ಲೈಫ್‌ಸ್ಟೈಲ್

ಮೊಬೈಲ್ ಹಿಡಿದು ಶೌಚಾಲಯದಲ್ಲಿ ಕೂರುತ್ತೀರಾ; ಹಾಗಿದ್ರೆ ಈ ರೋಗಗಳಿಗೆ ತುತ್ತಾಗೋದು ಗ್ಯಾರಂಟಿ! Mobile

Mobile | ನಮ್ಮಲ್ಲಿ ಅನೇಕ ಜನರು ವಿಶೇಷವಾಗಿ ಯುವಕರು, ತಮ್ಮ ಮೊಬೈಲ್ ಫೋನ್‌ಗಳನ್ನು ಶೌಚಾಲಯಕ್ಕೆ ತೆಗೆದುಕೊಂಡು ಹೋಗುವ ಅಭ್ಯಾಸವನ್ನು ರೂಡಿಸಿಕೊಂಡಿದ್ದಾರೆ. ಹೀಗೆ ಮೊಬೈಲ್​ ಹಿಡಿದು ಶೌಚಾಲಯದಲ್ಲಿ ಅರ್ಧ ಗಂಟೆಗಿಂತ ಹೆಚ್ಚು ಸಮಯ ಕಳೆಯುವ ಜನರು ಅನೇಕ ಕಾಯಿಲೆಗಳನ್ನು ಎದುರಿಸಬೇಕಾಗುತ್ತದೆ.

ಇತ್ತೀಚಿನ ಪೀಳಿಗೆಗೆ ಮೊಬೈಲ್​ ಇಲ್ಲ ಅಂದ್ರೆ ಒಂದು ದಿನವನ್ನೂ ಕಳೆಯುವುದು ಕೂಡ ಕಷ್ಟವಾಗಿದೆ. ಬೆಳಗ್ಗೆ ಎದ್ದ ತಕ್ಷಣ ದೇವರಿಗೆ ಕೈ ಮುಗಿಯುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ ಕೈಯಲ್ಲಿ ಮೊಬೈಲ್​ ಹಿಡಿದು ರೀಲ್ಸ್​ ನೋಡೋದನ್ನ ಮಾತ್ರ ಬಿಡೋದಿಲ್ಲ. ಊಟ ಮಾಡುವಾಗ, ನಿದ್ರೆ ಮಾಡುವಾಗ, ಕೊನೆಗೆ ಶೌಚಾಲಯಕ್ಕೆ ಹೋದಾಗಲೂ ಮೊಬೈಲ್​ ಹಿಡಿದುಕೊಂಡು ಹೋಗುವುದು ಬೇಸರದ ಸಂಗತಿ. ಮೊಬೈಲ್ ಫೋನ್‌ಗಳನ್ನು ಸಾಮಾಜಿಕ ಮಾಧ್ಯಮ, ಫೋನ್ ಕರೆಗಳಿಗಾಗಿ, ಮೆಸೇಜ್​ ಮತ್ತು ರೀಲ್ಸ್​ಗಳ ಬಳಕೆಗಾಗಿ ಶೌಚಾಲಯಕ್ಕೂ ತೆಗೆದುಕೊಂಡು ಹೋಗಿ ಸಮಯ ವ್ಯರ್ಥ ಮಾಡಲು ಈಗಿನ ಪೀಳಿಗೆ ಮುಂದಾಗಿದೆ. ಆದರೆ ಹೀಗೆ ಹೆಚ್ಚು ಸಮಯ ಶೌಚಾಲಯದಲ್ಲಿ ಮೊಬೈಲ್​ ಹಿಡಿದು ಕೂರುವುದರಿಂದ ದೇಹ ಕೆಲವು ಮಾರಕ ರೋಗಗಳಿಗೆ ತುತ್ತಾಗಲಿದೆ ಎಂದು ಅಂದಾಜಿಸಲಾಗಿದೆ.

