ಲೈಫ್‌ಸ್ಟೈಲ್

Health Tips | ಚಳಿಗಾಲದಲ್ಲಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಲವಂಗದ ನೀರನ್ನು ಕುಡಿದ್ರೆ ಈ ರೋಗಗಳಿಂದ ನೀವು ಸೇಪ್​​..!

Health Tips: ಚಳಿಗಾಲ ಬಂತೆಂದರೆ ಸಾಕು ಹೆಚ್ಚಿನ ಜನರು ಶೀತ, ಕೆಮ್ಮು ಮತ್ತು ಗಂಟಲಿನ ಸಮಸ್ಯೆಗಳಿಗೆ ಒಳಗಾಗುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ಆರೋಗ್ಯವಾಗಿರಲು ಔಷಧಿಗಳೊಂದಿಗೆ ಕೆಲವು ಮನೆ ಮದ್ದುಗಳನ್ನು ಕೂಡ ಮಾಡುತ್ತಾರೆ. ಅಂತಹ ಮನೆಮದ್ದುವಿನ ಕುರಿತು ಇಲ್ಲಿದೆ ವಿಶೇಷ ಮಾಹಿತಿ.

ಆಯುರ್ವೇದ ಔಷಧಿಯೂ ನಮ್ಮ ದೇಹದಲ್ಲಿನ ರೋಗಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಅಂತಹ ಒಂದು ಪರಿಣಾಮಕಾರಿ ವಸ್ತುವೆಂದರೆ ಲವಂಗ. ಮಸಾಲೆಗಳಲ್ಲಿ ಬಳಸುವ ಈ ಲವಂಗದ ನೀರನ್ನು ಕುಡಿಯುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಶೀತ ಮತ್ತು ಜ್ವರದಂತಹ ಅನೇಕ ಕಾಯಿಲೆಗಳನ್ನು ದೂರವಿಡುತ್ತದೆ.

ಲವಂಗದ ನೀರನ್ನು ಕುಡಿಯುವುದರಿಂದ ಆಗುವ ಪ್ರಯೋಜನಗಳು:

ಪಿತ್ತ, ವಾತ, ಮತ್ತು ಕಫ ನಿವಾರಣೆ: ಲವಂಗದ ನೀರು ಈ ಮೂರು ಸಮಸ್ಯೆಗಳಿಗೆ ರಾಮಭಾಣದಂತೆ ಕೆಲಸ ಮಾಡುತ್ತದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಹೊಟ್ಟೆಯನ್ನು ತಂಪಾಗಿಸುತ್ತದೆ. ಲವಂಗದ ನೀರನ್ನು ಕುಡಿಯುವುದರಿಂದ ಹೊಟ್ಟೆಯ ಕಿರಿಕಿರಿ ಮತ್ತು ಅಸಿಡಿಟಿ ಕಡಿಮೆಯಾಗುತ್ತದೆ.

ಜೀರ್ಣಕ್ರಿಯೆ ಸುಧಾರಣೆ: ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಲವಂಗದ ನೀರನ್ನು ಕುಡಿಯುವುದರಿಂದ ಜೀರ್ಣಾಂಗ ವ್ಯವಸ್ಥೆಯು ಬಲಗೊಳ್ಳುತ್ತದೆ. ಈ ನೀರು ಗ್ಯಾಸ್, ಕೊಬ್ಬು ಮತ್ತು ಅಜೀರ್ಣದಂತಹ ಹೊಟ್ಟೆಯ ಕಾಯಿಲೆಗಳನ್ನು ಗುಣಪಡಿಸುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಲವಂಗದ ನೀರನ್ನು ಕುಡಿಯುವುದರಿಂದ ಆಹಾರವನ್ನು ಜೀರ್ಣಿಸಿಕೊಳ್ಳಲು ಸುಲಭವಾಗುತ್ತದೆ.

ಬಾಯಾರಿಕೆ ಕಡಿಮೆ ಮಾಡುತ್ತದೆ: ತುಂಬಾ ಬಾಯಾರಿಕೆಯನ್ನು ಹೊಂದವರು ಈ ಲವಂಗದ ನೀರನ್ನು ಕುಡಿಯುವುದರಿಂದ ದೇಹವು ತಂಪಾಗಿರುವಂತೆ ನೋಡಿಕೊಳ್ಳುತ್ತದೆ.

ತೂಕ ಇಳಿಸಲು ಸಹಾಯ: ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಲವಂಗದ ನೀರನ್ನು ಕುಡಿಯುವುದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಹಸಿವು ಕಡಿಮೆಯಾಗುತ್ತದೆ ಮತ್ತು ಅತಿಯಾಗಿ ತಿನ್ನುವುದನ್ನು ಸಹ ಇದು ನಿಯಂತ್ರಿಸುತ್ತದೆ. ಲವಂಗವು ಕೊಬ್ಬನ್ನು ವೇಗವಾಗಿ ಕರಗಿಸಲು ಸಹಾಯ ಮಾಡುವ ಅಂಶಗಳನ್ನು ಒಳಗೊಂಡಿದೆ. ಆದ್ದರಿಂದ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಜನರು ಈ ಲವಂಗ ನೀರನ್ನು ಕುಡಿಯಬಹುದು.

ರೋಗನಿರೋಧಕ ಶಕ್ತಿಯನ್ನು ಹೆಚ್ಚಳ: ಲವಂಗದ ನೀರು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಪರಿಣಾಮಕಾರಿ. ಬದಲಾಗುತ್ತಿರುವ ಹವಾಮಾನದಲ್ಲಿ ಶೀತ, ಕೆಮ್ಮು ಮತ್ತು ಕಫದಂತಹ ಸಮಸ್ಯೆಗಳಿಂದ ಇದು ಪರಿಹಾರವನ್ನು ನೀಡುತ್ತದೆ. ಲವಂಗವು ಆಂಟಿಬ್ಯಾಕ್ಟೀರಿಯಲ್ ಗುಣಲಕ್ಷಣಗಳನ್ನು ಹೊಂದಿದೆ. ಲವಂಗ ಯಾವುದೇ ಸೋಂಕನ್ನು ತಡೆಯಲು ಸಹಾಯ ಮಾಡುತ್ತದೆ.

ಹೀಗೆ ಮಾಡಿ: ಒಂದು ಟೀ ಚಮಚದಷ್ಟು ಲವಂಗದ ಪುಡಿ ಅಥವಾ ಲವಂಗವನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಹಾಕಿ ಖಾಲಿ ಹೊಟ್ಟೆಯಲ್ಲಿ ಬೆಳಗಿನ ಪ್ರತಿದಿನ ಬೆಳಿಗ್ಗೆ ಸೇವಿಸಬೇಕು.

ಹಕ್ಕು ನಿರಾಕರಣೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.