Pepper rice (ಸಾಂದರ್ಭಿಕ ಚಿತ್ರ) 
ಆಹಾರ

ಚಳಿಗಾಲದ ಚಳಿಗೆ ಖಾರ-ಖಾರ 'ಪೆಪ್ಪರ್ ರೈಸ್' ಇಂದೇ ಟ್ರೈ ಮಾಡಿ...Pepper rice

Pepper rice: ಚಳಿಗಾಲ ಸಮೀಪಿಸುತ್ತಿದ್ದಂತೆಯೇ ಅನೇಕರಿಗೆ ಬಿಸಿ ಬಿಸಿ ಆಹಾರ ಸೇವಿಸಬೇಕೆಂಬ ಬಯಕೆ ಹೆಚ್ಚಾಗುತ್ತದೆ. ಹಾಗಾಗಿ ಅನೇಕ ರೀತಿಯ ಆಹಾರವನ್ನು ಟ್ರೈ ಮಾಡಿರುತ್ತಾರೆ. ಅಂದಹಾಗೇ, ನೀವೇನಾದರೂ, ಹಿತವಾದ, ಆರೋಗ್ಯಕರ ಆಹಾರವನ್ನೇದರೂ ಬಯಸುತ್ತಿದ್ದರೆ, ಇಂದೇ ಟ್ರೈ ಮಾಡಿ ಪೆಪ್ಪರ್ ರೈಸ್.

ಬೇಕಾಗುವ ಸಾಮಗ್ರಿಗಳು

* 2-3 ಕಪ್​ ಬೇಯಿಸಿದ ಅನ್ನ
* 1-1½ ಚಮಚ ಕಾಳು ಮೆಣಸು ಪುಡಿ
* ½ ಚಮಚ ಜೀರಿಗೆ
* ½ ಚಮಚ ಸಾಸಿವೆ
* ½ ಚಮಚ ಉದ್ದಿನ ಬೇಳೆ
* 1 ಚಮಚ ಕಡಲೆ ಬೇಳೆ
* 8-10 ಎಲೆಗಳು ಕರಿಬೇವು
* 4-5 ಬೆಳ್ಳುಳ್ಳಿ ಎಸಳು
* 8-10 ಗೋಡಂಬಿ
* 2-3 ಚಮಚ ತುಪ್ಪ ಅಥವಾ ಎಣ್ಣೆ
* ರುಚಿಗೆ ತಕ್ಕಷ್ಟು ಉಪ್ಪು
* ಒಂದು ಚಿಟಿಕೆ ಇಂಗು

ಮಾಡುವ ವಿಧಾನ

ಮೊದಲು ಕಾಳು ಮೆಣಸು, ಜೀರಿಗೆಯನ್ನೂ ಹುರಿದುಕೊಂಡು ನುಣ್ಣಗೆ ಪುಡಿ ಮಾಡಿಕೊಳ್ಳಿ. ನಂತರ ಒಂದು ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ, ಸಾಸಿವೆ, ಉದ್ದಿನ ಬೇಳೆ, ಕಡಲೆ ಬೇಳೆ, ಕರಿಬೇವು, ಇಂಗು, ಬೇಳೆ ಹಾಕಿ ಸ್ವಲ್ಪ ಹುರಿದುಕೊಳ್ಳಿ. ನಂತರ ಅದಕ್ಕೆ ಗೋಡಂಬಿ, ಬೆಳ್ಳುಳ್ಳಿ ಎಸಳು, ಪೆಪ್ಪರ್ ಪುಡಿ ಹಾಕಿ ತ್ವರಿತವಾಗಿ ಮಿಕ್ಸ್​ ಮಾಡಿಕೊಳ್ಳಿ ನಂತರ ಆ ಮಿಶ್ರಣಕ್ಕೆ ರೆಡಿ ಮಾಡಿಟ್ಟುಕೊಂಡಿರುವ ಅನ್ನ, ಉಪ್ಪು ಹಾಕಿ ತ್ವರಿತವಾಗಿ ಮಿಕ್ಸ್ ಮಾಡಿ 2-3 ನಿಮಿಷ ಬಿಸಿ ಮಾಡಿ ಸೇವಿಸಿರಿ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.