- ದೇಹದ ತೂಕ ಇಳಿಸಿಕೊಳ್ಳಲು ಹರಸಾಹಸ ಪಡುವವರು ಒಂದೆಡೆ
- ತೂಕ ಹೆಚ್ಚಿಸಿಕೊಳ್ಳಲು ಪರದಾಡುವವರ ಸಂಖ್ಯೆ ಮತ್ತೊಂದೆಡೆ
- ದೇಹದ ತೂಕ ಹೆಚ್ಚಳಕ್ಕೆ ಈ 5 ಆಹಾರಗಳು ಉತ್ತಮ
Weight Gain: ದೇಹದ ತೂಕ ಇಳಿಸಿಕೊಳ್ಳಲು ಹರಸಾಹಸ ಪಡುವವರು ಒಂದೆಡೆಯಾದರೆ, ಹೆಚ್ಚಿಸಿಕೊಳ್ಳಲು ಪರದಾಡುವವರ ಸಂಖ್ಯೆ ಇನ್ನೊಂದೆಡೆ. ಒಟ್ಟಿನಲ್ಲಿ, ವೈಟ್ ಸರಿಯಾಗಿ ಕಾಪಾಡಿಕೊಳ್ಳುವುದು ಅಥವಾ ಸಮತೋಲನದಲ್ಲಿಡುವುದು ನಿಜಕ್ಕೂ ಸವಾಲೇ ಸರಿ.
ಪ್ರಸ್ತುತ, ಅಧಿಕ ತೂಕ ಮತ್ತು ಬೊಜ್ಜು ಜನರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಹೀಗಾಗಿ, ಅನೇಕರು ದಿನ ಬೆಳಗ್ಗೆ ಜಾಗಿಂಗ್, ವಾಕಿಂಗ್ ಮತ್ತು ವ್ಯಾಯಾಮ ಮಾಡುವ ಮೂಲಕ ತೂಕು ಇಳಿಸಿಕೊಳ್ಳುತ್ತಾರೆ. ಆದರೆ, ಇನ್ನೂ ಕೆಲವರು ತೂಕ ಹೆಚ್ಚಿಸಿಕೊಳ್ಳಲು ಏನು ಮಾಡೋದು ಎಂದು ತಲೆಕಡಿಸಿಕೊಂಡಿರುತ್ತಾರೆ. ಯಾಕೆಂದರೆ, ಕೆಲವರಿಗಂತು ಏನೇ ತಿಂದರೂ ದಪ್ಪ ಆಗೋದಿಲ್ಲ. ತೂಕ ಜಾಸ್ತಿಯಾಗಲ್ಲ. ತುಂಬಾ ತೆಳ್ಳಗಿರುವವರಿಗೆ ಆರೋಗ್ಯವಾಗಿರಲು ಆರೋಗ್ಯಕರ ಪ್ರಮಾಣದ ಕೊಬ್ಬು ಮತ್ತು ಸ್ನಾಯುಗಳು ಅಗತ್ಯ.
ಹೀಗಿರುವಾಗ, ನಮ್ಮ ದೇಹಕ್ಕೆ ಪೂರಕವಾದ ಕೊಬ್ಬು ಮತ್ತು ಪೌಷ್ಠಿಕತೆ ಒದಗಿಸುವ ಆಹಾರಗಳನ್ನು ಸೇವಿಸುವುದು ಉತ್ತಮ. ಹಾಗಿದ್ದರೆ, ಏನ್ನನ್ನು ಹಾಗೂ ಯಾವುದನ್ನು ತಿನ್ನುವುದು ಒಳಿತು? ಎಂಬುದರ ಮಾಹಿತಿ ಈ ಕೆಳಕಂಡಂತಿದೆ ಗಮನಿಸಿ.
