Chickpea Water Hack ಸಾಂದರ್ಭಿಕ ಚಿತ್ರ
Chickpea Water Hack: ನಮ್ಮ ಭಾರತೀಯ ಅಡುಗೆಮನೆಗಳಲ್ಲಿ ಕಡಲೆಕಾಳು ಅತ್ಯಂತ ಜನಪ್ರಿಯ ತರಕಾರಿಗಳಲ್ಲಿ ಒಂದಾಗಿದೆ. ಪಲಾವ್, ಕುರ್ಮಾ, ಆಲೂ-ಬಟಾಣಿ ಮಸಾಲಾದಿಂದ ಹಿಡಿದು ಚಾಟ್ಸ್ ಹಾಗೂ ಸಾಗೂವರೆಗೆ ಹಲವು ಬಗೆಯ ರುಚಿಕರವಾದ ಖಾದ್ಯಗಳನ್ನು ತಯಾರಿಸಲು ನಾವು ಬಟಾಣಿಗಳನ್ನು ಹೆಚ್ಚಾಗಿ ಬಳಸುತ್ತೇವೆ. ಒಣ ಕಡಲೆಕಾಳುಗಳನ್ನು ಬಳಸುವಾಗ ನಾವು ಸಾಮಾನ್ಯವಾಗಿ ಅವುಗಳನ್ನು ರಾತ್ರಿಯಿಡೀ ನೆನೆಸಿಟ್ಟು, ಮರುದಿನ ಬೆಳಿಗ್ಗೆ ಬೇಯಿಸುತ್ತೇವೆ. ಆದರೆ, ಕಡಲೆಕಾಳು ಬೆಂದ ನಂತರ ಪಾತ್ರೆಯಲ್ಲಿ ಉಳಿಯುವ ನೀರನ್ನು ನೇರವಾಗಿ ಕಿಚನ್ ಸಿಂಕ್ಗೆ ಎಸೆಯುವುದು ನಮ್ಮಲ್ಲಿ ಬಹುತೇಕರ ರೂಢಿ.
ಕಡಲೆಕಾಳನ್ನು ಬೇಯಿಸಿದ ನಂತರ ಅದರಲ್ಲಿ ಉಳಿದಂತಹ ನೀರನ್ನು ಬಳಸಿ ಅದಕ್ಕೆ ಕೇವಲ ಈ ಎರಡು ಪದಾರ್ಥಗಳನ್ನು ಸೇರಿಸಿ ಒಂದು ನಿಮಿಷ ಮಿಕ್ಸ್ ಮಾಡುವ ಮೂಲಕ ಮನೆಯಲ್ಲಿಯೇ ನಯವಾದ ಕ್ರೀಮ್ ತಯಾರಿಸಬಹುದು ಎಂದು ಹೇಳಲಾಗುತ್ತದೆ. ಹಾಗಿದ್ದರೆ, ಇನ್ಯಾಕೆ ತಡ ಬಟಾಣಿ ಬೇಯಿಸಿದ ನೀರಿನಲ್ಲಿ ಕ್ರೀಮ್ ಮಾಡುವುದು ಹೇಗೆ ಎಂಬುದನ್ನು ನೋಡೋಣ ಬನ್ನಿ...
ಅಕ್ವಾಫಾಬಾ ಎಂಬುದು ಕಡಲೆಕಾಳನ್ನು ನೆನೆಸಿ, ಬೇಯಿಸಿದ ನಂತರ ಉಳಿಯುವ ದಪ್ಪ ದ್ರವವಾಗಿದೆ. ಇದರ ನೈಸರ್ಗಿಕ ಪ್ರೋಟೀನ್‌ಗಳು ಮತ್ತು ಪಿಷ್ಟಗಳು ಅದನ್ನು ನೊರೆ ಮತ್ತು ಹಗುರವಾಗಿಸುತ್ತವೆ. ಅದಕ್ಕಾಗಿಯೇ ಇದನ್ನು ಮೊಟ್ಟೆ-ಮುಕ್ತ ಪಾಕವಿಧಾನಗಳಲ್ಲಿ ಮೊಟ್ಟೆಯ ಬಿಳಿಭಾಗದ ಬದಲಿಗೆ ಬಳಸಲಾಗುತ್ತದೆ.
