ಸಾಂದರ್ಭಿಕ ಚಿತ್ರ 
ಆಹಾರ

ಮೂರೇ ಪದಾರ್ಥ ಬಳಸಿ...ಕಡಿಮೆ ಸಮಯದಲ್ಲಿ ಈ ಓಟ್ಸ್ ಕೇಕ್ ಟ್ರೈ ಮಾಡಿ Recipe

Recipe: ಚಳಿಗಾಲದಲ್ಲಿ ಬಾಯಿ ಚಪ್ಪರಿಸಿ ತಿನ್ನುವುದು ಹಲವಾರು ಜನರಿಗೆ ರೂಢಿಯಾಗಿರುತ್ತದೆ. ಪ್ರತಿನಿತ್ಯ ಏನಾದರೂ ತಿನ್ನಲೇಬೇಕು ಎಂಬ ಹಂಬಲ ಕೆಲವರಲ್ಲಿ ಇದ್ದೇ ಇರುತ್ತದೆ. ಸಂಜೆ ಆಯ್ತು ಏನು ತಿನ್ನಬೇಕು ಅಂತ ಯೋಚನೆ ಮಾಡ್ತಿದ್ದೀರಾ? ಹಾಗಿದ್ದರೆ ಯಾಕೆ ತಡ ಇವಾಗ್ಲೆ ಟ್ರೈ ಮಾಡಿ ಓಟ್ಸ್​ ಕೇಕ್​. ಕಡಿಮೆ ಸಮಯ ಹೆಚ್ಚು ಆರೋಗ್ಯಕರ...
ಬೇಕಾಗುವ ಪದಾರ್ಥಗಳು
1½ ಕಪ್ ಓಟ್ಸ್
1 ಸೇಬು ಹಣ್ಣು
2 ಬಾಳೆಹಣ್ಣು
¼ ಕಪ್ ಅಕ್ರೋಡ್ / ಬಾದಾಮಿ / ಒಣದ್ರಾಕ್ಷಿ
1 ಚಮಚ ಬೇಕಿಂಗ್ ಪೌಡರ್
½ ಚಮಚ ಬೇಕಿಂಗ್ ಸೋಡಾ
½ ಚಮಚ ಏಲಕ್ಕಿ ಪುಡಿ
½ ಚಮಚ ದಾಲ್ಚಿನ್ನಿ ಪುಡಿ
½ ಕಪ್ ಹಾಲು
1 ಮೊಟ್ಟೆ
½ ಚಮಚ ವೆನಿಲಾ ಎಸೆನ್ಸ್
ಮಾಡುವ ವಿಧಾನ
ಮೊದಲು ಮಿಕ್ಸಿ ಜಾರಿಗೆ ಓಟ್ಸ್​ ಹಾಕಿ ತರಿ ತರಿಯಾಗಿ ಪುಡಿಮಾಡಿಕೊಳ್ಳಿ. ನಂತರ ಒಂದು ಬೌಲ್​ಗೆ ಮೆದ್ದಿದ ಬಾಳೆಹಣ್ಣು, ಮಿಕ್ಸಿ ಮಾಡಿದ ಸೇಬು, ಮೊಟ್ಟೆ , ವೆನಿಲಾ ಎಸೆನ್ಸ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ತಯಾರಿಸಿದ ಮಿಶ್ರಣಕ್ಕೆ ಓಟ್ಸ್ ಪೌಡರ್, ಬೇಕಿಂಗ್ ಪೌಡರ್, ಬೇಕಿಂಗ್ ಸೋಡಾ, ಏಲಕ್ಕಿ, ದಾಲ್ಚಿನ್ನಿ ಪುಡಿ ಹಾಕಿ ಮಿಕ್ಸ್​ ಮಾಡಿ. ನಂತರ ಅದಕ್ಕೆ ಸ್ವಲ್ಪ ಹಾಲು, ಒಣದ್ರಾಕ್ಷಿ , ಬಾದಾಮಿ, ಗೋಡಂಬಿ ಸೇರಿಸಿ ಮಿಕ್ಸ್​ ಮಾಡಿಕೊಳ್ಳಿ.
ನಂತರ ಒಂದು ಕೇಕ್ ಟಿನ್‌ಗೆ ಬಟರ್ ಪೇಪರ್ ಹಾಕಿ ಅಥವಾ ಎಣ್ಣೆ ಹಚ್ಚಿರಿ 180°C ಒವನ್‌ನಲ್ಲಿ 30–35 ನಿಮಿಷ ಬೇಯಿಸಿ ತೆಗೆಯಿರಿ. ನಂತರ ಸ್ವಲ್ಪ ತಣ್ಣಗಾದ ನಂತರ ಅದನ್ನು ಸೇವಿಸಿರಿ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.