Banana Chocolate ಸಾಂದರ್ಭಿಕ ಚಿತ್ರ
Banana Chocolate: ಚಾಕಲೇಟ್ಗಳೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ರುಚಿಕರ ಚಾಕಲೇಟ್ಗಳನ್ನು ಚಿಕ್ಕ ಮಕ್ಕಳಿನಿಂದ ಹಿಡಿದು, ವಯಸ್ಸಾದವರ ತನಕವು ಈ ಸಿಹಿತಿಂಡಿಯನ್ನು ತಿನ್ನುತ್ತಾರೆ. ಕೆಲವರು ಖುಷಿ ಸಂದರ್ಭದಲ್ಲಿ ತಿಂದರೆ, ಇನ್ನು ಕೆಲವರು ಪ್ರತಿನಿತ್ಯವು ಸೇವಿಸುತ್ತಾರೆ. ಚಾಕಲೇಟ್ ತಿನ್ನುವುದರಿಂದ ಆರೋಗ್ಯದಲ್ಲಿ ಅನೇಕ ರೀತಿಯ ಪ್ರಯೋಜನಗಳನ್ನು ಪಡೆಯಬಹುದು. ಹಾಗಾಗಿ ಚಾಕಲೇಟ್ ಪ್ರಿಯರಿಗಾಗಿ ನಾವಿಂದು ಬಾಳೆಹಣ್ಣಿನ ಚಾಕಲೇಟ್ ಮಾಡುವುದನ್ನು ಹೇಳಿಕೊಡಲಿದ್ದೇವೆ.
ಬೇಕಾಗುವ ಸಾಮಾಗ್ರಿಗಳು
ಮಾಡುವ ವಿಧಾನ
ಮೊದಲು ಒ0ದು ಬೌಲ್ಗೆ ಬಾಳೆಹಣ್ಣು ಹಾಕಿ ಚೆನ್ನಾಗಿ ಮೆದುಗೊಳಿಸಿ. ನಂತರ ಒಂದು ಪಾತ್ರೆಗೆ ನೀರನ್ನು ಹಾಕಿ ಚೆನ್ನಾಗಿ ಕುದಿಸಿಕೊಳ್ಳಿ. ನಂತರ ಆ ಪಾತ್ರೆ ಒಳಗೆ ಚಾಕಲೇಟ್ಗಳನ್ನು ಹಾಕಿ ಕರಗಿಸಿಕೊಳ್ಳಿ. ಈಗ ಮೆದುಗೊಳಿಸಿಕೊಂಡಿರುವ ಬಾಳೆಹಣ್ಣಿಗೆ ಚಾಕಲೇಟ್ ಮಿಶ್ರಣವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಒಂದು ಟ್ರೇಗೆ ಬೇಕಿಂಗ್ ಪೇಪರ್ ಹಾಸಿ ಅದರ ಮೇಲೆ ಮಿಶ್ರಣವನ್ನು ಸುರಿಯಿರಿ. ಇದಾದ ಬಳಿಕ 2 ಗಂಟೆಗಳ ನಂತರ ಈ ಮಿಶ್ರಣವನ್ನು ಫ್ರಿಜ್ನಲ್ಲಿಡಿ. ನಂತರ, ಚಿಕ್ಕದಾಗಿ ಕತ್ತರಿಸಿ ಸವಿಯಿರಿ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.