ಸಾಂದರ್ಭಿಕ ಚಿತ್ರ 
ಆಹಾರ

ಬೆಳಗಿನ ಉಪಹಾರದಲ್ಲಿ ಈ ತಪ್ಪು ಮಾಡಿದರೆ ಬೊಜ್ಜು ಬರೋದು ಗ್ಯಾರಂಟಿ! Breakfast mistakes

Breakfast mistakes: ಬೆಳಗಿನ ಉಪಹಾರವನ್ನು ದಿನದ ಪ್ರಮುಖ ಊಟವೆಂದು ಪರಿಗಣಿಸಲಾಗುತ್ತದೆ. ಇದು ಹಸಿವನ್ನು ನೀಗಿಸುವುದಲ್ಲದೇ, ನೀವು ದಿನವಿಡೀ ಎಷ್ಟು ಸಕ್ರಿಯರಾಗಿರುತ್ತೀರಿ ಎಂಬುದನ್ನು ನಿರ್ಧರಿಸುತ್ತದೆ. ಆದಾಗ್ಯೂ, ಸರಿಯಾದ ಆಹಾರ ಕ್ರಮವು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಆದರೆ, ನಮ್ಮ ತಪ್ಪು ಅಭ್ಯಾಸಗಳು ಕ್ರಮೇಣ ತೂಕವನ್ನು ಹೆಚ್ಚಿಸುತ್ತವೆ. ಜೊತೆಗೆ ತೂಕದಲ್ಲಿ ಹೆಚ್ಚಾಗುವ ಸಾಧ್ಯತೆ ಹೆಚ್ಚಿರುತ್ತದೆ.
ಇತ್ತೀಚಿನ ದಿನಗಳಲ್ಲಿ, ಹೆಚ್ಚಿನ ಜನರು ಉಪಾಹಾರವನ್ನು ಲಘುವಾಗಿ ಮಾಡುತ್ತಾರೆ. ಕೆಲವರು ದಿನಕ್ಕೆ 2 ಸಮಯ ಊಟವನ್ನು ಮಾಡುತ್ತಾರೆ. ಇನ್ನೂ ಕೆಲವರು ಚಹಾ ಅಥವಾ ಬಿಸ್ಕತ್ತುಗಳೊಂದಿಗೆ ದಿನವನ್ನು ಪ್ರಾರಂಭಿಸುತ್ತಾರೆ. ಈ ಸಣ್ಣ ತಪ್ಪುಗಳು ದೇಹದಲ್ಲಿ ಗ್ಯಾಸ್​, ಆಯಾಸ ಮತ್ತು ತೂಕ ಹೆಚ್ಚಾಗುವಂತೆ ಮಾಡುತ್ತದೆ. ಹಾಗಿದ್ದರೆ. ಆ ಆಹಾರಗಳು ಯಾವುದು ಎಂದು ನೋಡೋಣ ಬನ್ನಿ..

1. ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವುದು

ಹೆಚ್ಚಿನ ಜನರು ಬೆಳಿಗ್ಗೆ ಎದ್ದ ತಕ್ಷಣ ಬೇರೆ ಚಹಾ ಕುಡಿದು ಕೆಲಸವನ್ನು ಪ್ರಾರಂಭಿಸುತ್ತಾರೆ. ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವುದಿಂದ ದೇಹವು ಕೆಲವೊಂದು ಸಮಸ್ಯೆಗಳನ್ನು ಎದುರಿಸಲು ಪ್ರಾರಂಭಿಸುತ್ತದೆ. ಅದರಲ್ಲಿ ಗ್ಯಾಸ್ಟ್ರಿಕ್​, ಆಮ್ಲೀಯತೆ, ಕಾರ್ಟಿಸೋಲ್ ಮತ್ತು ನಿರ್ಜಲೀಕರಣ ಸಮಸ್ಯೆಯನ್ನು ಎದರಿಸಬೇಕಾಗುತ್ತದೆ. ಜೊತೆಗೆ ನಿಮ್ಮ ಹಸಿವನ್ನು ಕಡಿಮೆ ಮಾಡಿ ಉಪಹಾರ ಸೇವಿಸಲು ಕಷ್ಟವಾಗಬಹುದು.

