Tomato Rice: ತೂಕ ಇಳಿಸಿಕೊಳ್ಳುವುದು ಬಹಳ ಸುಲಭವಾದ ಮಾತೇನಲ್ಲ. ಈ ಪ್ರಕ್ರಿಯೆಗೆ ಬಹಳಷ್ಟು ಶ್ರಮ ಮತ್ತು ಆಸಕ್ತಿ ಬೇಕಾಗಿರುತ್ತದೆ. ಅಂತಹವರಿಗಾಗಿ ನಾವಿಂದು ಕೆಂಪಕ್ಕಿ ಟೊಮ್ಯಾಟೋ ರೈಸ್ ಮಾಡುವುದನ್ನು ಹೇಳಿ ಕೊಡಲಿದ್ದೇವೆ. ಇದು ಆರೋಗ್ಯಕರ, ರುಚಿಕರ ಮತ್ತು ಸರಳ ಆಹಾರ ಪದಾರ್ಥವಾಗಿದ್ದು, ಟೊಮ್ಯಾಟೋ ಬಾತ್‌ಗಿಂತ ಹೆಚ್ಚು ಫೈಬರ್ ರಿಚ್ ಆಗಿದೆ. ಇದರ ಸೇವನೆಯು ಹೊಟ್ಟೆಯ ಬೊಜ್ಜು ಕರಗಿಸಲು ಸಹಾಯಕವಾಗಿದೆ.
ಬೇಕಾಗುವ ಪದಾರ್ಥಗಳು
* ¾ ಕಪ್ ಬೇಯಿಸಿದ ಕೆಂಪು ಅಕ್ಕಿ
* ನಿಂಬೆ ಗಾತ್ರದ ಹುಣಸೆ ಹಣ್ಣು
ಮಾಡುವ ವಿಧಾನ
ಮೊದಲು ಒಂದು ಪಾತ್ರೆಗೆ ಎಣ್ಣೆ ಹಾಕಿ ಅದಕ್ಕೆ ಜೀರಿಗೆ, ಈರುಳ್ಳಿ ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಿ. ನಂತರ ಅದಕ್ಕೆ ರುಬ್ಬಿದ ಟೊಮೆಟೋ, ಹಸಿ ಮೆಣಸಿನಕಾಯಿ, ಹುಣಸೆ ಹಣ್ಣಿನ ರಸ ಹಾಕಿ ಮಿಕ್ಸ್ ಮಾಡಿ ಒಗ್ಗರಣೆ ಮಾಡಿಟ್ಟುಕೊಳ್ಳಿ. ಸ್ವಲ್ಪ ತಣ್ಣಗಾದ ನಂತರ ಮಾಡಿಟ್ಟುಕೊಂಡಿರುವ ಅನ್ನಕ್ಕೆ ಒಗ್ಗರಣೆ ಸೇರಿಸಿ ಮಿಕ್ಸ್ ಮಾಡಿ ನಂತರ ಸೇವಿಸಿರಿ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.