Eating Alone Health Risks
- ಒಂಟಿಯಾಗಿ ಊಟ ಮಾಡುವುದರಿಂದ ಜೀರ್ಣಕ್ರಿಯ, ಹೃದಯ ಸಮಸ್ಯೆ, ಬೊಜ್ಜು ಹೆಚ್ಚಳಕ್ಕೆ ಕಾರಣ
- 2022 ರಿಂದ 2023 ರವರೆಗೆ ನಡೆದ ಸಮೀಕ್ಷೆಯಿಂದ ಮಾಹಿತಿ ಬಹಿರಂಗ
- ವಾರಕ್ಕೆ ಮೂರು ಬಾರಿಯಾದರೂ ಸ್ನೇಹಿತರೊಡಗೂಡಿ ಆಹಾರ ಸೇವಿಸುವುದು ಉತ್ತಮ ಮಾರ್ಗ
Eating Alone Health Risks: ಈ ಹಿಂದೆ ಅವಿಭಕ್ತ ಕುಟುಂಬಗಳು ಹೆಚ್ಚಿದ್ದ ಕಾರಣ, ಎಲ್ಲರು ಒಟ್ಟಾಗಿ ಅಡುಗೆ ಮಾಡುತ್ತಾ..ಕೆಲಸ ಮಾಡುತ್ತಾ , ಹರಟೆ ಒಡೆಯುತ್ತ ಮಾತಿನಲ್ಲೇ ಒಬ್ಬೊಬ್ಬರ ಕಾಲೆಳೆಯುತ್ತ ಊಟ ಮಾಡುತ್ತಿದ್ದರು. ಆದರೆ.. ಎಐ ಜಗತ್ತಿನಲ್ಲಿ ಜನರನ್ನು ಮಾತನಾಡಿಸುವುದು ಕಷ್ಟವಾಗಿದೆ. ಅವಿಭಕ್ತ ಕುಟುಂಬ ದಿನ ಕಳೆದಂತೆ ವಿಭಕ್ತ ಕುಟುಂಬವಾಗಿ ಮಾರ್ಪಾಡಾಗುತ್ತಿದೆ. ಈಗ ಮೂರರಿಂದ ಹೆಚ್ಚು ಜನರು ಒಟ್ಟಾಗಿ ಇರವುದಕ್ಕೂ ಹಿಂಜರಿಯುತ್ತಿರುವ ಕಾಲಮಾನದಲ್ಲಿದ್ದೇವೆ.
ಈಗ ಒಂಟಿಯಾಗಿ ಕೂತು ಊಟ ಮಾಡೋದು ಸಾಮಾನ್ಯವಾಗಿದೆ. ಮೆಟ್ರೋ ನಗರದಲ್ಲಿ ಬದುಕುತ್ತಿರುವರಿಗೆ ಇದೇ ಸರಿಯಾದ ಮಾರ್ಗ ಎನಿಸುತ್ತದೆ. ಯಾರ ತಲೆಬಿಸಿಯೂ ಇಲ್ಲದೆ ಏಕಾಂತದಲ್ಲಿ ತಿನ್ನುವುದು ಚಂದ ಎನಿಸುತ್ತದೆ. ಆದರೆ, ಹೊಸ ವರದಿಯೊಂದು ಈ ಮಾದರಿ ಆಹಾರ ಸೇವನೆ ಹಾನಿಕಾರಕ ಎಂದಿದೆ.
ಹೌದು, 2022 ರಿಂದ 2023 ರವರೆಗೆ 142 ದೇಶಗಳು ಮತ್ತು ಪ್ರಾಂತ್ಯಗಳಲ್ಲಿ ನಡೆಸಲಾದ ಜಾಗತಿಕ ಸಮೀಕ್ಷೆ ಪ್ರಕಾರ ಈ ವಿಚಾರ ಬೆಳಕಿಗೆ ಬಂದಿದೆ. ಒಂಟಿಯಾಗಿ ಟಿವಿ, ಮೊಬೈಲ್ ಬಳಕೆ ಮಾಡುತ್ತಾ ಅಥವಾ ಏನನ್ನೋ ಆಲೋಚಿಸುತ್ತಾ ಊಟ ಮಾಡುವುದು ದೇಹದ ಮೇಲೆ ಪರಿಣಾಮ ಬೀರಲಿದೆ ಎನ್ನುವುದರ ಬಗ್ಗೆ ಮಾಹಿತಿ ಈ ಲೇಖನದಲ್ಲಿ ಇದೆ.
ಅನಾರೋಗ್ಯಕರ ಆಹಾರಕ್ಕೆ ಒಗ್ಗಿಕೊಳ್ಳೋದು
ಗುಂಪಿನಲ್ಲಿ ಕೂತು ಊಟ ಮಾಡುವಾಗ ಆಹಾರದಲ್ಲಿರುವ ಪೋಷಕಾಂಶದ ಬಗ್ಗೆ, ರುಚಿಯ ಬಗ್ಗೆ ಮಾತನಾಡುತ್ತಾ ಸೇವನೆ ಮಾಡುತ್ತೇವೆ, ಅಡುಗೆ ತಯಾರಿ ಮಾಡುತ್ತೇವೆ. ಯಾವ ಆಹಾರ ಇಂದು ಬೇಕು ಎಂದು ಮಾತನಾಡಿಕೊಂಡು, ಯಾವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಕೇಳಿಕೊಂಡು ತಯಾರಿಸುತ್ತೇವೆ. ಆದರೆ, ಇತ್ತೀಚಿನ ದಿನಗಳಲ್ಲಿ ಒಬ್ಬೊಬ್ಬರೇ ಅಡುಗೆ ಮಾಡಿಕೊಂಡು ತಿನ್ನುವಾಗ ಕಾಟಾಚಾರಕ್ಕೆ ಊಟವನ್ನು ತಯಾರಿಸಿಕೊಳ್ಳುತ್ತೇವೆ. ಜೊತೆಗೆ ತಿನ್ನುತ್ತೇವೆ.
