ಲೈಫ್‌ಸ್ಟೈಲ್

ಕಡಲೆಕಾಯಿ ಸೇವನೆಯಿಂದಾಗುವ ಅಡ್ಡಪರಿಣಾಮದ ಅರಿವಿದೆಯೇ?; ಇಲ್ಲಿದೆ ಉಪಯುಕ್ತ ಮಾಹಿತಿ | Health Tips

ಬಾದಾಮಿ, ವಾಲ್​ನಟ್ಸ್​​ ಮತ್ತೊ ಗೋಡಂಬಿಗಳಂತೆ ಕಡಲೆಕಾಯಿಯು ಕೂಡ ಸಮೃದ್ಧ ಪ್ರಮಾಣದ ಪೋಷಕಾಂಶಗಳನ್ನು ಹೊಂದಿರುತ್ತದೆ. ಆದರೆ ಇದು ಹಸಿರು ಬಟಾಣಿ, ಸೋಯಾಬೀನ್ ಮತ್ತು ಮಸೂರಗಳಂತೆಯೇ ಒಂದೇ ಕುಟುಂಬಕ್ಕೆ ಸೇರಿದೆ. ಆರೋಗ್ಯಕರ ಕೊಬ್ಬು, ಪ್ರೊಟೀನ್ ಮತ್ತು ಅಗತ್ಯ ವಿಟಮಿನ್‌ಗಳು ಪೌಷ್ಠಿಕಾಂಶಗಳು ಕಡಲೆಕಾಯಿಯಲ್ಲಿ ಕಂಡುಬರುತ್ತವೆ.(Health Tips)

ಇದನ್ನು ಓದಿ:

ಅತಿಯಾದರೆ ಅಮೃತವು ವಿಷ ಎಂಬಂತೆ ಕಡಲೆಕಾಯಿಯನ್ನು ನಿಯಮಿತವಾಗಿ ಸೀಮಿತ ಪ್ರಮಾಣದಲ್ಲಿ ಮಾತ್ರ ಸೇವಿಸಬೇಕು. ನೀವು ಪ್ರತಿದಿನ ಕಡಲೆಕಾಯಿಯನ್ನು ಸೇವಿಸಿದರೆ ಹಲವಾರು ರೀತಿಯ ಅಲರ್ಜಿಯನ್ನು ಅನುಭವಿಸಬೇಕಾಗುತ್ತದೆ. ಕಡಲೆಕಾಯಿಯಲ್ಲಿ ಪ್ರೊಟೀನ್ ಮತ್ತು ನಾರಿನಂಶ ಅಧಿಕವಿರುವಂತೆ ಕ್ಯಾಲೋರಿ ಅಂಶವೂ ಅಧಿಕವಾಗಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಈ ಕಾರಣದಿಂದಾಗಿ ತೂಕವು ವೇಗವಾಗಿ ಹೆಚ್ಚಾಗುತ್ತದೆ. ಇದು ಹೆಚ್ಚು ಒಮೆಗಾ-6 ಕೊಬ್ಬಿನಾಮ್ಲಗಳನ್ನು ಹೊಂದಿರುತ್ತದೆ. ಇದು ದೇಹದಲ್ಲಿ ಉರಿಯೂತವನ್ನು ಉಂಟುಮಾಡುತ್ತದೆ.

ಅತಿಯಾದ ಕಡಲೆಕಾಯಿ ಸೇವನೆಯಿಂದಾಗುವ ಅಡ್ಡಪರಿಣಾಮ

ಅಲರ್ಜಿ ಹೆಚ್ಚಾಗುವ ಸಾಧ್ಯತೆ

ಒಬ್ಬ ವ್ಯಕ್ತಿಗೆ ಕಡಲೆಕಾಯಿ ಅಲರ್ಜಿಯಾಗಿದ್ದರೆ ಅದನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಿದರು ಅಲರ್ಜಿಯನ್ನು ಹೆಚ್ಚಿಸುತ್ತದೆ. ಇದು ಉಸಿರಾಟದ ತೊಂದರೆ, ಚರ್ಮದ ದದ್ದುಗಳು, ಆಸಿಡ್ ರಿಫ್ಲಕ್ಸ್ ಮತ್ತು ಗಂಟಲಿನ ಸುತ್ತ ತುರಿಕೆಗೆ ಕಾರಣವಾಗಬಹುದು. ಇದಲ್ಲದೆ ತಲೆನೋವು, ಗಂಟಲಿನಲ್ಲಿ ಉಬ್ಬಸ, ಕೆಮ್ಮು ಮತ್ತು ಅನಾಫಿಲ್ಯಾಕ್ಸಿಸ್ ಸಹ ಸಂಭವಿಸಬಹುದು.

ಹೆಚ್ಚಿನ ಕೊಬ್ಬನ್ನು ಹೊಂದಿದೆ

ಕಡಲೆಕಾಯಿಯಲ್ಲಿ ಕೊಬ್ಬಿನಾಂಶ ಹೆಚ್ಚಿದ್ದು ಅದು ನಮ್ಮ ಮೆದುಳಿನಲ್ಲಿ ಡೋಪಮೈನ್ ಅನ್ನು ಹೆಚ್ಚಿಸುತ್ತದೆ. ಇದರಿಂದಾಗಿ ನೀವು ಹೆಚ್ಚು ಕಡಲೆಕಾಯಿ ತಿನ್ನುವ ಚಟಕ್ಕೆ ಬೀಳಬಹುದು. ಆದ್ದರಿಂದ ಯಾವಾಗಲೂ ಕಡಲೆಕಾಯಿಯನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಿ. ನಿಮಗೆ ಯಾವುದೇ ರೀತಿಯ ಸಮಸ್ಯೆ ಇದ್ದಲ್ಲಿ ತಜ್ಞರನ್ನು ಸಂಪರ್ಕಿಸಿ.

ಹೊಟ್ಟೆಯಲ್ಲಿ ಅನಿಲವನ್ನು ಉತ್ಪಾದಿಸುತ್ತದೆ

ಹೆಚ್ಚಿನ ಜನರು ಕಡಲೆಕಾಯಿಯನ್ನು ನಿಯಮಿತವಾಗಿ ತಿನ್ನುತ್ತಾರೆ. ಇದು ವಾಯು, ಅನಿಲ ಅಥವಾ ಇತರ ಜೀರ್ಣಕಾರಿ ಸಮಸ್ಯೆಗಳನ್ನು ಉಂಟುಮಾಡಬಹುದು.

ಊತವನ್ನು ಉಂಟುಮಾಡಬಹುದು

ಕಡಲೆಕಾಯಿಯಲ್ಲಿ ಒಮೆಗಾ-6 ಕೊಬ್ಬಿನಾಮ್ಲಗಳಿದ್ದು, ಇದನ್ನು ಅತಿಯಾಗಿ ಸೇವಿಸುವುದರಿಂದ ದೇಹದಲ್ಲಿ ಊತ ಉಂಟಾಗುತ್ತದೆ. ಊತವು ನಿಮ್ಮ ಸಮಸ್ಯೆಗಳನ್ನು ಹೆಚ್ಚಿಸಬಹುದು.

ಕೊಬ್ಬು ಪಿತ್ತಗಲ್ಲುಗಳಾಗುವ ಸಾಧ್ಯತೆ

ಕಡಲೆಕಾಯಿಯಲ್ಲಿ ಹೆಚ್ಚಿನ ಕೊಬ್ಬಿನ ಅಂಶವಿದೆ. ಇದು ಪಿತ್ತಗಲ್ಲುಗಳಿಗೆ ಕಾರಣವಾಗಬಹುದು.