Weight Loss Journey ಚಿತ್ರ Instagram 
ಲೈಫ್‌ಸ್ಟೈಲ್

145 ರಿಂದ 90 ಕೆಜಿ! ಈ 7 ಆಹಾರಗಳನ್ನು ಬಿಟ್ಟು ಅಸಾಧ್ಯವಾದುದನ್ನು ಸಾಧ್ಯವಾಗಿಸಿದ ಮುಂಬೈ ಬೆಡಗಿ.. Weight Loss Journey

ಪ್ರಮುಖ ಮುಖ್ಯಾಂಶಗಳು

  • ತೂಕ ಇಳಿಸಿಕೊಳ್ಳುವುದು ಎಂದರೆ ಕೇವಲ ತಿನ್ನುವ ಕ್ಯಾಲೊರಿಗಳನ್ನು ಲೆಕ್ಕ ಹಾಕುವುದು ಅಷ್ಟೇ ಅಲ್ಲ
  • ಬದಲಿಗೆ ದೀರ್ಘಕಾಲದ ಆರೋಗ್ಯಕ್ಕಾಗಿ ಅಳವಡಿಸಿಕೊಳ್ಳಬೇಕಾದ ಸುಸ್ಥಿರ ಜೀವನಶೈಲಿಯಾಗಿದೆ
  • 145 ಕೆಜಿಯಿಂದ 90 ಕೆಜಿಗೆ ತೂಕ ಇಳಿಸಿಕೊಂಡ ಫಿಟ್ನೆಸ್​ ಪ್ರಭಾವಿ ಡಾಲಿಗೆ ಸಹಾಯ ಮಾಡಿದ್ದೇ ಈ ಆಹಾರ
Weight Loss Journey: ತೂಕ ಇಳಿಸಿಕೊಳ್ಳುವುದು ಎಂದರೆ ಕೇವಲ ತಿನ್ನುವ ಕ್ಯಾಲೊರಿಗಳನ್ನು ಲೆಕ್ಕ ಹಾಕುವುದು ಅಥವಾ ಜಿಮ್‌ನಲ್ಲಿ ಗಂಟೆಗಟ್ಟಲೆ ಕಸರತ್ತು ಮಾಡುವುದು ಮಾತ್ರವಲ್ಲ. ಇದು ತಾತ್ಕಾಲಿಕ ಸವಾಲಲ್ಲ, ಬದಲಿಗೆ ದೀರ್ಘಕಾಲದ ಆರೋಗ್ಯಕ್ಕಾಗಿ ಅಳವಡಿಸಿಕೊಳ್ಳಬೇಕಾದ ಸುಸ್ಥಿರ ಜೀವನಶೈಲಿಯಾಗಿದೆ. ಕಟ್ಟುನಿಟ್ಟಾದ ಡಯಟ್ ಅಥವಾ ಅತಿಯಾದ ವ್ಯಾಯಾಮದಿಂದ ತಕ್ಷಣಕ್ಕೆ ತೂಕ ಕಡಿಮೆಯಾದರೂ, ಅದನ್ನು ದೀರ್ಘಕಾಲ ಕಾಪಾಡಿಕೊಳ್ಳುವುದು ಕಷ್ಟ ಮತ್ತು ಅದು ಆರೋಗ್ಯದ ಮೇಲೂ ದುಷ್ಪರಿಣಾಮ ಬೀರಬಹುದು.
ಆದಾಗ್ಯೂ, 145 ಕೆಜಿಯಿಂದ 90 ಕೆಜಿಗೆ ತೂಕ ಇಳಿಸಿಕೊಂಡ ಫಿಟ್ನೆಸ್​ ಪ್ರಭಾವಿ ಡಾಲಿ ತೂಕ ಇಳಿಸಿಕೊಳ್ಳುವ ಸಮಯದಲ್ಲಿ ತಿನ್ನುವುದನ್ನು ನಿಲ್ಲಿಸಿದ ಏಳು ಆಹಾರಗಳನ್ನು ಹಂಚಿಕೊಂಡಿದ್ದು, ತಮ್ಮ ಇನ್​ಸ್ಟಾಗ್ರಾಮ್​ ಪೋಸ್ಟ್​ನಲ್ಲಿ ಈ ಆಹಾರ ಬದಲಾವಣೆಗಳು ಹೆಚ್ಚುವರಿ ಕ್ಯಾಲೊರಿಗಳನ್ನು ಕಡಿಮೆ ಮಾಡಲು ಮತ್ತು ತಮ್ಮ ಗುರಿಗಳೊಂದಿಗೆ ಸ್ಥಿರವಾಗಿರಿಸಲು ಸಹಾಯ ಮಾಡುತ್ತದೆ ಎಂದು ಬರೆದುಕೊಂಡಿದ್ದಾರೆ. ಹಾಗಿದ್ದರೆ, ತೂಕ ಇಳಿಸಲು ಸಹಾಯ ಮಾಡುವ ಆಹಾರಗಳು ಯಾವುದು ಎಂದು ನೋಡೋಣ ಬನ್ನಿ...

