ಡೇಟ್ ಹೋಗುವ ದಿನ ಶಾಂತವಾಗಿರಿ, ಬೇಗನೆ ರೆಡಿಯಾಗುವುದನ್ನು ಗಮನದಲ್ಲಿಟ್ಟುಕೊಳ್ಳಿ.
ನಿಮ್ಮ ಸಂಗಾತಿಯನ್ನು ಮೆಚ್ಚಿಸಲು ಸಿಂಪಲ್ ಆಗಿ ಲಕ್ಷ್ಯುರಿಯಾಗಿ ಇರುವುದನ್ನು ಅಭ್ಯಾಸ ಮಾಡಿಕೊಳ್ಳಿ.
ಜನ್ಮ ದಿನಾಂಕದ ಆಧಾರದ ಮೇಲೆ ಬಣ್ಣದ ಆಯ್ಕೆ, ಹಳೆಯದನ್ನು ಮರೆತು ಹೊಸ ಜೀವನ ನಡೆಸಿ.
Romantic Date preparation tips: ಇತ್ತೀಚೆಗೆ ಡೇಟಿಂಗ್ ಟ್ರೆಂಡ್ ಹೆಚ್ಚಾಗುತ್ತಿದೆ. ಮೊದಲ ಭೇಟಿಯಲ್ಲೇ ಆಕೆಯನ್ನು ಅಥವಾ ಆತನನ್ನು ಇಂಪ್ರೆಸ್ ಮಾಡಬೇಕು. ಸಂಗಾತಿಯಾಗುವವರೊಂದಿಗೆ ಕಳೆಯುವ ಕ್ಷಣಗಳು ಇಡೀ ಜೀವನದಾದ್ಯಂತ ನೆನಪಿನಲ್ಲಿ ಉಳಿಯಲಿ ಎಂದು ಬಯಸುವುದು ಪ್ರತಿಯೊಬ್ಬರ ಆಶಯ. ಆದರೆ, ನಾವು ಮಾಡುವ ಕೆಲವೊಂದು ತಪ್ಪುಗಳು ಅಂದರೆ, ಅವಸರ, ಅತಿಯಾದ ನಿರೀಕ್ಷೆ ನಮ್ಮನ್ನು ಸಂಕಷ್ಟಕ್ಕೆ ಸಿಲುಕಿಸುತ್ತದೆ. ಇಂತಹ ಸಣ್ಣ ತಪ್ಪುಗಳೇ ದೊಡ್ಡ ಬ್ರೇಕಪ್‌ಗೆ ಕಾರಣ. ಹೀಗಾಗಿ ನೀವು ಖಾಸಗಿ ಕ್ಷಣವನ್ನು ಕಳೆಯುವ ಮುನ್ನವೇ ಅದಕ್ಕಾಗಿ ತಯಾರಿ ಮಾಡಿಕೊಳ್ಳಬೇಕಾದ ಅಗತ್ಯವಿರುತ್ತದೆ. ಡೇಟಿಂಗ್ಗೂ ಮುನ್ನ ಕೆಲವು ವಿಚಾರಗಳನ್ನು ನೆನಪಿನಲ್ಲಿಟ್ಟುಕೊಳ್ಳಿ.
ವಿಶೇಷ ಡೇಟ್‌ಗೆ ತೆರಳುವ ಮುನ್ನ ನಿಮ್ಮ ಸ್ನಾನದ ಸಮಯವನ್ನು ಕೇವಲ ಅವಸರದ ಕೆಲಸವನ್ನಾಗಿ ಮಾಡಿಕೊಳ್ಳಬೇಡಿ. ರೋಸ್ ಅಥವಾ ಇಲಾಂಗ್-ಇಲಾಂಗ್ ಬಳಸಿ ಸ್ನಾನ ಮಾಡಿ. ಕೆಲಸದ ಒತ್ತಡ ಪಕ್ಕಕ್ಕಿಟ್ಟು ಹೊಸ ವ್ಯಕ್ತಿಯನ್ನು ಪ್ರಶಾಂತ ಮನಸ್ಸಿನಿಂದ ಭೇಟಿ ಮಾಡಿ.