ಯಾವೆಲ್ಲಾ ಖಾಯಿಲೆ ಬರಲಿವೆ ;

ಒಂದೇ ಸ್ಥಳದಲ್ಲಿ ದೀರ್ಘಕಾಲದವರೆಗೆ ಕುಳಿತುಕೊಂಡು ಮೊಬೈಲ್​ ನೋಡುವುದರಿಂದ ಮಲವಿಸರ್ಜನೆಗೆ ಸಹಾಯ ಮಾಡುವ ಗುದದ್ವಾರದ ಬಳಿಯ ಸ್ನಾಯುಗಳ ಮೇಲೆ ಹೆಚ್ಚುವರಿ ಒತ್ತಡ ಉಂಟಾಗುತ್ತದೆ.ಬಲವಂತದ ಮಲವಿಸರ್ಜನೆಯು ಎಲ್ಲಾ ಅಂಗಗಳಲ್ಲಿ ವಿವಿಧ ರೋಗಗಳನ್ನು ಬೆಳೆಸುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಇದರಿಂದ ಮೂಲವ್ಯಾಧಿ, ಮಲಬದ್ಧತೆ, ಫಿಸ್ಟುಲಾಗಳು ಮತ್ತು ನರಹುಲಿಗಳು ಮುಂತಾದ ವಿವಿಧ ಕಾಯಿಲೆಗಳು ಉಂಟಾಗುವ ಸಾಧ್ಯತೆ ಇದೆ.

ಒಂದೇ ಸ್ಥಳದಲ್ಲಿ ದೀರ್ಘಕಾಲ ಕುಳಿತುಕೊಳ್ಳುವುದರಿಂದ ರಕ್ತ ಪರಿಚಲನೆಗೂ ಅಡ್ಡಿಯಾಗುತ್ತದೆ. ಒಂದೇ ಸ್ಥಾನದಲ್ಲಿ ಕುಳಿತು ಮಲವಿಸರ್ಜನೆ ಮಾಡಲು ಕಷ್ಟಪಡುವುದರಿಂದ ಗಟ್ಟಿಯಾದ ಮಲಬದ್ಧತೆ ಉಂಟಾಗುತ್ತದೆ. ಆ ಒತ್ತಡವು ಗುದದ್ವಾರದ ಬಳಿ ಇರುವ ನಾಳಗಳ ಮೇಲೆ ಒತ್ತಡವನ್ನು ಬೀರುತ್ತದೆ. ಇದರಿಂದಾಗಿ ಅದು ಊದಿಕೊಳ್ಳುವ ಮೂಲಕ ವಿವಿಧ ರೀತಿಯ ಸೋಂಕುಗಳು ಹೆಚ್ಚಾಗುವ ಸಾಧ್ಯತೆಗಳಿವೆ. ಅಂತಹ ಜನರು ಅನೇಕ ರೋಗಗಳನ್ನು ಎದುರಿಸಬೇಕಾಗುತ್ತದೆ.

ವಾಸ್ತವವಾಗಿ ಕಮೋಡ್ ಮಾದರಿಯ ಶೌಚಾಲಯವು ನಿಮ್ಮ ಗುದ ಪ್ರದೇಶ ಮತ್ತು ಅಲ್ಲಿನ ಸ್ನಾಯುಗಳ ಮೇಲೆ ಹೆಚ್ಚಿನ ಒತ್ತಡವನ್ನುಂಟು ಮಾಡುತ್ತದೆ. ಶೌಚಾಲಯದ ಮೇಲೆ ದೀರ್ಘಕಾಲ ಕುಳಿತು ನಿಮ್ಮ ಫೋನ್ ಪರಿಶೀಲಿಸುವುದರಿಂದ ನಿಮ್ಮ ಇತರ ಅಂಗಗಳ ಮೇಲೆ ಒತ್ತಡ ಬೀಳುತ್ತದೆ. ಪರಿಣಾಮವಾಗಿ ಕುತ್ತಿಗೆ ಮತ್ತು ಬೆನ್ನು ನೋವು ಸಮಸ್ಯೆಗಳು ಉದ್ಭವಿಸುತ್ತವೆ. ಕೈಕಾಲುಗಳಲ್ಲಿ ಜುಮ್ಮೆನಿಸುವಿಕೆ, ಕಾಲುಗಳಲ್ಲಿ ಬಿಗಿತ, ಅಥವಾ ಕೈಗಳನ್ನು ಒಂದೇ ಸ್ಥಾನದಲ್ಲಿ ಇಡುವುದರಿಂದ ಸ್ವಲ್ಪ ಸಮಯದವರೆಗೆ ಕೈಕಾಲುಗಳನ್ನು ಚಲಿಸಲು ಸಾಧ್ಯವಾಗದಿರುವುದು ಮುಂತಾದ ಸಮಸ್ಯೆಗಳು ಸಹ ಸಂಭವಿಸಬಹುದು.

