ಲೈಫ್‌ಸ್ಟೈಲ್

ಪಾದಗಳಲ್ಲಿನ ಈ ಬದಲಾವಣೆಯನ್ನು ನಿರ್ಲಕ್ಷಿಸಬೇಡಿ; ಅನಾರೋಗ್ಯದ ಮುನ್ಸೂಚನೆ | Health Tips

ಅನಾರೋಗ್ಯಕ್ಕೆ ಒಳಗಾಗುವ ಮುನ್ನ ನಮ್ಮ ದೇಹವು ನಮಗೆ ಕೆಲವು ಸಂಕೇತಗಳನ್ನು ನೀಡುತ್ತದೆ. ಆ ಸಂಕೇತಗಳು ನಮ್ಮ ಕಣ್ಣಿಗೆ ಕಂಡರೂ ನಾವದನ್ನೂ ನಿರ್ಲಕ್ಷಿಸುತ್ತೇವೆ. ಅದರ ಬದಲಿಗೆ ಸಮಯಕ್ಕೆ ಸರಿಯಾಗಿ ಬದಲಾವಣೆಗಳನ್ನು ಅರ್ಥಮಾಡಿಕೊಂಡರೆ ಗಂಭೀರ ಕಾಯಿಲೆಗಳಿಗೆ ಬಲಿಯಾಗುವುದನ್ನು ತಪ್ಪಿಸಬಹುದು. ಹಾಗಾದ್ರೆ ಇಂದು ನಾವು ಪಾದಗಳಲ್ಲಿ ಆಗುವ ಬದಲಾವಣೆ ಯಾವ ಕಾಯಿಲೆಯ ಮುನ್ಸೂಚನೆಯಾಗಿರುತ್ತದೆ ಎಂಬುದರ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಪಾದಗಳಲ್ಲಿ ಬದಲಾವಣೆ ಏನನ್ನು ಸೂಚಿಸುತ್ತದೆ?:

  • ಊತದ ಕಾಲು: ಜನರು ಸಾಮಾನ್ಯವಾಗಿ ಕಾಲುಗಳ ಊತವನ್ನು ಸಾಮಾನ್ಯ ಸಮಸ್ಯೆ ಎಂದು ಪರಿಗಣಿಸುತ್ತಾರೆ. ಆದರೆ ಇದು ಮೂತ್ರಪಿಂಡದ ಕಾಯಿಲೆ, ಅಧಿಕ ರಕ್ತದೊತ್ತಡ ಮತ್ತು ಅನಾರೋಗ್ಯಕರ ಯಕೃತ್ತು ಎಂದು ಸೂಚಿಸುತ್ತದೆ.
  • ಶೀತದ ಪಾದಗಳು: ಅನೇಕ ಕಾರಣಗಳಿಗಾಗಿ ಪಾದಗಳು ತಣ್ಣಗಾಗಬಹುದು. ಉದಾಹರಣೆಗೆ ರಕ್ತಹೀನತೆ, ವಿಟಮಿನ್ ಕೊರತೆ, ಅಥವಾ ಕಾಲುಗಳ ನರಗಳಲ್ಲಿನ ಒತ್ತಡ. ಈ ಸಮಸ್ಯೆಯು ಮಧುಮೇಹ, ವಿಟಮಿನ್ ಬಿ-12 ಕೊರತೆ ಅಥವಾ ಇತರ ಆರೋಗ್ಯ ಸಮಸ್ಯೆಗಳ ಸಂಕೇತವಾಗಿರಬಹುದು.
  • ಸ್ಪೈಡರ್​​ ನರಗಳು: ಕಾಲುಗಳಲ್ಲಿ ಹಸಿರು ಮತ್ತು ಕೆಂಪು ಬಣ್ಣದ ನರಗಳು ಕಾಣುವುದು ಅಧಿಕ ರಕ್ತದೊತ್ತಡದ ಸಂಕೇತವಾಗಿದೆ. ಗರ್ಭಾವಸ್ಥೆಯಲ್ಲಿಯೂ ಇದು ಸಂಭವಿಸಬಹುದು. ಇದಲ್ಲದೆ ಗರ್ಭನಿರೋಧಕ ಮಾತ್ರೆಗಳನ್ನು ಅತಿಯಾಗಿ ಸೇವಿಸಿದ ಮಹಿಳೆಯರಲ್ಲಿ ಇಂತಹ ರಕ್ತನಾಳಗಳು ಕಂಡುಬರುತ್ತವೆ.
  • ಬಿರುಕು ಬಿಟ್ಟ ಪಾದ: ಬಿರುಕು ಬಿಟ್ಟ ಹಿಮ್ಮಡಿಗಳನ್ನು ಗಂಭೀರ ಸಮಸ್ಯೆ ಎಂದು ಪರಿಗಣಿಸಲಾಗುವುದಿಲ್ಲ. ಆದರೆ ಒಡೆದ ಹಿಮ್ಮಡಿಗಳು ದೇಹದಲ್ಲಿ ವಿಟಮಿನ್ ಬಿ-12 ಕೊರತೆಯಿದೆ ಎಂಬುದನ್ನು ಸೂಚಿಸುತ್ತದೆ. ಸಕ್ಕರೆ ಕಾಯಿಲೆ ಇದ್ದವರಿಗೆ ಮನೆಯಲ್ಲಿದ್ದರು ಪಾದದಲ್ಲಿ ಬಿರುಕು ಉಂಟಾಗಬಹುದು.
  • ಪಾದಗಳಲ್ಲಿ ಜುಮ್ಮೆನಿಸುವಿಕೆ: ಇದಕ್ಕೆ ಲವು ಕಾರಣಗಳಿವೆ. ಉದಾಹರಣೆಗೆ ಪಾದಗಳ ನಾಳಗಳಲ್ಲಿನ ಒತ್ತಡ, ವಿಟಮಿನ್​ಗಳ ಕೊರತೆ ಅಥವಾ ರಕ್ತಹೀನತೆ. ಈ ಸಮಸ್ಯೆಯು ಮಧುಮೇಹ, ವಿಟಮಿನ್ ಬಿ 12 ಕೊರತೆ ಅಥವಾ ಇತರ ಆರೋಗ್ಯ ಸಮಸ್ಯೆಗಳ ಸಂಕೇತವಾಗಿರಬಹುದು.