2. ಪ್ರತಿದಿನ ಪರೋಟ/ರೊಟ್ಟಿ ತಿನ್ನುವುದು

ಅತಿ ಹೆಚ್ಚಿನ ಜನರ ಮನೆಯಲ್ಲಿ ಬೆಳಗಿನ ತಿಂಡಿಗೆ ಪರೋಟಾ ಮತ್ತು ರೊಟ್ಟಿಯನ್ನು ಮಾಡುತ್ತಾರೆ. ಈ ಆಹಾರದಲ್ಲಿ ಕಾರ್ಬೋಹೈಡ್ರೇಟ್​ಗಳು ಹೆಚ್ಚಾಗಿರುತ್ತದೆ. ಹಾಗಾಗಿ ಇವುಗಳ ನಿಯಮಿತ ಸೇವನೆಯು ಹೊಟಗಟೆ ತುಂಬಿದ ರೀತಿಯಲ್ಲಿ ಮಾಡುತ್ತದೆ. ಇದರಿಂದ ದೇಹವು ಊಟವನ್ನು ಬೇಕೆಂದು ಬಯಸುವುದಿಲ್ಲ. ಇದರಿಂದ ಇನ್ಸುಲಿನ್‌ನಲ್ಲಿ ಹೆಚ್ಚಳಕ್ಕೂ ಕಾರಣವಾಗಬಹುದು.

3. ತ್ವರಿತ ಓಟ್ಸ್ ತಿನ್ನುವುದು

ಅತಿಯಾದ ಓಟ್ಸ್ ಸೇವನೆಯು ಆರೋಗ್ಯಕ್ಕೆ ಹಾನಿಕಾರಕ. ಇದರಲ್ಲಿ ಫೈಬರ್ ಕಡಿಮೆ ಮತ್ತು ಹೆಚ್ಚು ಸಂಸ್ಕರಿಸಲ್ಪಟ್ಟಿರುತ್ತವೆ. ಹಾಗಾಗಿ ಇವುಗಳ ಸೇವನೆಯು ರಕ್ತದಲ್ಲಿ ಸಕ್ಕರೆಯನ್ನು ಹೆಚ್ಚಿಸಬಹುದು. ಇದರಿಂದ ತೂಕ ಇಳಿಸಿಕೊಳ್ಳಲು ಕಷ್ಟಕರವಾಗಬಹುದು.

4. ಚಹಾ, ಬಿಸ್ಕತ್ತುಗಳು ಮತ್ತು ಜ್ಯೂಸ್

ಬೆಳಗಿನ ಉಪಾಹಾರಕ್ಕೆ ಚಹಾ, ಬಿಸ್ಕತ್ತು ಅಥವಾ ಹಣ್ಣಿನ ರಸ ಸೇವಿಸುವುದರಿಂದ ಸಕ್ಕರೆ ಮತ್ತು ಟ್ರಾನ್ಸ್ ಕೊಬ್ಬಿನ ಮಟ್ಟ ದೇಹದಲ್ಲಿ ಹೆಚ್ಚಾಗಲಿದೆ. ಇದು ಇನ್ಸುಲಿನ್​ ಮಟ್ಟವನ್ನು ಹೆಚ್ಚಿಸಿ, ಬೊಜ್ಜು ಬರುವಂತೆ ಮಾಡುತ್ತದೆ.

5. ಉಪಾಹಾರವನ್ನು ಬಿಡುವುದು

ಕೆಲವೊಂದು ಜನರು ದೇಹವು ಫಿಟ್​ ಆಗಿರಬೇಕೆಂದು ಬೆಳಗಿನ ಉಪಹಾರವನ್ನು ಸೇವಿಸುವುದನ್ನೇ ಬಿಡುತ್ತಾರೆ. ಇದು ನಿಮ್ಮ ಚಯಾಪಚಯ ಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಜೊತೆಗೆ ಗ್ಯಾಸ್ಟ್ರಿಕ್​, ಹೊಟ್ಟೆನೋವು ಈ ರೀತಿಯ ಸಮಸ್ಯೆಯನ್ನು ತಂದೊಡ್ಡುತ್ತದೆ. ಇದು ಜಂಕ್ ಫುಡ್‌ಗಾಗಿ ನಿಮ್ಮ ಹಂಬಲವನ್ನು ಹೆಚ್ಚಿಸುತ್ತದೆ ಮತ್ತು ಮಧ್ಯಾಹ್ನ ಅತಿಯಾಗಿ ತಿನ್ನುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.