- ಕಲ್ಲಂಗಡಿ ಹಣ್ಣು ಅಥವಾ ಜ್ಯೂಸ್ ಮಧುಮೇಹಿಗಳಿಗೆ ಯಾವುದು ಬೆಸ್ಟ್.
- ಹಣ್ಣನ್ನು ಜಗಿದು ತಿನ್ನುವುದರಿಂದ ಲಾಲಾರಸ ಉತ್ಪತ್ತಿಯಾಗಿ ದೇಹದ ಜೀರ್ಣಕ್ರಿಯೆಗೆ ಸಹಕಾರಿ.
- ಕಲ್ಲಂಗಡಿ ಹಣ್ಣಿನ ಜ್ಯೂಸ್ನಲ್ಲಿ ನಾರಿನಾಂಶ ಕಡಿಮೆಯಾಗುವುದರಿಂದ ರಕ್ತದಲ್ಲಿ ಸಕ್ಕರೆ ಸೇರುತ್ತದೆ.
ಜ್ಯೂಸ್ ಮಾಡಿದ್ರೆ ನಾರಿನಾಂಶಕ್ಕೆ ಬೀಳುತ್ತೆ ಬ್ರೇಕ್
ಕಲ್ಲಂಗಡಿ ಹಣ್ಣಿನಲ್ಲಿ ನಾರಿನಾಂಶ ಸಮೃದ್ಧವಾಗಿರುತ್ತದೆ. ಇದು ದೇಹ ಸಕ್ಕರೆ ಅಂಶವನ್ನು ಶೀಘ್ರವಾಗಿ ಹೀರಿಕೊಳ್ಳುವುದನ್ನು ನಿಧಾನಗೊಳಿಸುತ್ತದೆ. ಆದರೆ ಜ್ಯೂಸ್ ಮಾಡುವಾಗ ನಾರಿನಂಶ ಹೊರಹೋಗುವುದರಿಂದ ರಕ್ತದಲ್ಲಿ ಸಕ್ಕರೆ ಮಟ್ಟ ತಕ್ಷಣವೇ ಏರಿಕೆಯಾಗಬಹುದು ಎನ್ನುತ್ತಾರೆ ತಜ್ಞರು.
ಹಣ್ಣು ಜಗಿಯುವುದು ಜೀರ್ಣಕ್ರಿಯೆಗೆ ಸಹಕಾರಿ
ಕಲ್ಲಂಗಡಿ ಹಣ್ಣನ್ನು ಅಗಿಯುವದರಿಂದ ಬಾಯಿಯಲ್ಲಿ ಲಾಲಾರಸದ ಒಂದು ಅಂಶವಾದ ಅಮೈಲೇಸ್ ಉತ್ಪತ್ತಿಯಾಗಿ ಜೀರ್ಣಕ್ರಿಯೆಗೆ ಸಹಕಾರಿ. ಇದು ಹೊಟ್ಟೆ ತುಂಬಿದ ಭಾವನೆ ಕೊಡುವುದರಿಂದ ಅಗತ್ಯಕ್ಕಿಂತ ಹೆಚ್ಚು ಆಹಾರ ಸೇವಿಸೋದನ್ನ ಕಡಿಮೆ ಮಾಡಲಿದೆ, ಇನ್ನೂ ನೇರವಾಗಿ ಜೀರ್ಣಾಂಗವ್ಯೂಹಕ್ಕೆ ಜ್ಯೂಸ್ ಸೇರುವುದರಿಂದ ಇನ್ಸುಲಿನ್ ಮಟ್ಟದಲ್ಲಿ ಹೆಚ್ಚಿನ ವ್ಯತ್ಯಾಸ ಉಂಟಾಗಬಹುದು.
ಕಲ್ಲಂಗಡಿ ಹಣ್ಣಿನಲ್ಲಿ ಗ್ಲೈಸೆಮಿಕ್ ಲೋಡ್ ಶೇ.75ರಷ್ಟಿದೆ. ಹೀಗಿದ್ದಾಗ್ಯೂ ಅದನ್ನು ಅಗಿಯುವುದರಿಂದ ಜೀರ್ಣಕ್ರಿಯೆಗೆ ಹಿತಕರ. ಜ್ಯೂಸ್ ರೂಪದಲ್ಲಿ ಸೇವಿಸಿದಾಗ ಅತಿಯಾದ ನೈಸರ್ಗಿಕ ಸಕ್ಕರೆ ದೇಹವನ್ನು ಸೇರುತ್ತದೆ. ಕಲ್ಲಂಗಡಿ ಜ್ಯೂಸ್ನಲ್ಲಿ ನಾರಿನಂಶ ಇರುವುದಿಲ್ಲ ಮತ್ತು ಜೀರ್ಣಕ್ರಿಯೆ ವೇಗವಾಗಿ ನಡೆಯುವುದರಿಂದ ರಕ್ತದಲ್ಲಿ ಸಕ್ಕರೆ ಮಟ್ಟ ತಕ್ಷಣ ಏರಿ ನಂತರ ಕುಸಿಯಬಹುದು.
ಶುಗರ್ ಪೇಷೆಂಟ್ಗಳು ಪಾಲಿಸಬೇಕಾದ ಕ್ರಮ ಇದು
ಜ್ಯೂಸ್ಗಿಂತಲೂ ಹಣ್ಣನ್ನು ತಿನ್ನುವುದು ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರಿಗೆ ಮಾತ್ರವಲ್ಲ ಎಲ್ಲರಿಗೂ ಉತ್ತಮ ಇದು, ಸಕ್ಕರೆಯು ರಕ್ತಕ್ಕೆ ನೇರ ತಲುಪುವುದನ್ನು ತಡೆಯುತ್ತದೆ.
ರಕ್ತದ ಸಕ್ಕರೆ ಮಟ್ಟ ದಿಢೀರ್ ಏರುವುದನ್ನು ತಪ್ಪಿಸಲು ಹಣ್ಣಿನ ಜೊತೆ ಪ್ರೋಟೀನ್ ಅಥವಾ ಕೊಬ್ಬಿನಾಂಶವಿರುವ ಆಹಾರಗಳನ್ನು ಸೇರಿಸಿಕೊಳ್ಳುವುದು ಒಳ್ಳೆಯದು. ಎಷ್ಟು ಪ್ರಮಾಣದಲ್ಲಿ ಸೇವಿಸುತ್ತೀರಿ ಎಂಬುದು ಮುಖ್ಯ. ಹಣ್ಣನ್ನು ಮಿತವಾಗಿ ಸೇವಿಸುವುದು ಮತ್ತು ಪೌಷ್ಟಿಕತಜ್ಞರ ಸಲಹೆ ಪಡೆಯುವುದು ಉತ್ತಮ. ಪ್ಯಾಕ್ ಮಾಡಿದ ಜ್ಯೂಸ್‌ಗಳಿಗಿಂತ ತಾಜಾ ಹಣ್ಣುಗಳನ್ನು ತಿನ್ನಲು ಆರಿಸಿಕೊಳ್ಳಿ, (ಏಜೆನ್ಸೀಸ್).