ನಾವು ಯಾರನ್ನಾದರೂ ಭೇಟಿಯಾದಾಗ ಅಲ್ಲೊಂದು ಘಮ ಕೊನೆಯಗಳಿಗೆಯವರೆಗೂ ನೆನಪಿನಲ್ಲಿಟ್ಟುಕೊಳ್ಳುವಂತಿರಬೇಕು. ಅದರಿಂದಲೇ ಒಂದು ರೀತಿಯಲ್ಲಿ ಆಕರ್ಷಣೆಯಲ್ಲಿರಬೇಕು. ಹೀಗಾಗಿ ನಿಮ್ಮ ಸಂಗಾತಿ ಮುಂದೆ ಕಾಣಿಸಿಕೊಳ್ಳುವಾ ರೋಸ್, ಜಾಸ್ಮಿನ್, ವೆನಿಲ್ಲಾ ಅಥವಾ ಮೃದುವಾದ ಫ್ಲೋರಲ್-ವುಡಿ ಪರ್ಫ್ಯೂಮ್‌ಗಳನ್ನು ಬಳಕೆ ಮಾಡಿ
ಸಾಮರಸ್ಯ, ಪ್ರೇಮ, ಪ್ರೀತಿ, ವಾತ್ಸಲೆ ನಂಬಿಕೆಯನ್ನು ಸಂಬಧದಲ್ಲಿ ಹೆಚ್ಚಿಸಲು, ಸಮಸ್ಯೆ ಗುಣಪಡಿಸಲು ಕ್ರಿಸ್ಟಲ್ ಬಳಕೆ ಮಾಡಲಾಗುತ್ತದೆ. ನಿಮಗೆ ಇದರ ಮೇಳೆ ನಂಬಿಕೆ ಇದ್ದರೆ ನೀವು ಮೊದಲ ಭೇಟಿಗೆ ತೆರಳುವಾಗ 'ರೋಸ್ ಕ್ವಾರ್ಟ್ಸ್' ಧರಿಸಿ.
ನಾವು ಸಂಗಾತಿ ಮುಂದೆ ಕಾಣಿಸಿಕೊಳ್ಳುವಾಗ ನಮ್ಮ ಅಪಿಯರೆನ್ಸ್ ಸರಳತೆಯಲ್ಲಿ ಲಕ್ಷ್ಯುರಿಯಾಗಿರಬೇಕು. ಹೀಗಾಗಿ ನೀವು ನಿಮ್ಮ ಮೊದಲ ಡೇಟ್ನಲ್ಲಿ ರೋಮನ್ ಅಂಕಿಗಳನ್ನು ಹೊಂದಿರುವ ಸ್ವಚ್ಛವಾದ ಮಿನಿಮಲಿಸ್ಟ್ ವಾಚ್ ಅನ್ನು ಎಡಗೈಯಲ್ಲಿ ಧರಿಸಿ. ವಾಚ್ ನಿಮ್ಮ ಒಟ್ಟಾರೆ ವ್ಯಕ್ತಿತ್ವಕ್ಕೆ ಪೂರಕವಾಗಿದೆ ಎನ್ನುವಂತೆ ನೋಡಿಕೊಳ್ಳಿ. ನೆನಪಿಡಿ ನೀವು ಯಾರನ್ನು ಕಾಯಿಸದಂತೆ ನೋಡಿಕೊಳ್ಳಿ.
ನೀವು ಡೇಟ್‌ಗೆ ಹೋಗುವಾಗ ನಿಮ್ಮ ಜನ್ಮ ದಿನಾಂಕದ ಅನುಸಾರ ಇರುವ ಲಕ್ಕಿ ಬಣ್ಣ, ನಂಬರ್ ಅನ್ನು ಪಾಲನೆ ಮಾಡಿ. ಅದರಂತೆ ಲಕ್ಕಿ ಕಲರ್ ಬಟ್ಟೆಯನ್ನು ಧರಿಸಿ...ಡಾರ್ಕ್ ಅಥವಾ ಲೈಟ್ ಕಲರ್ ಬಟ್ಟೆಗಳು ನಿಮ್ಮ ಡಿನ್ನರ್ ನೈಟ್ ಅನ್ನು ಸುಂದರವಾಗಿಸುತ್ತದೆ. ನಿಮ್ಮ ಶರ್ಟ್, ಡ್ರೆಸ್, ಸ್ಕಾರ್ಫ್, ಆಭರಣ ಅಥವಾ ಹ್ಯಾಂಡ್‌ಬ್ಯಾಗ್ ಮೂಲಕವೂ ಇದನ್ನು ಬಳಸಬಹುದು.
ನೀವು ಮುಂದೆ ನಿಮ್ಮ ಸಂಗಾತಿಯಾಗಲು ಬಯಸಿರುವ ಯುವಕ-ಅಥವಾ ಯುವತಿ ಜೊತೆಗೆ ಸಮಯ ಕಳೆಯಲು ಹೊರಟಿದ್ದೀರಿ. ಹೀಗಾಗಿ ಈ ಹಿಂದೆ ನಡೆದ ಕಹಿ ಘಟನೆಗಳನ್ನು ಮರೆತು ಹೊಸದಾಗಿ ಜೀವನ ನಡೆಸುವತ್ತ ಚಿಂತಿಸಿ. ಹಿಂದೆ ನಡೆದ ಘಟನೆಯಿಂದ ಕಲಿತ ಪಾಠಗಳನ್ನು ನೆನಪಲ್ಲಿಟ್ಟುಕೊಂಡು, ಜೀವನ ನಡೆಸುವುದು ಒಂದು ಉತ್ತಮ, (ಏಜೆನ್ಸೀಸ್).