Goa in Monsoon for Introverts
- ಇಂಟ್ರೋವರ್ಟ್ಗಳಿಗೆ ಗೋವಾ ಬೆಸ್ಟ್ ಪ್ಲೇಸ್, ಯಾಕೆ ಗೊತ್ತಾ?
- ಬಿಸಿಲಿನ ಕಡಲತೀರಗಳು, ಗದ್ದಲದ ರಾತ್ರಿ ಜೀವನ ಎಂದ್ರೆ ಮಾತ್ರ ಗೋವಾ ಅಲ್ಲ ಇದು ನೈಸರ್ಗಿಕ ಸೌಂದರ್ಯ ಹೊತ್ತ ರಾಜ್ಯ
- ಗೋವಾವನ್ನು ಮಳೆಗಾಲದಲ್ಲಿ ಮಾತ್ರ ಅನುಭವಿಸಲು ಸಾಧ್ಯ
Goa in Monsoon for Introverts:
ಕೆಲವರು ಅಪರಿಚಿತರೊಂದಿಗೂ ಪರಿಚಿತರಂತೆ ಮಾತನಾಡುವ ಸ್ವಭಾವ ಹೊಂದಿದ್ದರೆ, ಇನ್ನೂ ಕೆಲವರು ಪರಿಚಿತರ ಬಳಿಯೂ ಅಷ್ಟಕಷ್ಟೇ ಮಾತನಾಡುವ ಗುಣದವರಾಗಿರುತ್ತಾರೆ. ಇವರನ್ನು ಆಂಗ್ಲ ಪದದಲ್ಲಿ ಇಂಟ್ರೋವರ್ಟ್ ಹಾಗೂ ಎಕ್ಸ್ಟ್ರೋವರ್ಟ್ಗಳು, ಕನ್ನಡದಲ್ಲಿ ಅಂತರ್ಮುಖಿ ಹಾಗೂ ಬಹುಮುಖಿ ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಕೆಲವರಿಗೆ ಪ್ರವಾಸ ಎಂದರೆ, ಪಬ್, ಬೀಚ್ ಫೋಟೋ ಕ್ಲಿಕ್ಕಿಸಿಕೊಳ್ಳುವುದು ಹೀಗೆ ನಾನ ರೀತಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಆದರೆ ಅಂತರ್ಮುಖಿಗಳು ಎಂದು ಕರೆಸಿಕೊಳ್ಳುವವರ ಪರಿಸ್ಥಿತಿ ಹಾಗಿರೋದಿಲ್ಲ. ಅವರಿಗೆ ಗದ್ದಲದಿಂದ ದೂರವಿರಲು ಬಯಸುತ್ತಾರೆ. ಜನರಿಂದ ದೂರವಿದ್ದು ಹಾಯಾಗಿ ದಿನ ಕಳೆಯಲು ಬಯಸುತ್ತಾರೆ. ನೀವು ಇದೆ ಕ್ಯಾಟಗರಿಗೆ ಸೇರಿರುವ ವ್ಯಕ್ತಿಯಾಗಿದ್ದರೆ, ಗೋವಾ ನಿಮ್ಗೆ ಬೆಸ್ಟ್ ಪ್ಲೇಸ್.
ಏಕಾಂತ ಬಯಸುವರಿಗೆ ಮಳೆಗಾಲದಲ್ಲಿ ಗೋವಾ ಬೆಸ್ಟ್
ಹೆಚ್ಚಿನ ಜನರು ಗೋವಾಕ್ಕೆ ಪ್ರವಾಸ ಹೋಗೋದು ಬೇಸಿಗೆ ಮತ್ತು ಚಳಿಗಾಲದಲ್ಲಿ. ಮಳೆಗಾಲದಲ್ಲಿ ಇಲ್ಲಿನ ಬೀಚ್ಗಳು,ರೆಸ್ಟೋರೆಂಟ್ಗಳು ನೀರವ ಮೌದಿಂದ ಕೂಡಿರುತ್ತದೆ. ವಿಪರೀತ ಜನದಟ್ಟಣೆ ಇರೋದಿಲ್ಲ. ಸರಳ ಕ್ಷಣಗಳನ್ನು ಸುಂದರವಾಗಿ ಕಾಣುವ ಜನರಿಗೆ ಇದೊಂದು ಹೇಳಿ ಮಾಡಿಸಿದ ಜಾಗವಾಗಿದೆ. ಅಲ್ಲದೆ ಈ ಸಮಯದಲ್ಲಿ ಹೋಟೆಲ್ ದರ ತುಟ್ಟಿಯಾಗಿರೋದಿಲ್ಲ.
