MoongDal Khichdi (ಸಾಂದರ್ಭಿಕ ಚಿತ್ರ)
MoongDal Khichdi: ಇತ್ತೀಚಿನ ದಿನಗಳಲ್ಲಿ ಬಿಸಿಲು ಜಾಸ್ತಿಯಾದಂತೆ ಆರೋಗ್ಯ ಸಮಸ್ಯೆಗಳು ಹದಗೆಡುತ್ತಿವೆ. ಯಾವುದೇ ಆಹಾರಗಳನ್ನು ಸೇವಿಸುತ್ತಿದ್ದರೂ ಜೀರ್ಣಕ್ರಿಯೆಯಾಗದೇ ದೇಹವು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಆದಾಗ್ಯೂ, ಬೇಸಿಗೆಯಲ್ಲಿ ದೇಹವನ್ನು ತಂಪಾಗಿರಿಸಲು ಹೆಸರುಬೇಳೆ ಖಿಚಡಿ ಅತ್ಯುತ್ತಮ ಆಯ್ಕೆಯಾಗಿದೆ. ಇದು ಸುಲಭವಾಗಿ ಜೀರ್ಣವಾಗುತ್ತದೆ, ಹೊಟ್ಟೆಗೆ ತಂಪು ನೀಡುತ್ತದೆ. ಹಾಗಿದ್ದರೆ, ಇನ್ಯಾಕೆ ತಡ ಈಗ್ಲೇ ರೆಡಿ ಮಾಡಿ ಹೆಸರುಬೇಳೆ ಖಿಚಡಿ.
ಬೇಕಾಗುವ ಸಾಮಾಗ್ರಿಗಳು
ಮಾಡುವ ವಿಧಾನ
ಮೊದಲು ಒಂದು ಪಾತ್ರೆಯಲ್ಲಿ ಹೆಸರುಬೇಳೆ ಮತ್ತು ಅಕ್ಕಿಯನ್ನು 2-3 ಬಾರಿ ಚೆನ್ನಾಗಿ ತೊಳೆದು 15 ನಿಮಿಷ ನೆನಸಿಡಿ. ನಂತರ ಕುಕರ್ ತೆಗೆದುಕೊಳ್ಳಿ ಅದಕ್ಕೆ ಬೇಳೆ, ಅಕ್ಕಿ, ಅರಿಶಿಣ, ಉಪ್ಪು, ನೀರು ಸೇರಿಸಿ 3-4 ವಿಶಲ್ ಬರೆಸಿಕೊಳ್ಳಿ. ನಂತರ ತರಕಾರಿಗಳನ್ನು ಸೇರಿಸಿಕೊಂಡು ಮಧ್ಯಮ ಜ್ವಾಲೆಯಲ್ಲಿ 20-25 ನಿಮಿಷ ಬೇಯಿಸಿಕೊಳ್ಳಿ. ಆಗಾಗ ನೀರು ಸೇರಿಸಿ ಮಿಕ್ಸ್ ಮಾಡಿಕೊಳ್ಳಿ.
ಇದಾದ ಬಳಿಕ ಒಂದು ಸಣ್ಣ ಪಾತ್ರೆಯಲ್ಲಿ ಎಣ್ಣೆ, ಜೀರಿಗೆ, ಹಿಂಗು ಹಾಕಿ ಒಗ್ಗರಣೆ ಮಾಡಿ ಖಿಚಡಿಗೆ ಸೇರಿಸಿ. ತಯಾರಿಯಾದ ಖಿಚಡಿಯನ್ನು ಸ್ವಲ್ಪ ತಣ್ಣಗಾಗಲು ಬಿಟ್ಟು ಮೊಸರು ಜೊತೆ ಬಿಸಿಯಾಗಿ ಸೇರಿಸಿ ತಿನ್ನಿ. ಇದು ದೇಹಕ್ಕೆ ತಕ್ಷಣ ತಂಪು ನೀಡುತ್ತದೆ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.