ಬೇಕಾಗುವ ಪದಾರ್ಥಗಳು
*½ ಟೀಚಮಚ ವೆನಿಲ್ಲಾ ಎಸೆನ್ಸ್
ತಯಾರಿಸುವ ವಿಧಾನ
ಮೊದಲಿಗೆ ಕಡಲೆ ಕಾಳನ್ನು ಕುದಿಸಿದ ನೀರನ್ನು ಚೆನ್ನಾಗಿ ಸೋಸಿ, ಅದರಲ್ಲಿ ಯಾವುದೇ ಕಡಲೆ ಕಾಳಿನ ಕಣಗಳು ಇರದಂತೆ ಪ್ರತ್ಯೇಕಿಸಿ. ಈ ನೀರು ಸ್ವಲ್ಪ ದಪ್ಪನಾಗಿದ್ದರೆ ಕ್ರೀಮ್ ಇನ್ನು ಚೆನ್ನಾಗಿ ಬರುತ್ತದೆ. ನಂತರ ಬೇಯಿಸಿದ ನೀರನ್ನು ತಣ್ಣಗಾಗುವರೆಗೂ ಬಿಡಿ.
ಈ ತಣ್ಣಗಾದ ನಂತರ ಈ ನೀರನ್ನು ಒಂದು ದೊಡ್ಡ ಬೌಲ್‌ಗೆ ಹಾಕಿ, ಎಲೆಕ್ಟ್ರಿಕ್ ಬೀಟರ್ ಅಥವಾ ಹ್ಯಾಂಡ್ ವಿಸ್ಕರ್ ಬಳಸಿ ವೇಗವಾಗಿ ಕೇವಲ ಒಂದು ನಿಮಿಷಗಳ ಕಾಲ ಚೆನ್ನಾಗಿ ಬ್ಲೆಂಡ್ ಮಾಡಿ. ಒಂದೇ ನಿಮಿಷದಲ್ಲಿ ಆ ನೀರು ಮೊಟ್ಟೆಯ ಬಿಳಿಭಾಗದಂತೆ ನೊರೆ ನೊರೆಯಾಗಿ, ಹಗುರವಾದ ಬಿಳಿ ಬಣ್ಣಕ್ಕೆ ತಿರುಗಲು ಪ್ರಾರಂಭಿಸುತ್ತದೆ.
ಈಗ ಅದಕ್ಕೆ ಸ್ವಲ್ಪ ಸ್ವಲ್ಪವೇ ಸಕ್ಕರೆ ಪುಡಿ ಮತ್ತು ವೆನಿಲ್ಲಾ ಎಸೆನ್ಸ್ ಸೇರಿಸುತ್ತಾ ಇನ್ನು 1-2 ನಿಮಿಷ ಬ್ಲೆಂಡ್ ಮಾಡಿ. ನೀರು ಸಂಪೂರ್ಣವಾಗಿ ಗಟ್ಟಿಯಾಗಿ, ಬೇಕರಿಯಲ್ಲಿ ಸಿಗುವಂತಹ ನಯವಾದ ವಿಪ್ಪಿಂಗ್ ಕ್ರೀಮ್ ರೂಪಕ್ಕೆ ಬರುತ್ತದೆ. ಪಾತ್ರೆಯನ್ನು ಉಲ್ಟಾ ಮಾಡಿದರೂ ಕ್ರೀಮ್ ಕೆಳಗೆ ಬೀಳದಷ್ಟು ಗಟ್ಟಿಯಾದಾಗ ಕ್ರೀಮ್ ಸಿದ್ಧವಾಗಿದೆ ಎಂದರ್ಥ.
ಇದನ್ನು ಯಾವುದಕ್ಕೆ ಬಳಸಬಹುದು?
ಕೇಕ್ ಮತ್ತು ಕಪ್‌ಕೇಕ್ ಫ್ರಾಸ್ಟಿಂಗ್, ಮೂಸ್, ಟ್ರಿಫಲ್, ಹಣ್ಣಿನ ಸಿಹಿತಿಂಡಿ, ಹಾಟ್ ಚಾಕೊಲೇಟ್ ಅಥವಾ ಕಾಫಿ ಟಾಪಿಂಗ್ಗೆ ಇದನ್ನು ಬಳಸಬಹುದು (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.