ಈ ಪ್ಲೇಸ್ ನೋಡಿ
ಭಾರತದ ಅತಿ ಎತ್ತರದ ನಾಲ್ಕು ಹಂತದ ಜಲಪಾತಗಳಲ್ಲಿ ಒಂದಾದ ದೂಧ್‌ಸಾಗರ್ ಜಲಪಾತ ನಿಮಗೆ ಈ ಸಮಯದಲ್ಲಿ ಮರೆಯಲಾಗದ ನೆನಪನ್ನು ನೀಡುತ್ತದೆ. ಗೋವಾ-ಕರ್ನಾಟಕ ಗಡಿಯಲ್ಲಿರುವ ಈ ಜಲಪಾತವಿದೆ.
ಇನ್ನೂ 13 ನೇ ಶತಮಾನದ ಮಹಾದೇವ ದೇವಸ್ಥಾನವಿರುವ ತಂಬ್ಡಿ ಸುರ್ಲಾಗೆ ಹೋಗುವ ಹಾದಿಯೂ ಇನ್ನೊಂದು ಆಯ್ಕೆಯಾಗಿಟ್ಟುಕೊಳ್ಳಬಹುದು. ಆದರೆ, ಮಾರ್ಗದರ್ಶಿ ಇಟ್ಟುಕೊಳ್ಳುವ ಬಗ್ಗೆ ವಿಚಾರ ಮಾಡಿ. ಸುಮಾರು 65 ಕಿಲೋಮೀಟರ್ ದೂರದಲ್ಲಿರುವ ಕಾಡುಗಳಲ್ಲಿ ಅಡಗಿರುವ ಈ ASI-ಸಂರಕ್ಷಿತ ಸ್ಮಾರಕವು ಗೋವಾದ ಅತ್ಯಂತ ಹಳೆಯ ದೇವಾಲಯ. ಇದು ಕದಂಬ ಶೈಲಿಯಲ್ಲಿ ಹವಾಮಾನ ನಿರೋಧಕ ಬಸಾಲ್ಟ್‌ನಿಂದ ನಿರ್ಮಿಸಲಾದ ಇದರ ಪೂರ್ವ ದಿಕ್ಕಿನ ವಿನ್ಯಾಸವು ಬೆಳಗಿನ ಸೂರ್ಯನ ಮೊದಲ ಕಿರಣಗಳು ಶಿವನನ್ನು ಬೆಳಗಿಸುವ ಪರಿಯನ್ನು ನೀವು ಕಣ್ತುಂಬಿಕೊಳ್ಳಬಹುದು.
ಮಳೆಗಾಲವು ಗೋವಾದ ಭೂದೃಶ್ಯವನ್ನೇ ಸ್ವರ್ಗದಂತೆ ತೋರ್ಪಡಿಸುತ್ತದೆ. ಹಸಿರಿನಿಂದ ಕೂಡಿದ ಬೆಟ್ಟಗಳು, ಜೀವತುಂಬಿಕೊಂಡಿರುವ ಭತ್ತದ ಗದ್ದೆಗಳು ಮೈತುಂಬಿಕೊಳ್ಳುತ್ತವೆ. ಭೋರ್ಗರೆದು ಧುಮ್ಮಿಕ್ಕುವ ಜಲಪಾತ, ತೊರೆ, ಹಳ್ಳ, ನದಿ ಪಕ್ಷಿಗಳ ಚಿಲಿಪಿಲಿ ನಾದ ಎಲ್ಲವೂ ಜೀವನಕ್ಕೆ ಮರುಜೀವ ಕೊಟ್ಟಂತೆ ಭಾಸವಾಗುತ್ತದೆ.
ಸಿಟಿ ಲೈಫ್, ಜನರಿಂದ ದೂರ ಇರಬೇಕು, ಟ್ರಾಫಿಕ್ ಸೌಂಡ್ ಅಲರ್ಜಿ ಎಂದು ಜೀವನದ ಮೇಲೆ ಜಿಗುಪ್ಸೆ ಅಥವಾ ನಿರಾಸೆಗೊಳಗಾದವರು ಪ್ರಕೃತಿಯ ಮಡಿಲಲ್ಲಿ ಸಮಯ ಕಳೆಯಲು ಇದು ಬೆಸ್ಟ್ ಪ್ಲೇಸ್. ಮಳೆಗಾಲದ ಗೋವಾ ಎಂದಿಗೂ ನಿರಾಶೆಗೊಳಿಸುವುದಿಲ್ಲ.