ಲೈಫ್‌ಸ್ಟೈಲ್

ಹಳ್ಳಿಮೇಷ್ಟ್ರು 264: ಕನ್ನಡದಲ್ಲೇ ಇಂಗ್ಲಿಷ್ ಕಲಿಯಿರಿ

ಇಳಿಜಾರು ಇದ್ದಲ್ಲಿ ಕಾರ್​ನ ಯಂತ್ರವನ್ನು ನಿಲ್ಲಿಸಿ ಇಳಿಜಾರಿನಲ್ಲಿ ಇಳಿಸಿಕೊಂಡು ಹೋಗು.

If there is a descent, switch off the engine and coast down the descent.

ಈ ಮನೆಗೆ ಎರಡು ಬಾರಿ (ಒಂದರ ಮೇಲೊಂದು) ಬಣ್ಣ ಬಳಿಯಲು ಎಷ್ಟು ಬಣ್ಣ ಬೇಕು?

How much paint is required to give two coats of paint to this house?

ನಾನು ಸಾಮಾನ್ಯವಾಗಿ ಮೊಟ್ಟೆಗಳನ್ನು ನೀರಿನಲ್ಲಿಟ್ಟು ಚೆನ್ನಾಗಿ ಬೇಯಲೆಂದು ಕಡಿಮೆ ಬೆಂಕಿಯಲ್ಲಿ ಬೇಯಿಸುತ್ತೇನೆ.

I usually coddle the eggs so that they are cooled perfectly.

ನಿಮಗೆ ಕಡಿಮೆ ಬೆಂಕಿಯಲ್ಲಿ ಬೆಂದ ಮೊಟ್ಟೆ ಕೊಡಲೆ? ಅದರ ಮೇಲೆ ಉಪ್ಪು + ಮೆಣಸಿನ ಪುಡಿ ಹಾಕಿದರೆ ಮಾತ್ರ.

Shall I get you some coddled eggs? Only if you put salt and chilly powder on it.

ನಾನು ಹಾವನ್ನು ಕೋಲಿನಿಂದ ಮುಟ್ಟಿದಾಗ ಅದು ಮೇಜಿನ ಕೆಳಗೆ ಸುರುಳಿ ಸುತ್ತಿಕೊಂಡಿತು.

When I touched the snake with a stick, it coiled itself under the table.

ನೀವು ನಿಮ್ಮ ರಜಾದಿನಗಳು ಮಕ್ಕಳ ಶಾಲಾ ರಜಾದಿನಗಳಂದೇ ಬರುವಂತೆ ನೋಡಿಕೊಳ್ಳಬೇಕು.

You need to time your holidays to coincide with the children’s school holidays.

ನಮ್ಮ ಪ್ರಯಾಣದ ಕಾರ್ಯಕ್ರಮ ಒಂದೇ ರೀತಿ ಇದ್ದರೆ ನಾವಿಬ್ಬರೂ ಜೊತೆಯಾಗಿ ಹೋಗಬಹುದು.

If our tour programmes coincide, we can go together..