ಪನೀರ್ ಅನ್ನು ತಿನ್ನಲು ಯಾರಿಗೆ ಇಷ್ಟವಿರುವುದಿಲ್ಲ ಹೇಳಿ. ಡೈರಿ ಉತ್ಪನ್ನವಾಗಿರುವ ಪನೀರ್ನಲ್ಲಿ ಕ್ಯಾಲ್ಸಿಯಂ, ರಂಜಕ, ಸೆಲೆನಿಯಮ್ ಮತ್ತು ಫೈಬರ್ ಸಮೃದ್ಧವಾಗಿರುತ್ತದೆ. ಪನೀರಿನಿಂದ ರುಚಿಕರವಾದ ಅನೇಕ ಖಾದ್ಯಗಳನ್ನು ಮಾಡಬಹುದು. ನಾನ್ವೆಜ್ ತಿನ್ನದವರು ಪನೀರಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.(Health Tips)
ಇದನ್ನು ಓದಿ: ಅನಿಯಮಿತ ಪಿರಿಯಡ್ಸ್ ಸಮಸ್ಯೆಗೆ ಸೋಂಪು ತಿನ್ನುವುದರಿಂದ ಸಿಗುವುದೇ ಪರಿಹಾರ; ತಜ್ಞರು ಹೇಳುವುದೇನು? | Health Tips
ಆದರೆ ಕೆಲವು ರೀತಿಯ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ಪನೀರನ್ನು ತಿನ್ನುವ ಮೊದಲು ಆಲೋಚಿಸಿ. ಏಕೆಂದರೆ ಅದು ಜೀವಕ್ಕೆ ಸಂಚುಕಾರಿಯಾಗಬಹುದು. ಈ ಕಾಯಿಲೆ ಇರುವ ಜನರು ಪನೀರ್ ತಿನ್ನುವುದನ್ನು ತಪ್ಪಿಸುವುದು ಉತ್ತಮ. ಹಾಗಾದ್ರೆ ಯಾವ ರೋಗಗಳಿಗೆ ಪನೀರ್ ಸೇವನೆ ವಿಷಕಾರಿ ಎಂದು ಪರಿಗಣಿಸಲಾಗುವುದು ಎಂದು ಇಲ್ಲಿ ತಿಳಿಸಲಾಗಿದೆ.
ಅಧಿಕ ರಕ್ತದೊತ್ತಡಕ್ಕೆ ಔಷಧಿಯನ್ನು ನಿಯಮಿತವಾಗಿ ತೆಗೆದುಕೊಳ್ಳುತ್ತಿರುವವರು ಪನೀರ್ ಸೇವಿಸಬಾರದು. ಏಕೆಂದರೆ ಪನೀರ್ನಲ್ಲಿ ಹೆಚ್ಚಿನ ಪ್ರಮಾಣದ ಸ್ಯಾಚುರೇಟೆಡ್ ಕೊಬ್ಬು ಮತ್ತು ಉಪ್ಪು ಇರುತ್ತದೆ. ಇದರ ಅತಿಯಾದ ಸೇವನೆಯಿಂದ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ. ಕೊಲೆಸ್ಟ್ರಾಲ್ ಹೆಚ್ಚಾದರೆ ರಕ್ತನಾಳಗಳು ಬ್ಲಾಕ್ ಆಗುತ್ತದೆ ಹಾಗೂ ಬಿಪಿ ಹೆಚ್ಚಾಗುತ್ತದೆ.
ಆಹಾರ ಜೀರ್ಣವಾಗದೆ ತೊಂದರೆ ಅನುಭವಿಸುತ್ತಿರುವವರು ಪನೀರ್ ಅನ್ನು ಅವಾಯ್ಡ್ ಮಾಡಿ. ಅದು ನಿಮಗೆ ವಿಷಕ್ಕೆ ಸಮನಾಗಿರುತ್ತದೆ. ಪನೀರ್ ಕಡಿಮೆ ಪ್ರಮಾಣದ ಫೈಬರ್ ಅನ್ನು ಹೊಂದಿರುತ್ತದೆ. ಇದರಿಂದ ಸುಲಭವಾಗಿ ಜೀರ್ಣವಾಗುವುದಿಲ್ಲ. ಅದರಲ್ಲೂ ಇಂಥವರು ರಾತ್ರಿ ಮಲಗುವ ಮುನ್ನ ಪನೀರ್ ತಿನ್ನುವುದನ್ನು ತಪ್ಪಿಸಬೇಕು.
ಮೂತ್ರಪಿಂಡ ಸಮಸ್ಯೆಯಿರುವ ರೋಗಿಗಳು ಹೆಚ್ಚಿನ ಪ್ರೋಟೀನ್ ಮತ್ತು ರಂಜಕ ಹೊಂದಿರುವ ಆಹಾರ ಪದಾರ್ಥಗಳನ್ನು ತಪ್ಪಿಸಬೇಕು. ಏಕೆಂದರೆ ಇದು ಕ್ಯಾಲ್ಸಿಯಂ ಕಡಿಮೆಯಾಗುವಂತೆ ಮಾಡುತ್ತದೆ. ಪನೀರ್ ವಿಷಯದಲ್ಲೂ ಅಷ್ಟೆ, ಹೆಚ್ಚು ಪ್ರಮಾಣದಲ್ಲಿ ಪನೀರ್ ಸೇವನೆಯು ಮೂತ್ರಪಿಂಡ ಕಾರ್ಯನಿರ್ವಹಿಸುವ ಮೇಲೆ ಪರಿಣಾಮ ಬೀರುತ್ತದೆ.
ಅತಿಸಾರವಿದ್ದಾಗ ಪನೀರ್ ತಿನ್ನಬೇಡಿ. ಅತಿಯಾಗಿ ಪನೀರ್ ತಿನ್ನುವುದು ಅತಿಸಾರದ ಸಮಸ್ಯೆಯನ್ನು ಉಲ್ಬಣಗೊಳಿಸುತ್ತದೆ. ತೀವ್ರವಾದ ಅತಿಸಾರವು ದೇಹದಲ್ಲಿ ನಿರ್ಜಲೀಕರಣವನ್ನು ಉಂಟುಮಾಡುತ್ತದೆ. ಒಂದು ಸಮಸ್ಯೆ ಹಲವು ರೋಗಕ್ಕೆ ದಾರಿಮಾಡಿಕೊಡುತ್ತದೆ.