Recipe: ತೂಕ ಹೆಚ್ಚಿಸಿಕೊಳ್ಳುವ ಪ್ರಕ್ರಿಯೆ ತುಂಬಾ ಕಷ್ಟಕರ. ಇದಕ್ಕಾಗಿ ಹಲವಾರು ಜನರು ವ್ಯಾಯಾಮ, ಯೋಗ, ತರಬೇತಿ ಪಡೆಯಲು ಹೋಗುತ್ತಾರೆ. ಆದರೂ ತೂಕ ಹೆಚ್ಚಾಗದೇ ನಿರಾಸೆಗೊಳ್ಳುತ್ತಾರೆ. ಉತ್ತಮ ಆಹಾರದೊಂದಿಗೆ ಪೌಷ್ಟಿಕಾಂಶದಿಂದ ಕೂಡಿದ ಆಹಾರಗಳು ಕೂಡ ತೂಕ ಹೆಚ್ಚಾಗಲು ಕಾರಣವಾಗುತ್ತದೆ. ಹಾಗಾಗಿ ನೀವೇನಾದರೂ, ತೂಕ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ ಈ ಡ್ರೈ ಫ್ರೂಟ್ ರೋಲ್ ಸವಿಯಿರಿ.
ಮೊದಲು ಒಂದು ಕಪ್ ಖರ್ಜೂರ ತೆಗೆದುಕೊಂಡು ಅದರಲ್ಲಿರುವ ಬೀಜವನ್ನು ತೆಗೆದು ಮಿಕ್ಸಿ ಮಾಡಿಕೊಳ್ಳಿ. ನಂತರ ಗೋಡಂಬಿ, ಪಿಸ್ತಾ, ಬಾದಾಮಿಯನ್ನು ಸಣ್ಣಕ್ಕೆ ಕತ್ತರಿಸಿಕೊಳ್ಳಿ. ಇದಾದ ಬಳಿಕ ಒಲೆಯ ಮೇಲೆ ಹಂಚನ್ನು ಇಟ್ಟು ಅದ್ಕಕೆ ಬಿಳಿ ಎಳ್ಳನ್ನು ಹಾಕಿ ಸ್ವಲ್ಪ ಸಮಯ ಹುರಿಯಿರಿ. ಅದು ಕೆಂಪು ಬಣ್ಣಕ್ಕೆ ತಿರುಗಿದ ನಂತರ ಅದನ್ನು ಕೆಳಗಿಳಿಸಿ.
ಒಂದು ಬಾಣಲೆಗೆ ತುಪ್ಪ ಹಾಕಿ ಅದಕ್ಕೆ ಖರ್ಜೂರ ಸೇರಿಸಿ ಚೆನ್ನಾಗಿ ಬಾಡಿಸಿ, ನಂತರ ಅದಕ್ಕೆ ಗೋಡಂಬಿ, ಪಿಸ್ತಾ, ಬಾದಾಮಿ, ಎಳ್ಳು ಸೇರಿಸಿ ಮಿಕ್ಸ್ ಮಾಡಿಕೊಳ್ಳಿ. ಇದಾದ ಬಳಿಕ ಒಂದು ಟಿಶ್ಯೂ ಮೇಲೆ ತಯಾರಿಸಿದ ಮಿಶ್ರಣವನ್ನು ಇಟ್ಟು ರೋಲ್ ಮಾಡಿಕೊಳ್ಳಿ. ನಂತರ ಚಿಕ್ಕ ಆಕಾರಕ್ಕೆ ಕತ್ತರಿಸಿಕೊಳ್ಳಿ. ನಂತರ ಸವಿಯಿರಿ (ಏಜೆನ್ಸೀಸ್)
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.