- ಇತ್ತೀಚಿನ ದಿನಗಳಲ್ಲಿ ಮದ್ಯಪಾನ ಮಾಡುವವರ ಸಂಖ್ಯೆ ಹೆಚ್ಚುತ್ತಲೇ ಇದೆ
- ಅನೇಕರು ಆಲ್ಕೋಹಾಲ್ ಸೇವನೆಯ ಸಂದರ್ಭದಲ್ಲಿ ಚಿಕನ್ ಮತ್ತು ಮಟನ್ ತಿನ್ನುತ್ತಾರೆ
- ಮದ್ಯದ ಜೊತೆ ಮಾಂಸಹಾರ ಸೇವನೆ ಆರೋಗ್ಯಕರವೇ ಒಳ್ಳೆಯದೇ?
Alcohol: ಇತ್ತೀಚಿನ ದಿನಗಳಲ್ಲಿ ಮದ್ಯಪಾನ ಮಾಡುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಆಲ್ಕೋಹಾಲ್ ಸೇವನೆಯ ಸಂದರ್ಭದಲ್ಲಿ ಅನೇಕರು ಚಿಕನ್ ಮತ್ತು ಮಟನ್ ನಂತಹ ಆಹಾರಗಳನ್ನು ಸೇವಿಸಲು ಇಷ್ಟ ಪಡುತ್ತಾರೆ. ಇದನ್ನು ನೀವು ಮಾಡಿರುತ್ತೀರಾ. ಆದರೆ, ಮದ್ಯದ ಜೊತೆ ಈ ಮಾಂಸಹಾರವು ಆರೋಗ್ಯಕರವೇ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಈ ಪ್ರಶ್ನೆಗೆ ನಾವಿಂದು ಉತ್ತರಿಸಲಿದ್ದೇವೆ.
ಮದ್ಯಪಾನದೊಂದಿಗೆ ಈ ಮಾಂಸಗಳನ್ನು ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದೇ?
ನೀವು ಮದ್ಯದೊಂದಿಗೆ ಕೋಳಿ ಅಥವಾ ಕುರಿ ಮಾಂಸವನ್ನು ಸೇವಿಸಿದಾಗ, ಅದು ನಿಮ್ಮ ದೇಹದ ಮೇಲೆ 2 ಪಟ್ಟು ನಕರಾತ್ಮಕ ಪರಿಣಾಮವನ್ನು ಬೀರುತ್ತದೆ. ಆದಾಗ್ಯೂ, ಮದ್ಯದೊಂದಿಗೆ ಸಸ್ಯಹಾರವನ್ನು ಸೇವಿಸುವುದರಿಂದ ಇದು ವ್ಯಕ್ತಿಯ ಆರೋಗ್ಯ ಸ್ಥಿತಿ ಮತ್ತು ಸೇವಿಸುವ ಪ್ರಮಾಣದ ಮೇಲೆ ಅವಲಂಬಿತವಾಗಿರುತ್ತದೆ.
ಮದ್ಯ ಪಾನದ ಜೊತೆ ಮಾಂಸವನ್ನು ಸೇವಿಸುವುದು ಅಪಾಯಕಾರಿ. ಏಕೆಂದರೆ ಆಲ್ಕೋಹಾಲ್ ಯಕೃತ್ತಿನ ಮೇಲೆ ಒತ್ತಡವನ್ನುಂಟು ಮಾಡುತ್ತದೆ. ಇದು ಮಾಂಸ ಅಷ್ಟೇ ಅಲ್ಲದೇ, ಹುರಿದ ಮತ್ತು ಮಸಾಲೆಯುಕ್ತ ಆಹಾರವನ್ನು ಸೇವಿಸುವುದರಿಂದ ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಜೊತೆಗೆ ಕೊಲೆಸ್ಟ್ರಾಲ್ ಮತ್ತು ಕ್ಯಾಲೊರಿಯನ್ನು ಹೆಚ್ಚಿಸಿ ಯಕೃತ್, ಜೀರ್ಣಕ್ರಿಯೆ ಮತ್ತು ಹೊಟ್ಟೆಯ ಸಮಸ್ಯೆಗೆ ಕಾರಣವಾಗುತ್ತದೆ.
ಮಾಂಸ ತಿನ್ನುವುದರಿಂದಾಗುವ ಹಾನಿಕಾರಕ ಪರಿಣಾಮಗಳು
ಮದ್ಯ ಮತ್ತು ಮಾಂಸವನ್ನು ಒಟ್ಟಿಗೆ ಸೇವಿಸುವುದರಿಂದ ಇದು ರುಚಿಯನ್ನು ಹೆಚ್ಚಿಸಿದರೂ, ಅಧ್ಯಯನಗಳ ಪ್ರಕಾರ ಇದು ದೇಹಕ್ಕೆ ಗಂಭೀರ ಹಾನಿಯನ್ನು ಉಂಟು ಮಾಡುತ್ತದೆ. ಇದು ಕೊಬ್ಬಿನ ಯಕೃತ್ತು ಮತ್ತು ಇತರ ಯಕೃತ್ತಿನ ಸಮಸ್ಯೆಗಳಿಗೆ ಕಾರಣವಾಗಬಹುದು.
ಅತಿಯಾದ ಮಸಾಲೆಯುಕ್ತ ಪದಾರ್ಥಗಳು ಹಾಗೂ ಹುರಿದ ಮಾಂಸಹಾರಿ ಆಹಾರಗಳನ್ನು ಆಲ್ಕೋಹಾಲ್ ಜೊತೆ ಸೇವಿಸುವುದರಿಂದ ಕ್ಯಾನ್ಸರ್ ಅಪಾಯ, ಹೊಟ್ಟೆ ಉರಿ, ಆಮ್ಲೀಯತೆ ಹೆಚ್ಚಾಗುವುದು, ಜೀರ್ಣಕಾರಿ ಸಮಸ್ಯೆ, ಲಿವರ್ ಹಾನಿ, ಡಯಾಬಿಟೀಸ್, ಗ್ಯಾಸ್ಟ್ರಿಕ್ ನಂತಹ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಇದು ದೇಹದಲ್ಲಿ ಅಧಿಕ ಬೊಜ್ಜು ಬರಲು ಕಾರಣವಾಗಿಸುತ್ತದೆ.
ಮದ್ಯದೊಂದಿಗೆ ಏನು ತಿನ್ನಬೇಕು?
ಯಾವುದೇ ವ್ಯಕ್ತಿಯು ಮದ್ಯ ಸೇವನೆಯನ್ನು ಮಾಡಿದ ನಂತರ ಮಾಂಸಹಾರದ ಬದಲಿಗೆ, ಸಲಾಡ್ ಸೇವಿಸಿರಿ. ಇದು ದೇಹಕ್ಕೆ ಹೆಚ್ಚಿನ ನೀರಿನಂಶವನ್ನು ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ. ಹೆಚ್ಚಿನ ನೀರಿನಾಂಶ ಇರುವಂತಹ ಆಹಾರಗಳಾದ ಧಾನ್ಯಗಳನ್ನು ಸೇರಿಸಿಕೊಳ್ಳಿ. ಇವು ಹಾನಿಯಾಗುವುದನ್ನು ಬಹುತೇಕವಾಗಿ ಕಡಿಮೆ ಮಾಡುತ್ತದೆ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.