ಲೈಫ್‌ಸ್ಟೈಲ್

ಆಗಾಗ ಕನಸಿನಲ್ಲಿ ದೆವ್ವ ಕಾಡಿದರೆ ಎಚ್ಚರ! ನಿಮಗೆ ಈ ಆರೋಗ್ಯ ಸಮಸ್ಯೆ ಇದೆ ಎಂದರ್ಥ

ಕನಸಿನಲ್ಲಿ ದೆವ್ವವನ್ನು ಕಂಡು ಮಧ್ಯರಾತ್ರಿ ಇದ್ದಕ್ಕಿದ್ದಂತೆ ಹಾಸಿಗೆಯಿಂದ ಎದ್ದು ಕುಳಿತುಕೊಂಡ ಅನುಭವ ಬಹುತೇಕರಿಗೆ ಆಗಿರುತ್ತದೆ. ಭಯದಿಂದ ಎದ್ದಾಗ ಮುಖದ ತುಂಬೆಲ್ಲ ಬೆವರು ಹಾಗೂ ಸುತ್ತಲೂ ನೋಡುವುದು ಮಾಮೂಲು. ಸ್ವಲ್ಪ ಹೊತ್ತಿನ ನಂತರ ಅದು ಕನಸೆಂದು ಅರ್ಥವಾಗಿ ನಿಟ್ಟುಸಿರು ಬಿಡುತ್ತೇವೆ. ಇಂತಹ ಕನಸುಗಳು ಎಲ್ಲರಿಗೂ ಸಾಮಾನ್ಯ. ದೆವ್ವ ಒಂದೇ ಅಲ್ಲ ಕೆಲವರಿಗೆ ಕೆಟ್ಟ ಕ್ಷಣಗಳು ಸಹ ಕನಸಿನಲ್ಲಿ ಬರುತ್ತವೆ. ಹಾಗೇ ಒಳ್ಳೆಯ ಕನಸುಗಳು ಬೀಳುತ್ತವೆ.

ಅಂದಹಾಗೆ ಪ್ರತಿಯೊಂದು ಕನಸು ಅವರ ಭವಿಷ್ಯದ ಘಟನೆಗಳಿಗೆ ಕಾರಣವಾಗುತ್ತದೆ. ಅಂದರೆ, ಇದು ಕೆಲವು ಚಿಹ್ನೆಗಳ ರೂಪದಲ್ಲಿ ಭವಿಷ್ಯದ ಘಟನೆಗಳನ್ನು ಮುನ್ಸೂಚಿಸುತ್ತದೆ ಎಂದು ಅನೇಕ ಜನರು ನಂಬುತ್ತಾರೆ. ಆದರೆ, ಕನಸಿನಲ್ಲಿ ದೆವ್ವ ಕಾಣಿಸಿಕೊಳ್ಳಲು ವೈಜ್ಞಾನಿಕ ಕಾರಣ ಇದೆ ಎನ್ನುತ್ತಾರೆ ವಿಜ್ಞಾನಿಗಳು. ಜೀವ ಭಯ ಹಾಗೂ ನಾಳೆ ಏನಾಗಬಹುದು ಎಂಬ ಆತಂಕ ಇರುವವರಿಗೆ ಮಾತ್ರ ಕನಸಿನಲ್ಲಿ ದೆವ್ವ ಕಾಣಿಸುತ್ತದೆ. ಈ ಎಲ್ಲ ವಿಷಯಗಳನ್ನು ಕನಸುಗಳ ವಿಜ್ಞಾನ (ಡ್ರೀಮ್​ ಸೈನ್ಸ್​) ಎಂಬ ಪುಸ್ತಕದಲ್ಲಿ ಬರೆಯಲಾಗಿದೆ. ದೆವ್ವ ಮತ್ತು ಭೂತಗಳ ಅಸ್ತಿತ್ವವು ಜನರ ನಂಬಿಕೆಗಳ ಮೇಲೆ ಅವಲಂಬಿತವಾಗಿದೆ. ದೇವರು ಇದ್ದಾನೆ ಎಂದು ನಂಬುವ ಪ್ರತಿಯೊಬ್ಬರೂ ದೆವ್ವವೂ ಇದ್ದಾನೆ ಎಂದು ನಂಬುತ್ತಾರೆ.

ಯಾರಿಗಾದರೂ ಪ್ರತಿದಿನ ನಿದ್ರೆಯಲ್ಲಿ ದೆವ್ವ ಕಾಣಿಸಿಕೊಂಡರೆ, ಅವರು ತಮ್ಮ ಜೀವನದಲ್ಲಿ ಏನನ್ನಾದರೂ ಕಳೆದುಕೊಂಡಿದ್ದಾರೆ ಎಂದು ಅರ್ಥ. ಡ್ರೀಮ್​ ಸೈನ್ಸ್​ ಪ್ರಕಾರ, ಕನಸಿನಲ್ಲಿ ಪ್ರೇತಗಳನ್ನು ನೋಡುವುದು ಕೆಟ್ಟ ಸಂಕೇತವಾಗಿದೆ. ಇದು ನಿಮ್ಮ ಸುತ್ತಲಿನ ನಕಾರಾತ್ಮಕ ಶಕ್ತಿಯ ಸಂಕೇತ ಮತ್ತು ನೀವು ಮಾನಸಿಕವಾಗಿ ಬಲವಾಗಿಲ್ಲ ಎಂಬ ಅರ್ಥವನ್ನು ಸೂಚಿಸುತ್ತದೆ.

ರಾತ್ರಿ ಮಲಗುವ ಮುನ್ನ ನಾಳೆಯ ಬಗ್ಗೆ ಆಶಾಭಾವನೆಗಳನ್ನು ಇಟ್ಟುಕೊಳ್ಳುವವರಿಗೆ ಇಂತಹ ಕನಸುಗಳು ಬೀಳುವುದಿಲ್ಲ. ಏಕೆಂದರೆ, ನಾಳೆ ಇನ್ನೂ ಚೆನ್ನಾಗಿರುತ್ತದೆ ಎಂದು ಪಾಸಿಟಿವ್​ ಯೋಚನೆ ಇರುತ್ತದೆ. ಆದರೆ, ಮಾನಸಿಕವಾಗಿ ಬಲವಿಲ್ಲದವರು ನಾಳೆ ಏನಾಗುತ್ತದೋ ಎಂಬ ಭಯದಲ್ಲಿ ಮಲಗುತ್ತಾರೆ. ಅವರ ಮನಸ್ಸಿನಲ್ಲಿರುವ ಭಯವು ಅವರ ಕನಸಿನಲ್ಲಿ ದೆವ್ವದ ರೂಪದಲ್ಲಿ ಬರುತ್ತದೆ ಎಂದು ಡ್ರೀಮ್ ಸೈನ್ಸ್ ಹೇಳುತ್ತದೆ.

ಮೇಲಾಗಿ ಕೆಲವರು ಭಾವುಕರಾದಾಗ, ಜೀವನದಲ್ಲಿ ತಮಗೆ ಇಷ್ಟವಾದದ್ದನ್ನು ಕಳೆದುಕೊಂಡಾಗ, ಎಲ್ಲ ಸಂದರ್ಭದಲ್ಲಿ ಅದೇ ಸಂಗತಿಯನ್ನು ಯೋಚಿಸಿದಾಗಲೂ, ಈ ರಾಕ್ಷಸರು ಅವರ ಬಳಿಗೆ ಬರುತ್ತಾರೆ. ನೀವು ದೆವ್ವದೊಂದಿಗೆ ಹೋರಾಡುತ್ತಿರುವ ರೀತಿಯಲ್ಲಿ ಕನಸು ಕಂಡರೆ, ಭವಿಷ್ಯದಲ್ಲಿ ನಿಮ್ಮ ಯಶಸ್ಸಿಗೆ ಏನಾದರೂ ಅಡ್ಡಿಯಾಗುತ್ತಿದೆ ಎಂಬುದರ ಸಂಕೇತವಾಗಿದೆ. ಹೀಗಾಗಿ ನಿಮ್ಮ ಕನಸಿನಲ್ಲಿ ದೆವ್ವಗಳು ಕಾಣಿಸಿಕೊಂಡರೆ, ಜಾಗರೂಕರಾಗಿರಿ ಮತ್ತು ಶಾಂತವಾಗಿರಿ. ಆದಷ್ಟು ಪಾಸಿಟಿವ್​ ಮೈಂಡ್​ ಬೆಳೆಸಿಕೊಳ್ಳಿ. (ಏಜೆನ್ಸೀಸ್​)