ಅಗತ್ಯವಿಲ್ಲದಷ್ಟು ತಿನ್ನೋದು
ಮೊಬೈಲ್ ಅಥವಾ ಟಿವಿ ನೋಡುತ್ತಾ ತಿನ್ನುವುದರಿಂದ ದೇಹಕ್ಕೆ ಬೇಕಾದ ಪ್ರಮಾಣಕ್ಕಿಂತ ಹೆಚ್ಚಾಗಿ ಆಹಾರ ಸೇವನೆ ಮಾಡುತ್ತೇವೆ. ಇಲ್ಲಿ ಹೊಟ್ಟೆ ತುಂಬಿದ ಭಾವನೆಯೇ ಮೂಡೋದಿಲ್ಲ. ಹೀಗಾಗಿ ಹೆಚ್ಚು ತಿಂದು ದೇಹದಲ್ಲಿ ಬೊಜ್ಜು ಹೆಚ್ಚಾಗುವಂತೆ ಮಾಡಿಕೊಳ್ಳುತ್ತೇವೆ. ಇದು ತೂಕ ಏರಿಕೆಗೆ ಕಾರಣವಾಗುತ್ತದೆ.
ಜೀರ್ಣಕ್ರಿಯೆಗೆ ಸಮಸ್ಯೆ
ಒಬ್ಬರೇ ಕೂತು ತಿನ್ನುವುದರಿಂದ ಮೆಟಬಾಲಿಸಂ ಉತ್ಪತ್ತಿಯಾಗದೆ ಕುಂಠಿತವಾಗುತ್ತದೆ. ಆದರೆ, ಸಂತೋಷವಾಗಿ ಕೂಡು ಕುಟುಂಬದಂತೆ ಕೆಲವರ ಜೊತೆಗೆ ಕೂತು ಊಟ ಮಾಡೋದ್ರಿಂದಾಗಿ ಒತ್ತಡ ಹೆಚ್ಚಾಗದೆ ಜೀರ್ಣಕಾರಿ ರಸಗಳು ಉತ್ಪತ್ತಿಯಾಗಿ ಮೆಟಬಾಲಿಸಂ ಕುಂಠಿತವನ್ನು ತಡೆಯುತ್ತದೆ. ಜೊತೆಗೆ ಇದು ಮಲಬದ್ಧತೆ ತಡೆಗೂ ಕಾರಣವಾಡುತ್ತದೆ.
ಹೃದಯ ಆರೋಗ್ಯಕ್ಕೆ ಕಾಪಾಡಿಕೊಳ್ಳಿ
ದೀರ್ಘಕಾಲ ಒಂಟಿಯಾಗಿ ಊಟ ಮಾಡುವುದರಿಂದ ಮೆಟಬಾಲಿಕ್ ಸಿಂಡ್ರೋಮ್ ಕಾಣಿಸಿಕೊಂಡು ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಏರಿಕೆಗೆ ಕಾರಣವಾಗುತ್ತದೆ. ಇವು ಹೃದಯಾಘಾತದಂತಹ ಸಮಸ್ಯೆ ಉದ್ಭವಕ್ಕೆ ಕಾರಣವಾಗುತ್ತದೆ.
ಸಮಸ್ಯೆಗೆ ಪರಿಹಾರವೇನು?
ವಾರ ಪೂರ್ತಿ ಒಂಟಿಯಾಗಿ ಊಟ ಮಾಡುವ ಬದಲು ವಾರದಲ್ಲಿ ಒಂದೆರಡು ದಿನ ನಿಮ್ಮ ಗೆಳೆಯ ಅಥವಾ ಗೆಳತಿಯರ ಮನೆಗೆ ಊಟಕ್ಕೆ ಹೋಗಿ ಅಥವಾ ಅವರನ್ನೇ ನಿಮ್ಮ ಮನೆಗೆ ಊಟಕ್ಕೆ ಕರೆದು ಒಟ್ಟಾಗಿ ಅಡುಗೆ ತಯಾರಿಸಿ ಊಟ ಮಾಡಿ. ಇದ್ರಿಂದ ಆರೋಗ್ಯದಲ್ಲಿ ಸಕರಾತ್ಮಕ ಜೀರ್ಣಕಾರಿ ರಸಗಳು ಉದ್ಭವವಾಗುತ್ತದೆ. ಊಟ ಮಾಡುವಾಗ ಮೊಬೈಲ್ ಬಳಸದೆ ಇರುವ ಹವ್ಯಾಸ ಬೆಳೆಸಿಕೊಳ್ಳಿ, (ಏಜೆನ್ಸೀಸ್).
ಆನ್ಲೈನ್ನಲ್ಲಿ ಲಭ್ಯವಾದ ಮಾಹಿತಿಯ ಪ್ರಕಾರ ಈ ಲೇಖನವನ್ನು ಬರೆಯಲಾಗಿದೆ. ಇದು ಮಾಹಿತಿಗಾಗಿ ಮಾತ್ರ. ಇದನ್ನು ವಿಜಯವಾಣಿ ಡಾಟ್ ನೆಟ್ ದೃಢಪಡಿಸುವುದಿಲ್ಲ.