ನೀವು ತೂಕ ಹೆಚ್ಚಿಸಲು ಬಯಸಿದರೆ ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬೇಕಾದ ಮೊದಲ ಆಹಾರಗಳಲ್ಲಿ ಅನ್ನ ಕೂಡ ಒಂದು. ಒಂದು ಕಪ್ ಬೇಯಿಸಿದ ಅನ್ನ (ಬಿಳಿ ಅಕ್ಕಿ) 204 ಕ್ಯಾಲೋರಿ, 44 ಗ್ರಾಂ ಕಾರ್ಬೋಹೈಡ್ರೇಟ್ ಮತ್ತು ಬಹಳ ಕಡಿಮೆ ಕೊಬ್ಬನ್ನು ಹೊಂದಿರುತ್ತದೆ.
2018ರ ಅಧ್ಯಯನದ ಪ್ರಕಾರ, ತೂಕ ಎತ್ತುವವರು ಹಸುವಿನ ಹಾಲು ಕುಡಿಯುವುದು ಸ್ನಾಯುಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ ಮತ್ತು ಮೂಳೆಗಳನ್ನು ಇನ್ನಷ್ಟು ಬಲಪಡಿಸುತ್ತದೆ. ಇದರೊಟ್ಟಿಗೆ, ದೇಹದ ತೂಕ ಹೆಚ್ಚಳಕ್ಕೂ ಇದು ಕಾರಣವಾಗುತ್ತದೆ.
ಆವಕಾಡೊ ಆರೋಗ್ಯಕರ ಕೊಬ್ಬಿನಿಂದ ಹೇರಳವಾಗಿದೆ. ಒಂದು ದೊಡ್ಡ ಹಣ್ಣಿನಲ್ಲಿ 365 ಕ್ಯಾಲೋರಿಗಳಿವೆ. ಇದು 30 ಗ್ರಾಂ ಕೊಬ್ಬು ಮತ್ತು 17 ಗ್ರಾಂ ಫೈಬರ್ ಅನ್ನು ಹೊಂದಿರುತ್ತದೆ. ತೂಕ ಹೆಚ್ಚಿಸಲು ಬಯಸುವವರಿಗೆ ಪ್ರತಿದಿನ ತಮ್ಮ ಆಹಾರ ಕ್ರಮದಲ್ಲಿ ಈ ಹಣ್ಣನ್ನು ಸೇರಿಸಿಕೊಂಡರೆ ಉತ್ತಮ ಫಲಿತಾಂಶ ಖಚಿತ.
ತೂಕ ಹೆಚ್ಚಿಸುವಲ್ಲಿ ಉಪಾಹಾರವು ದೊಡ್ಡ ಪಾತ್ರವನ್ನು ವಹಿಸುತ್ತದೆ. ಬೆಳಗ್ಗೆ ಸಮಯದಲ್ಲಿ ಇವುಗಳನ್ನು ತಿಂದರೆ ಹೆಚ್ಚು ಪ್ರಯೋಜನಕಾರಿ. ಒಂದು ಕಪ್ ಬೇಯಿಸಿದ ಓಟ್ ಮೀಲ್ 150 ಕ್ಯಾಲೋರಿಗಳನ್ನು ಹೊಂದಿರುತ್ತದೆ. ಅದಕ್ಕೆ ಹಾಲು ಸೇರಿಸುವುದು ಇನ್ನೂ ಉತ್ತಮ.
ಮೊಟ್ಟೆಗಳು ಉತ್ತಮ ಪ್ರೋಟಿನ್ಯುಕ್ತ ಆಹಾರ. ಪೋಷಕಾಂಶಗಳಿಂದ ಸಮೃದ್ಧವಾಗಿರುವ ಸಮತೋಲಿತ ಆಹಾರವನ್ನು ಸೇವಿಸುವುದರಿಂದ ದೇಹಕ್ಕೆ ಅಗತ್ಯವಾದ ಜೀವಸತ್ವಗಳು, ಖನಿಜಗಳು ಮತ್ತು ಶಕ್ತಿ ಲಭಿಸುತ್ತದೆ. ಇದರಿಂದ, ಸ್ನಾಯುಗಳ ಬೆಳವಣಿಗೆಗೆ ಸಹಕಾರಿ.
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ, (ಎಜೆನ್ಸೀಸ್).