ಮುಂಬೈ: ಪುಣೆಯ ರೆಸ್ಟೊರೆಂಟ್‌ನಿಂದ ಝೊಮಾಟೊ ಮೂಲಕ ಆರ್ಡರ್ ಮಾಡಿದ ಪನೀರ್ ಬಿರಿಯಾನಿಯ ಪ್ಲೇಟ್‌ನಲ್ಲಿ ಚಿಕನ್ ತುಂಡು ಸಿಕ್ಕಿದ್ದರಿಂದ ತನ್ನ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ವ್ಯಕ್ತಿಯೊಬ್ಬರು ಹೇಳಿದ್ದಾರೆ.
ಪಂಕಜ್ ಶುಕ್ಲಾ ಎಂಬಾತ 'X' (ಟ್ವಿಟ್ಟರ್) ನಲ್ಲಿ ಪೋಸ್ಟ್ ಹಾಕಿದ್ದು, ಝೊಮಾಟೊ ಪ್ರತಿಕ್ರಿಯಿಸಿದೆ. ಪನೀರ್ ಬಿರಿಯಾನಿಯಲ್ಲಿ ಚಿಕನ್ ಚಿಕನ್ ತುಂಡುಗಳು ಇರುವುದನ್ನು ವೀಡಿಯೋ ಮಾಡಿ ತನ್ನ ಖಾತೆಯಲ್ಲಿ ಹಾಕಿದ್ದಾರೆ.
ಪುಣೆಯ ಕಾರ್ವೇನಗರದ ಪಿಕೆ ಬಿರಿಯಾನಿ ಹೌಸ್‌ನಿಂದ ಪನೀರ್ ಬಿರಿಯಾನಿ ಆರ್ಡರ್ ಮಾಡಿರುವುದಾಗಿ ಪಂಕಜ್ ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಪಂಕಜ್ ಅವರು ಪಾವತಿಸಿದ ಮೊತ್ತವನ್ನು ಝೊಮಾಟೊ ಮರುಪಾವತಿಸಿದ್ದರೂ, ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಜಾಗೃತಿ ಮೂಡಿಸಲು ನಿರ್ಧರಿಸಿರುವುದಾಗಿ ಹೇಳಿಕೊಂಡಿದ್ದಾರೆ.
“ನಾನು ಪಕ್ಕಾ ಸಸ್ಯಾಹಾರಿ. ಚಿಕನ್ ಬಿರಿಯಾನಿ ಬಂದಿದ್ದರಿಂದ ಅದನ್ನು ವಾಪಸ್ ಕಳೂಹಿಸಿ ಮರುಪಾವತಿ ಪಡೆದಿದ್ದೇನೆ. ಆದರೆ ನಾನು ಧಾರ್ಮಿಕ ಭಾವನೆ ಹೊಂದಿರುವ ವ್ಯಕ್ತಿಯಾಗಿರುವುದರಿಂದ ಇದು ನನ್ನ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ. ” ಎಂದು ಪಂಕಜ್ ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಇನ್ನು ಝೋಮೆಟೋನ ಅಧಿಕೃತ ಗ್ರಾಹಕ ಸೇವಾ ಖಾತೆಯು ಪಂಕಜ್ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿದೆ. ತನಿಖೆಯನ್ನು ಮತ್ತಷ್ಟು ಕೈಗೊಳ್ಳಲು ವಿವರಗಳನ್ನು ಹಂಚಿಕೊಳ್ಳುವಂತೆ ಅವರನ್ನು ಕೇಳಿದೆ.
X ನಲ್ಲಿ ಪಂಕಜ್ ಅವರ ಪೋಸ್ಟ್ ಗೆ 17ಸಾವಿರಕ್ಕೂ ಹೆಚ್ಚು ವೀಕ್ಷಣೆಗಳೊಂದಿಗೆ ವೈರಲ್ ಆಗಿದೆ.