Mutton pickles (ಸಾಂದರ್ಭಿಕ ಚಿತ್ರ)
Mutton pickles: ನಾಲಿಗೆಯಲ್ಲಿ ನೀರೂರಿಸುವ ಖಾರ ಹಾಗೂ ಮಸಾಲೆಯುಕ್ತ ರುಚಿಗೆ ಹೆಸರಾದ ಆಂಧ್ರಾ ಶೈಲಿಯ ನಾನ್-ವೆಜ್ ಉಪ್ಪಿನಕಾಯಿ ಈಗ ನಿಮ್ಮ ಮನೆಯಲ್ಲೇ ಲಭ್ಯ! ಮಟನ್ ಬಳಸಿ ತಯಾರಿಸಬಹುದಾದ ಈ ಸ್ಪೈಸಿ ರೆಸಿಪಿ ಅನ್ನದ ಜೊತೆ ಸವಿಯಲು ಅತ್ಯದ್ಭುತ. ಕೇವಲ ಕೆಲವು ಮಸಾಲೆ ಪದಾರ್ಥಗಳನ್ನು ಬಳಸಿ ತಿಂಗಳುಗಟ್ಟಲೆ ಕೆಡದಂತೆ ಇದನ್ನು ಹೇಗೆ ತಯಾರಿಸಬಹುದು ಎಂಬ ಸುಲಭ ವಿಧಾನ ಇಲ್ಲಿದೆ ನೋಡಿ.
ಬೇಕಾಗುವ ಸಾಮಗ್ರಿಗಳು
* 2-3 ಟೇಬಲ್ ಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್
* 4-6 ಟೇಬಲ್ ಸ್ಪೂನ್ ಕೆಂಪು ಮೆಣಸಿನ ಪುಡಿ
* 2 ಟೇಬಲ್ ಸ್ಪೂನ್ ಧನಿಯಾ ಪುಡಿ
* 1 ಟೀ ಸ್ಪೂನ್ ಜೀರಿಗೆ ಪುಡಿ
* 1 ಟೀ ಸ್ಪೂನ್ ಗರಂ ಮಸಾಲಾ ಪುಡಿ
* 2-3 ಟೇಬಲ್ ಸ್ಪೂನ್ ನಿಂಬೆ ರಸ
ಮಾಡುವ ವಿಧಾನ
ಮಟನ್ ತುಂಡುಗಳನ್ನು ಚೆನ್ನಾಗಿ ತೊಳೆದು, ಅದಕ್ಕೆ ಉಪ್ಪು, ಅರಿಶಿನ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಸ್ವಲ್ಪ ವಿನೆಗರ್ ಬೆರೆಸಿ 30-60 ನಿಮಿಷ ನೆನಸಿಡಿ. ನಂತರ ಕುಕ್ಕರ್‌ನಲ್ಲಿ ಮಟನ್ ಹಾಕಿ, ಸ್ವಲ್ಪ ನೀರು ಸೇರಿಸಿ 4-5 ವಿಸಲ್ ಒಡೆಸಿ ಮೃದುವಾಗಿ ಬೇಯಿಸಿಕೊಳ್ಳಿ. ನೀರು ಒಣಗಿಸಿ ಮಟನ್ ತುಂಡುಗಳನ್ನು ತೆಗೆದಿಡಿ.
ಒಂದು ಕಡಾಯಿಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ, ಮಟನ್ ತುಂಡುಗಳನ್ನು ಗೋಲ್ಡನ್ ಬ್ರೌನ್ ಆಗುವವರೆಗೆ ಡೀಪ್ ಫ್ರೈ ಮಾಡಿ ತೆಗೆದಿಟ್ಟುಕೊಳ್ಳಿ. ಅದೇ ಎಣ್ಣೆಗೆ ಸಾಸಿವೆ, ಮೆಂತ್ಯ, ಹಿಂಗ್, ಕರಿಬೇವು, ಒಣಗಿದ ಕೆಂಪು ಮೆಣಸಿನಕಾಯಿ ಹಾಕಿ ಹುರಿದುಕೊಳ್ಳಿ.
ನಂತರ ಕೆಂಪು ಮೆಣಸಿನ ಪುಡಿ, ಧನಿಯಾ, ಜೀರಿಗೆ, ಗರಂ ಮಸಾಲಾ ಸೇರಿಸಿ ಕಡಿಮೆ ಜ್ವಾಲೆಯಲ್ಲಿ 1-2 ನಿಮಿಷ ಹುರಿಯಿರಿ. ಈಗ ಫ್ರೈ ಮಾಡಿದ ಮಟನ್ ತುಂಡುಗಳನ್ನು ಸೇರಿಸಿ ಚೆನ್ನಾಗಿ ಕಲಸಿ. ನಿಂಬೆ ರಸ ಸೇರಿಸಿ ಸ್ವಲ್ಪ ಸಮಯದವರೆಗೆ ಬಿಟ್ಟು ತಣ್ಣಗಾಗಲು ಬಿಡಿ. ನಂತರ ಸ್ವಚ್ಛ ಗಾಜಿನ ಜಾರ್ಗೆ ತುಂಬಿ 2-3 ದಿನಗಳ ಕಾಲ ಮುಚ್ಚಿಡಿ. 1 ವಾರದ ನಂತರ ಊಟದೊಂದಿಗೆ ಸವಿಯಿರಿ. ಫ್ರಿಜ್‌ನಲ್ಲಿ ಇಟ್ಟರೆ 6 ತಿಂಗಳುವರೆಗೆ ಉಳಿಯುತ್ತದೆ. (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.