ಸಾಂದರ್ಭಿಕ ಚಿತ್ರ 
ಲೈಫ್‌ಸ್ಟೈಲ್

ನ್ಯಾಚ್ಯುರಲ್​ ಗ್ಲೋ ಬೇಕೆನ್ನುವವರಿಗಾಗಿ ಈ ಫೇಸ್​ಪ್ಯಾಕ್​​; ಮನೆಯಲ್ಲೇ ತಯಾರಿಸಲು ಸಿಂಪಲ್​​ ವಿಧಾನ ನಿಮಗಾಗಿ…

ಗ್ಲೋಯಿಂಗ್​​ ಸ್ಕಿನ್ ನಮ್ಮದಾಗಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಕೆಮಿಕಲ್​​ನಿಂದ ಚರ್ಮಕ್ಕೆ ಹಾನಿಯಾಗಬಹುದು ಎಂಬ ಭಯ ನಮ್ಮನ್ನು ಕಾಡುತ್ತಿರುತ್ತದೆ. ಈ ಆತಂಕ ಹೋಗಲಾಡಿಸಲು ಹಾಗೂ ಮೃದುವಾದ, ಹೊಳೆಯುವ ತ್ವಚೆ ನಿಮ್ಮದಾಗಬೇಕು ಎಂಬ ಆಶಯದಿಂದ ಈ ಸಿಂಪಲ್​ ಟಿಪ್ಸ್​​ ಅನ್ನು ತಿಳಿಸಲಾಗಿದೆ. ಕಡಿಮೆ ಸಮಯದಲ್ಲಿ ಮಲ್ಲಿಗೆ ಹೂವಿನಿಂದ ಮಾಡುವ ಫೇಸ್​ಪ್ಯಾಕ್​​ ಕುರಿತ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಮಲ್ಲಿಗೆ ಹೂವು ಕಾಲಜನ್​, ಆ್ಯಂಟಿ ಆಕ್ಸಿಡೆಂಟ್ ಮತ್ತು ಆ್ಯಂಟಿ ಏಜಿಂಗ್​ ಗುಣಗಳನ್ನು ಹೊಂದಿದೆ. ಇದು ಮುಖದಲ್ಲಿನ ಕಾಂತಿ ಹೆಚ್ಚಿಸುವುದರ ಜತೆಗೆ ಬ್ಯಾಕ್ಟೀರಿಯಾಗಳನ್ನ ಹೋಗಲಾಡಿತ್ತದೆ.

ಇದನ್ನು ಓದಿ: ಜಾಯಿಕಾಯಿಯಿಂದ ಎಷ್ಟೆಲ್ಲಾ ಪ್ರಯೋಜನೆ ಇದೆ ಗೊತ್ತಾ? ಉತ್ತಮ ಆರೋಗ್ಯಕ್ಕಾಗಿ ಈ ಟಿಪ್ಸ್​​​ ಫೇಸ್​ಪ್ಯಾಕ್​ ಸಿದ್ಧಪಡಿಸಲು ಬೇಕಾಗುವ ಪದಾರ್ಥಗಳು:

  • ಬೀಟ್ರೂಟ್ - 1 ಸಣ್ಣ ತುಂಡು (ಬೇಯಿಸಿದ) - ವಿಟಮಿನ್ ಸಿ ಸಮೃದ್ಧವಾಗಿದೆ
  • ಬಾದಾಮಿ - 3
  • ತುಳಸಿ ಎಲೆಗಳು- 3
  • ದುಂಡು ಮಲ್ಲಿಗೆ ಹೂವು- 2

ತಯಾರಿಸುವ ವಿಧಾನ: ಮೊದಲಿಗೆ ಮಿಕ್ಸರ್​ ಜಾರ್ ತೆಗೆದುಕೊಂಡು ಅದರಲ್ಲಿ ಬೇಯಿಸಿದ ಬೀಟ್ರೂಟ್, ನೆನೆಸಿದ ಬಾದಾಮಿ, ತುಳಸಿ ಎಲೆಗಳು ಮತ್ತು ದುಂಡುಮಲ್ಲಿಗೆ ಹೂವನ್ನು ಸೇರಿಸಿ ಪೇಸ್ಟ್​ ಮಾಡಿಕೊಳ್ಳಿ. ಇದರ ನಂತರ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿಕೊಂಡು 1-2 ನಿಮಿಷಗಳ ಕಾಲ ಮಸಾಜ್ ಮಾಡಿ. ಬಳಿಕ 5 ನಿಮಿಷಗಳ ಕಾಲ ಮುಖದ ಮೇಲೆ ಇರಿಸಿದ ನಂತರ ಮುಖವನ್ನು ತೊಳೆಯಿರಿ. ಮಸಾಜ್​ ಮಾಡುವುದರಿಂದ ಮುಖದ ಹೊಳಪು ಹೆಚ್ಚುತ್ತದೆ ಮತ್ತು ಟ್ಯಾನ್​​ ಆಗಿರುವುದು ಹೋಗುತ್ತದೆ. ಮುಖದ ಮೇಲಿನ ಸುಕ್ಕು ಕಡಿಮೆಯಾಗುತ್ತದೆ. ವಾರಕ್ಕೆ 3-4 ಬಾರಿ ಈ ಫೇಸ್​ಪ್ಯಾಕ್​ ಅನ್ನು ಬಳಸಬಹುದು. ಚರ್ಮದ ಸಮಸ್ಯೆ ಇರುವವರು ವೈದ್ಯರನ್ನು ಸಂಪರ್ಕಿಸಿ ನಂತರ ಬಳಸಿ.