1. ಸಕ್ಕರೆ ಪಾನೀಯಗಳು

ತೂಕ ಇಳಿಸಲು ತೀರ್ಮಾನಿಸಿದ ಡಾಲಿ ತನ್ನ ಆಹಾರದಿಂದ ಸಂಪೂರ್ಣವಾಗಿ ಸಕ್ಕರೆ ಪಾನೀಯಗಳನ್ನು ಹೊರಗಿಟ್ಟಳು. ಏಕೆಂದರೆ, ಅವುಗಳಲ್ಲಿ ಹೆಚ್ಚಿನ ಸಕ್ಕರೆ ಅಂಶವಿರುತ್ತದೆ. ಇವುಗಳ ಅತಿಯಾದ ಸೇವನೆಯು ದೇಹದಲ್ಲಿ ತೂಕ ಹೆಚ್ಚಾಗಲು ಕಾರಣವಾಗಬಹುದು. ಹಾಗಾಗಿ ಅವುಗಳ ಬದಲಿಗೆ ನಿಂಬೆ ನೀರು, ತೆಂಗಿನ ನೀರು ಮತ್ತು ಸಿಹಿಗೊಳಿಸದ ಹಸಿರು ಚಹಾದಂತಹ ಪರ್ಯಾಯಗಳಿಗೆ ಬದಲಾಯಿಸಿರುವುದಾಗಿ ತಿಳಿಸಿದ್ದಾರೆ.

2. ಬಿಳಿ ಬ್ರೆಡ್

ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳು ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ತ್ವರಿತ ಏರಿಕೆಗೆ ಕಾರಣವಾಗುತ್ತವೆ. ಈ ಕಾರಣದಿಂದಾಗಿ ಬಿಳಿ ಬ್ರೆಡ್​ನ್ನು ಆಹಾರದಿಂದ ಹೊರಗಿಡಲಾಗಿದೆ ಎಂದು ಪ್ರಭಾವಿ ಹೇಳಿಕೊಂಡಿದ್ದಾರೆ. ಇದರ ಬದಲಿಗೆ ಸಂಪೂರ್ಣ ಗೋಧಿ ಬ್ರೆಡ್, ಮಲ್ಟಿಗ್ರೇನ್ ಬ್ರೆಡ್ ಮತ್ತು ಓಟ್ಸ್‌ನೊಂದಿಗೆ ಬದಲಾಯಿಸಿದರು.

3. ಚಿಪ್ಸ್ ಮತ್ತು ಪ್ಯಾಕ್ ಮಾಡಿದ ತಿಂಡಿಗಳು

ಹೆಚ್ಚಿನ ಉಪ್ಪಿನ ಅಂಶ ಮತ್ತು ಕ್ಯಾಲೋರಿ ಸಾಂದ್ರತೆಯಿಂದಾಗಿ ಅವಳು ಚಿಪ್ಸ್ ಮತ್ತು ಪ್ಯಾಕ್ ಮಾಡಿದ ತಿಂಡಿಗಳನ್ನು ತಿನ್ನುವುದನ್ನು ಬಿಡುವುದನ್ನು ಉತ್ತಮ ನಿರ್ಧಾರ ಎಂದು ಭಾವಿಸಿದ ಅವರು, ಅವುಗಳ ಬದಲಿಗೆ ಹುರಿದ ಮಖಾನಾ, ಹುರಿದ ಕಡಲೆ ಮತ್ತು ಬಾದಾಮಿ, ಗೋಡಂಬಿಯನ್ನು ಮಿತವಾಗಿ ಬಳಸುವುದಾಗಿ ತಿಳಿಸಿದರು.

4. ತ್ವರಿತ ಆಹಾರ

ಕೊಬ್ಬು, ಉಪ್ಪು ಮತ್ತು ಕ್ಯಾಲೋರಿಗಳ ಸಂಯೋಜನೆಯಿಂದಾಗಿ ಫಾಸ್ಟ್ ಫುಡ್ ಅನ್ನು ತೆಗೆದುಹಾಕಲಾಯಿತು. ಅದರ ಬದಲಿಗೆ ಪನೀರ್ ಸ್ಯಾಂಡ್‌ವಿಚ್‌ಗಳು, ಗೋಧಿ ವೆಜ್​ ರೋಲ್​ ಮತ್ತು ಮನೆಯಲ್ಲೇ ತಯಾರಿಸಿದ ಊಟಗಳಂತಹ ಆರೋಗ್ಯಕರ ಪರ್ಯಾಯಗಳನ್ನು ಸೇವಿಸುವುದಾಗಿ ಡಾಲಿ ಹೇಳಿಕೊಂಡಿದ್ದಾರೆ.