ಕೊರೊನಾ ನಂತರ ಕಳೆದ ಐದು ವರ್ಷಗಳಲ್ಲಿ ಜಡ ಜೀವನಶೈಲಿಯ ಪರಿಣಾಮಗಳು ಹೆಚ್ಚು ಸ್ಪಷ್ಟವಾಗಿ ಕಂಡುಬರುತ್ತಿವೆ. ಕುಳಿತಲ್ಲೇ ಕೆಲಸ ಮಾಡುವುದು, ಮನೆಯಿಂದ ಹೊರಗೆ ಹೋಗದಿರುವುದು, ವ್ಯಾಯಾಮ ಅಥವಾ ಯೋಗದ ಕೊರತೆ, ಫಾಸ್ಟ್ ಫುಡ್ ಮತ್ತು ಪ್ಯಾಕ್ ಮಾಡಿದ ಆಹಾರವನ್ನು ತಿನ್ನುವುದು ಹೆಚ್ಚಾಗಿದೆ. ದಿನದ ವಹಿವಾಟುಗಳನ್ನು ಮೊಬೈಲ್ ಫೋನ್‌ಗಳ ಮೂಲಕವೇ ಮಾಡಬಹುದಾದ್ದರಿಂದ ಮೊಬೈಲ್ ಫೋನ್‌ಗಳ ಬಳಕೆ ಹೆಚ್ಚಾಗಿದೆ. ನಿರಂತರವಾಗಿ ಫೋನ್ ಬಳಸುವುದರಿಂದ ಅನೇಕ ಜನರು ಶೌಚಾಲಯಕ್ಕೂ ಫೋನ್ ತೆಗೆದುಕೊಂಡು ಹೋಗುವ ಅಭ್ಯಾಸವನ್ನು ರೂಡಿಸಿಕೊಂಡಿದ್ದಾರೆ.

ಒಂದೇ ಸ್ಥಳದಲ್ಲಿ ಕುಳಿತುಕೊಳ್ಳುವುದರಿಂದ ಹೃದಯ ಸಂಬಂಧಿ ಕಾಯಿಲೆ, ಮಧುಮೇಹ, ಬೊಜ್ಜು, ಕುತ್ತಿಗೆ ಮತ್ತು ಬೆನ್ನು ನೋವು, ಸ್ನಾಯು ದೌರ್ಬಲ್ಯ, ಉಬ್ಬಿರುವ ರಕ್ತನಾಳಗಳು, ಸ್ನಾಯು ಮತ್ತು ಕೀಲು ನೋವು ಮುಂತಾದ ಸಮಸ್ಯೆಗಳು ಉಂಟಾಗಬಹುದು. ಇದಲ್ಲದೆ, ಹೊಟ್ಟೆ ಉಬ್ಬರ, ಅನಗತ್ಯ ತೂಕ ಹೆಚ್ಚಾಗುವುದು ಮತ್ತು ನಿಧಾನಗತಿಯ ಚಯಾಪಚಯ ಕ್ರಿಯೆಯಂತಹ ಸಮಸ್ಯೆಗಳು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ.