ಲೈಫ್‌ಸ್ಟೈಲ್

ದಸರಾಗೆ ಸ್ವೀಟ್ ಮಾಡ್ಬೇಕೆಂದಿದ್ದೀರಾ?; ಬಾಯಲ್ಲಿ ನೀರೂರಿಸುವ ಸೋರೆಕಾಯಿ ಹಲ್ವಾ ಹೀಗೆ ಮಾಡಿ..Bottle Gourd

ವಿಜಯವಾಣಿ ಸುದ್ದಿ ಜಾಲ

ಆಯುಧ ಪೂಜೆ, ವಿಜಯದಶಮಿಗಾಗಿ ಈ ಬಾರಿ ಡಿಫರೆಂಟ್​ ಆಗಿ ಸಿಹಿ ತಯಾರಿಸಿ. ಸಾಮಾನ್ಯವಾಗಿ ಸೋರೆಕಾಯಿ ಸಾರು ಅಥವಾ ಪಲ್ಯಕ್ಕೆ ಬಳಕೆ ಮಾಡಲಾಗುತ್ತದೆ. ಈ ಬಾರಿ ಅದರ ಬದಲಾಗಿ ಹಲ್ವಾ ಮಾಡಿ. ಇದು ತೂಕ ಹೆಚ್ಚಾಗುವ ಟೆನ್ಷನ್​ ಕೊಡೋದಿಲ್ಲ. ಆರೋಗ್ಯದ ಮೇಲೆಯೂ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎನ್ನುವುದಕ್ಕೆ ಬೇರೆ ಮಾತಿಲ್ಲ.

ಸೋರೆಕಾಯಿಯ ಆರೋಗ್ಯ ಲಾಭವೇನು?

ಸೋರೆಕಾಯಿ ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ. ಅಜೀರ್ಣ ಸಮಸ್ಯೆಗೆ ಮುಕ್ತಿ ನೀಡುತ್ತದೆ. ಹೃದಯದ ಆರೋಗ್ಯಕ್ಕೆ ಸಹಕಾರಿ. ಇದು ರುಚಿಗಷ್ಟೇ ಅಲ್ಲದೇ ದೇಹದ ಆರೋಗ್ಯಕ್ಕೂ ಪರೋಕ್ಷವಾಗಿ ಕೆಲಸ ಮಾಡುತ್ತದೆ.

ಸೋರೆಕಾಯಿ ಹಲ್ವಾ ಮಾಡುವ ವಿಧಾನ

  • ಸೋರೆಕಾಯಿ- 500 ಗ್ರಾಮ್​​ ತುರಿದುಕೊಂಡಿದ್ದು (ಸಿಪ್ಪೆ ತೆಗೆದಿರಿ)

  • ಸಕ್ಕರೆ - ಅರ್ಧ ಕಪ್ ಅಥವಾ ರುಚಿಗೆ ತಕ್ಕಷ್ಟು

  • ತುಪ್ಪ-3-4 ಚಮಚ

  • ಹಾಲು- ಒಂದು ಕಪ್

  • ಗೋಡಂಬಿ- ನಾಲ್ಕೈದು

  • ದ್ರಾಕ್ಷಿ-ನಾಲ್ಕೈದು

  • ಬಾದಾಮಿ-ನಾಲ್ಕೈದು

  • ಬೇಕಿದ್ದರೆ ಖೋವಾ ಬಳಸಬಹುದು, ಖೋವಾ ಬಳಕೆ ಮಾಡದೆಯೂ ಸೋರೆಕಾಯಿ ಹಲ್ವಾ ತಯಾರಿಸಬಹುದಾಗಿದೆ.

  • ಏಲಕ್ಕಿ -ಚಿಟುಕಿದ್ದರೆ ಸಾಕು( ಇಲ್ಲದಿದ್ದರೂ ಹಲ್ವಾ ತಿನ್ನಲು ಸೊಗಸು)

ಮಾಡುವ ವಿಧಾನ

ಮೊದಲಿಗೆ ಬಾಣಲೆಗೆ ತುಪ್ಪ ಹಾಕಿ ದ್ರಾಕ್ಷಿ, ಗೋಡಂಬಿ ಮತ್ತು ಬಾದಾಮಿಯನ್ನು ಸೇರಿಸಿ ಉರಿದುಕೊಂಡು ಪಕ್ಕಕ್ಕೆ ಇಡಿ. ನಂತರ ಅದೆ ಬಾಣಲಿಗೆ ಸೋರೆಕಾಯಿ ತುರಿ ಹಾಕಿ ಹಾಲು ಸೇರಿಸಿ ಚೆನ್ನಾಗಿ ಬೇಯುವವರೆಗೂ ಹಸಿ ಅಥವಾ ಕಾಸಿದ ಹಾಲನ್ನು ಹಾಕಿ ಬೆರೆಸಿಕೊಳ್ಳಿ. ಸೋರೆಕಾಯಿ ಬೆಂದಿದೆ ಎನ್ನುವಾಗ ಸಕ್ಕರೆ ಹಾಕಿ ಮತ್ತೆ ಉರಿದುಕೊಳ್ಳಿ. ಸಿಹಿ ಅಂಶ ಕಡಿಮೆ ಎನಿಸಿದರೆ ಕೊಂಚ ಬೆಲ್ಲ ಸಕ್ಕರೆ, ಸೇರಿಸಬಹುದು. ಇದಾದನಂತರ ಸೋರೆಕಾಯಿಗೆ ಏಲಕ್ಕಿ ಮತ್ತು ಖೋವಾ ಹಾಕಿ ಉರಿಯಿರಿ. ಚೆನ್ನಾಗಿ ತಿರುಗಿಸಿ 2-3 ನಿಮಿಷ ಬೇಯಲು ಬಿಡಿ. ಈಗ ಫ್ರೈ ಮಾಡಿದ ಡ್ರೈ ಫ್ರೂಟ್ಸ್​​ ಬಾಣಲಿಗೆ ಹಾಕಿ ಕಲಿಸಿ. ಇದರೊಂದಿಗೆ ಉರಿಯದ ಡ್ರೈ ಫ್ರೂಟ್​ ಅನ್ನು ಸಹ ಸೇರಿಸಬಹುದು, (ಏಜೆನ್ಸೀಸ್).