5. ಐಸ್ ಕ್ರೀಮ್

ಐಸ್ ಕ್ರೀಮ್ ನಲ್ಲಿ ಸಕ್ಕರೆ ಮತ್ತು ಕ್ಯಾಲೋರಿಗಳು ಹೆಚ್ಚಾಗಿ ಇರುವುದರಿಂದ ಅದನ್ನು ಆಹಾರದಿಂದ ಕೈಬಿಡುವುದಾಗಿ ಹೇಳಿಕೊಂಡರು. ಅವುಗಳ ಬದಲಿಗೆ ಗ್ರೀಕ್ ಮೊಸರು ಮತ್ತು ಹಣ್ಣುಗಳು, ಹೆಪ್ಪುಗಟ್ಟಿದ ಬಾಳೆಹಣ್ಣಿನ ಸ್ಮೂಥಿಗಳು ಅಥವಾ ಸಣ್ಣ ಭಾಗಗಳ ಡಾರ್ಕ್ ಚಾಕೊಲೇಟ್​ನೊಂದಿಗೆ ಅವಳು ತನ್ನ ಕಡುಬಯಕೆಗಳನ್ನು ನಿಲ್ಲಿಸಿಕೊಂಡಳು.

6. ಮದ್ಯಪಾನ

ಡಾಲಿ ಮದ್ಯಪಾನವನ್ನು ತ್ಯಜಿಸಿದಳು, ಅದು ನಿರ್ಜಲೀಕರಣ ಮತ್ತು ಮುಖದ ಊತಕ್ಕೆ ಕಾರಣವಾಗುತ್ತದೆ ಎಂದು ಹೇಳಿದಳು. ಅದಕ್ಕಾಗಿ ನಿಂಬೆಯೊಂದಿಗೆ ಹೊಳೆಯುವ ನೀರು, ಸಕ್ಕರೆ ಸೇರಿಸದ ತಾಜಾ ಹಣ್ಣಿನ ರಸ ಮತ್ತು ಡಿಟಾಕ್ಸ್ ನೀರನ್ನು ಬಳಸುವುದಾಗಿ ತಿಳಿಸಿದರು. ಇದು ಅವಳ ಆದ್ಯತೆಗೆ ಪರ್ಯಾಯವಾಗಿದೆ.

7. ಸಂಸ್ಕರಿಸಿದ ಆಹಾರಗಳು

ಸಂಸ್ಕರಿಸಿದ ಆಹಾರಗಳಲ್ಲಿ ಸೋಡಿಯಂ ಮತ್ತು ಸೇರ್ಪಡೆಗಳು ಹೆಚ್ಚಾಗಿ ಇರುವುದರಿಂದ ಅವುಗಳನ್ನು ಕಡಿಮೆ ಮಾಡಲಾಯಿತು. ಬದಲಾಗಿ, ಅವರು ಮೊಟ್ಟೆ, ತೋಫು, ಪನೀರ್, ಮೊಸರು, ಬೇಳೆ ಮತ್ತು ಸಸ್ಯ ಆಧಾರಿತ ಪ್ರೋಟೀನ್‌ನಂತಹ ಸಂಪೂರ್ಣ ಆಹಾರ ಪ್ರೋಟೀನ್ ಮೂಲಗಳ ಮೇಲೆ ಕೇಂದ್ರೀಕರಿಸಲು ನಿರ್ಧರಿಸಿದರು.
ಗಮನಿಸಬೇಕಾದ ಅಂಶ: ಯಾವುದೇ ಆರೋಗ್ಯಕರ ತಿಂಡಿಯಾಗಿದ್ದರೂ, ಅವುಗಳನ್ನು ಮಿತವಾಗಿ ಸೇವಿಸುವುದು ಅತ್ಯಂತ ಮುಖ್ಯ. ಈ ರೀತಿಯ ಸುಸ್ಥಿರ ಆಹಾರ ಪದ್ಧತಿಯ ಬದಲಾವಣೆಗಳು ದೀರ್ಘಕಾಲದವರೆಗೆ ನಿಮ್ಮ ತೂಕವನ್ನು ನಿಯಂತ್ರಣದಲ್ಲಿಡಲು ಮತ್ತು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ (ಏಜೆನ್ಸೀಸ್​).

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು/ ಪಂಚಾಂಗಗಳು/ ನಂಬಿಕೆಗಳು/ ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್​ಸೈಟ್​ ಜವಾಬ್ದಾರರಾಗಿರುವುದಿಲ್ಲ.