತ ಜೀವನ ಶೈಲಿಯಲ್ಲಿ ಕಣ್ಣಿನ ಅಲರ್ಜಿಯು ಸಾಮಾನ್ಯ ಸಮಸ್ಯೆಯಾಗಿದೆ, ವಿಶೇಷವಾಗಿ ಮಕ್ಕಳಲ್ಲಿ. ಇದು ತುರಿಕೆ, ಕಣ್ಣು ಕೆಂಪಗಾಗುವುದು, ಊತದಂತಹ ಲಕ್ಷಣಗಳನ್ನು ಹೊಂದಿರಬಹುದು. ಕಣ್ಣಿನ ಅಲರ್ಜಿಗೆ ಧೂಳು, ಸಾಕುಪ್ರಾಣಿಗಳ ಕೂದಲು, ತಲೆಹೊಟ್ಟು, ಹವಾಮಾನದಲ್ಲಿನ ಬದಲಾವಣೆಗಳು ಮತ್ತು ಮಾಲಿನ್ಯಕಾರಕ ಪರಿಸರದಲ್ಲಿ ಇರುವುದು ಹೀಗೆ ಹಲವು ಕಾರಣಗಳಿರುತ್ತವೆ.(Health Tips)

ಈ ರೀತಿಯ ಕಣ್ಣಿನ ಅಲರ್ಜಿಗಳಿಗೆ ಅನೇಕ ಮನೆಮದ್ದುಗಳನ್ನು ನೀವು ಪ್ರಯತ್ನಿಸಿರಬಹುದು. ಅದ್ಯಾವುದು ಉತ್ತಮ ಫಲಿತಾಂಶ ನೀಡಿರದಿದ್ದರೆ ನೀವು ಈ ಕೆಳಗೆ ತಿಳಿಸಿರುವ ವಿಧಾನಗಳನ್ನು ಅನುಸರಿಸಬಹುದು.

  • ರೋಸ್ ವಾಟರ್ ಮತ್ತು ಜೇನುತುಪ್ಪದಂತಹ ಪದಾರ್ಥಗಳಿಂದ ತಯಾರಿಸಿದ ಹರ್ಬಲ್ ಐ ಡ್ರಾಪ್ಸ್​​​ ಅಲರ್ಜಿಯ ಲಕ್ಷಣಗಳನ್ನು ಶಮನಗೊಳಿಸಲು ಮತ್ತು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
  • ಉರಿಯೂತ ನಿವಾರಕ ಗುಣಗಳಿಗೆ ಹೆಸರುವಾಸಿಯಾದ ತ್ರಿಫಲಾವನ್ನು ಕಣ್ಣುಗಳನ್ನು ಸ್ವಚ್ಛಗೊಳಿಸಲು ಮತ್ತು ಕಿರಿಕಿರಿಯನ್ನು ಕಡಿಮೆ ಮಾಡಲು ಐ ವಾಶ್ ಆಗಿ ಬಳಸಬಹುದು.
  • ಬ್ಯಾಕ್ಟೀರಿಯಾ ವಿರೋಧಿ ಮತ್ತು ತಂಪಾಗಿಸುವ ಗುಣಲಕ್ಷಣಗಳಿಗೆ ಹೆಸರುವಾಸಿಯಾದ ಬೇವಿನ ಎಲೆಯ ಸಾರ. ಕಣ್ಣಿನ ಅಲರ್ಜಿಯಿಂದ ಉಂಟಾಗುವ ಕೆಂಪು ಮತ್ತು ಊತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
  • ಕಣ್ಣಿನ ಸುತ್ತ ಔಷಧವಾಗಿ ತುಪ್ಪವನ್ನು ಅಪ್ಲೈ ಮಾಡಬಹುದು. ಊತವನ್ನು ಕಡಿಮೆಗೊಳಿಸುತ್ತದೆ ಮತ್ತು ಕಣ್ಣುಗಳಲ್ಲಿ ತೇವಾಂಶವನ್ನು ಕಾಪಾಡಿಕೊಳ್ಳುತ್ತದೆ. ಇದರಿಂದಾಗಿ ಅಲರ್ಜಿಯಿಂದ ಉಂಟಾಗುವ ಶುಷ್ಕತೆ ಮತ್ತು ಕಿರಿಕಿರಿಯಿಂದ ಪರಿಹಾರವನ್ನು ನೀಡುತ್ತದೆ.

ಈ ರೀತಿಯ ಆಯುರ್ವೇದದ ಔಷಧಗಳು ರೋಗಲಕ್ಷಣಗಳನ್ನು ಮಾತ್ರ ಪರಿಗಣಿಸುವುದಿಲ್ಲ, ಭವಿಷ್ಯದ ಅಲರ್ಜಿಯನ್ನು ತಡೆಗಟ್ಟಲು ಮಗುವಿನ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುವತ್ತ ಗಮನಹರಿಸುತ್ತದೆ. ಆಯುರ್ವೇದ ಚಿಕಿತ್ಸೆಗಳು ನೈಸರ್ಗಿಕ ಗಿಡಮೂಲಿಕೆಗಳು ಮತ್ತು ಔಷಧಿಗಳನ್ನು ಬಳಸುತ್ತವೆ. ಇದು ಸೂಕ್ಷ್ಮ ಕಣ್ಣುಗಳ ಮಕ್ಕಳಿಗೆ ಪ್ರಯೋಜನಕಾರಿಯಾಗಿದೆ. ಮೇಲೆ ನೀಡಿರುವ ಸಲಹೆಯನ್ನು ಬಳಸುವ ಮುನ್ನ ವೈದ್ಯರನ್ನು ಸಂಪರ್ಕಿಸಿ.