Boti Gojju (ಸಾಂದರ್ಭಿಕ ಚಿತ್ರ)
Boti Gojju: ಭಾನುವಾರ ಬಂತೆಂದರೆ ಸಾಕು ಮಾಂಸಹಾರಿಗಳು ಬಾಡೂಟ ಸವಿಯಲು ಸಿದ್ಧರಾಗಿರುತ್ತಾರೆ. ಆದಾಗ್ಯೂ, ಬೋಟಿ ಗೊಜ್ಜು ಕರ್ನಾಟಕದ ಸಾಂಪ್ರದಾಯಿಕ ಮತ್ತು ಅತ್ಯಂತ ಜನಪ್ರಿಯ ಮಾಂಸಾಹಾರಿ ಅಡುಗೆಗಳಲ್ಲಿ ಒಂದು. ಇದನ್ನು ರಾಗಿ ಮುದ್ದೆ ಅಥವಾ ಅನ್ನದ ಜೊತೆ ಸವಿಯಲು ತುಂಬಾ ರುಚಿಯಾಗಿರುತ್ತದೆ. ಹಾಗಿದ್ದರೆ, ಇನ್ಯಾಕೆ ತಡ ಈಗ್ಲೇ ಮಾಡಿ ರುಚಿ ನೋಡಿ..
ಬೇಕಾಗುವ ಸಾಮಗ್ರಿಗಳು
* 2 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್
* 1/2 ಕಪ್ ತೆಂಗಿನಕಾಯಿ ತುರಿ
* ಸ್ವಲ್ಪ ಚಕ್ಕೆ, ಲವಂಗ, ಏಲಕ್ಕಿ
* ಸ್ವಲ್ಪ ಕೊತ್ತಂಬರಿ ಸೊಪ್ಪು
ಮಾಡುವ ವಿಧಾನ
ಮೊದಲು ಸ್ವಚ್ಛಗೊಳಿಸಿದ ಬೋಟಿಯನ್ನು ಕುಕ್ಕರ್‌ಗೆ ಹಾಕಿ, ಅದಕ್ಕೆ ಸ್ವಲ್ಪ ಉಪ್ಪು, ಅರಿಶಿನ ಮತ್ತು 2 ಲೋಟ ನೀರು ಸೇರಿಸಿ 6-8 ವಿಷಲ್ ಬರುವವರೆಗೂ ಚೆನ್ನಾಗಿ ಬೇಯಿಸಿಕೊಳ್ಳಿ. ನಂತರ ಒಂದು ಮಿಕ್ಸಿ ಜಾರ್‌ಗೆ ತೆಂಗಿನಕಾಯಿ ತುರಿ, ಚಕ್ಕೆ, ಲವಂಗ, ಏಲಕ್ಕಿ, ಗಸಗಸೆ ಮತ್ತು ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
ಒಂದು ಬಾಣಲೆ ಅಥವಾ ಅಗಲವಾದ ಪಾತ್ರೆಗೆ ಎಣ್ಣೆ ಹಾಕಿ ಕಾಯಿಸಿ ಅದಕ್ಕೆ ಈರುಳ್ಳಿ, ಹಸಿಮೆಣಸಿನಕಾಯಿ ಮತ್ತು ಕರಿಬೇವು ಹಾಕಿ ಕೆಂಪಾಗುವವರೆಗೆ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಹಸಿ ವಾಸನೆ ಹೋಗುವವರೆಗೆ ಬಾಡಿಸಿಕೊಂಡು ಟೊಮೊಟೋ ಹಾಕಿ ಮೆತ್ತಗಾಗುವವರೆಗೂ ಹುರಿದುಕೊಳ್ಳಿ.
ಈ ಮಿಶ್ರಣಕ್ಕೆ ಖಾರದ ಪುಡಿ, ಧನಿಯಾ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಮಿಕ್ಸ್ ಮಾಡಿ. ಈಗ ಬೇಯಿಸಿಟ್ಟ ಬೋಟಿಯನ್ನು ಮಸಾಲೆಗೆ ಸೇರಿಸಿ. ನಂತರ ರುಬ್ಬಿಟ್ಟುಕೊಂಡ ತೆಂಗಿನಕಾಯಿ ಮಸಾಲೆಯನ್ನು ಹಾಕಿ ಚೆನ್ನಾಗಿ ಬೆರೆಸಿಕೊಂಡು ನಿಮ್ಮ ಹದಕ್ಕೆ ತಕ್ಕಂತೆ ನೀರು ಬೆರೆಸಿಕೊಳ್ಳಿ.
ಮಸಾಲೆ ಮತ್ತು ಬೋಟಿ ಒಂದಕ್ಕೊಂದು ಚೆನ್ನಾಗಿ ಬೆರೆಯಲು 10-15 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಕುದಿಸಿಕೊಂಡು ನಂತರ ಚಿಕ್ಕದಾಗಿ ಕತ್ತರಿಸಿದ ಕೊತ್ತುಂಬರಿ ಸೊಪ್ಪನ್ನು ಉದುರಿಸಿದರೆ ರುಚಿಯಾದ ಬೋಟಿ ಗೊಜ್ಜು ಸವಿಯಲು ಸಿದ್ಧ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.