Severe Gut Health Risks in rainy season 
ಆಹಾರ

ಮಳೆ ವೈಬ್​ಗೆಂದು ಬಿಸಿಯಾಗಿ ಟೀ, ಪಕೋಡ, ಬಜ್ಜಿ ತಿನ್ನೋ ಅಭ್ಯಾಸ ಇದ್ಯಾ?; ಜೀರ್ಣಾಂಗ ವ್ಯವಸ್ಥೆಗೆ ಸಮಸ್ಯೆಯಾಗಬಹುದು ನೋಡಿ... Gut Health

ಪ್ರಮುಖ ಮುಖ್ಯಾಂಶಗಳು

  • ಕಳಪೆ ನಿದ್ರೆ, ಒತ್ತಡ, ಅನಾರೋಗ್ಯಕರ ಆಹಾರ ಪದ್ಧತಿ ಮತ್ತು ಆಂಟಿಬಯೋಟಿಕ್‌ಗಳ ಜೀರ್ಣಾಂಗಕ್ಕೆ ಸಮಸ್ಯೆ.
  • ಮಳೆಗಾಲದಲ್ಲಿ ಕರಿದ ಯಾವುದೇ ಆಹಾರ ತಿನ್ನಲೇ ಬೇಡಿ.
  • ಮನೆಯಲ್ಲಿ ತಯಾರಿಸಿದ ಊಟವೂ ಸೋಂಕಿನ ಮೂಲವಾಗಬಹುದು. ಅಡುಗೆ ಮನೆ ಸ್ವಚ್ಛವಾಗಿರಲಿ.

Severe Gut Health Risks in rainy season:

ಸಂಜೆ ಧೋ ಎಂದು ಸುರಿಯುತ್ತಿರುವ ಮಳೆ ಅದರ ಜೊತೆಗೆ ಪಕೋಡ, ಬಜ್ಜಿ, ಬೋಂಡ ಬೇಕೆಂದು ಅನಿಸೋದು ಸಹಜ. ನಿಂತ ಬೀದಿಗಳಲ್ಲಿ ಎಲ್ಲಾದರೂ ಕಂಡರೆ ಕೊಂಡುಕೊಳ್ಳದೇ ಬಿಡಲ್ಲ. ಇನ್ನು ಮನೆಗಳಲ್ಲಿ ಬೋಂಡಾಕ್ಕಾಗಿ ತಯಾರಿ ನಡೆಯುತ್ತಿರುತ್ತೆ. ಆದರೆ ಇವು ಕರುಳಿನ ಆರೋಗ್ಯವನ್ನು ಹಾಳು ಮಾಡುತ್ತದೆ ಎನ್ನುತ್ತಾರೆ ವೈದ್ಯರು. ಮಳೆಗೆ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಕೋಟ್‌ ಮತ್ತು ಕೊಡೆ ಬಳಕೆ ಮಾಡುತ್ತೇವೆ. ಆದರೆ, ಜೀರ್ಣಾಂಗಗಳ ಆರೋಗ್ಯದ ಬಗ್ಗೆ ಯೋಚಿಸುವುದು ಬಹಳ ಕಡಿಮೆ. ಫುಡ್​ಪಾಯ್ಸಿನ್​, ಅಜೀರ್ಣ, ಉಬ್ಬಸದಂತಹ ಗಂಭೀರ ಕಾಯಿಲೆಗಳಿಂದ ಬಳಲಬೇಕಾಗಬಹುದು ಎನ್ನುತ್ತಾರೆ ತಜ್ಞರು.

ಕರುಳಿಗೆ ಸಂಬಂಧಿಸಿದಂತೆ ಚಿಕಿತ್ಸೆ ನೀಡುವ ವೈದ್ಯರ ಪ್ರಕಾರ, ಮಳೆಗಾಲ ಥಂಡಿ ವಾತಾವರಣದಿಂದ ಕೂಡಿರುವ ಕಾರಣ, ಮಳೆಗಾಲವು ಜೀರ್ಣಾಂಗ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ. ನಮಗೆ ಸೋಂಕುಗಳು, ಅಸಿಡಿಟಿ, ಹೊಟ್ಟೆ ಉಬ್ಬರ ಮತ್ತು ಅಜೀರ್ಣ ಉಂಟಾಗುತ್ತದೆ” ಎಂದು ಅವರು ವಿವರಿಸಿದ್ದಾರೆ.

ಜೀರ್ಣಾಂಗದ ಮೇಲೆ ಪರಿಣಾಮ ಬೀರೋದ್ಯಾಕೆ?

ಮಾನ್ಸೂನ್​ನಲ್ಲಿ ಥಂಡಿ ವಾತಾವರಣದಿಂದ ಕೂಡಿರುವ ಕಾರಣ ಇದು ಹೊಟ್ಟೆ ಸೋಂಕಿಗೆ ಕಾರಣವಾಗತ್ತೆ. ಮಳೆಗಾಲದಲ್ಲಿ ಆರ್ದ್ರತೆಯು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಇದರಿಂದ ಅನೇಕರಿಗೆ ಹೊಟ್ಟೆ ಭಾರವಾದಂತೆ, ಗ್ಯಾಸ್ ತುಂಬಿಕೊಂಡಂತೆ ಭಾಸವಾಗತ್ತೆ. ಹೀಗಾಗಿ ಮಳೆ ಎಂದಕೂಡಲೇ ಕಣ್ಣಿಗೆ ಕಾಣುವ ಟೀ, ಬೋಂಡಾ, ಪಕೋಡ ಹಾಗೂ ಮಸಾಲೆಯುಕ್ತ ಆಹಾರಗಳನ್ನು ಸೇವಿಸುವುದು ಜೀರ್ಣಾಂಗ ವ್ಯವಸ್ಥೆಯ ಮೇಲೆ ಹೆಚ್ಚಿನ ಒತ್ತಡವನ್ನುಂಟುಮಾಡುತ್ತದೆ.
ಕಳಪೆ ನಿದ್ರೆ, ಒತ್ತಡ, ಅನಾರೋಗ್ಯಕರ ಆಹಾರ ಪದ್ಧತಿ ಮತ್ತು ಆಂಟಿಬಯೋಟಿಕ್‌ಗಳ ಅನಗತ್ಯ ಬಳಕೆ ಈ ಸೂಕ್ಷ್ಮ ಸಮತೋಲನವನ್ನು ಭಂಗಗೊಳಿಸಿ, ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ ಮತ್ತು ಜೀರ್ಣಾಂಗ ವ್ಯವಸ್ಥೆಯ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ.

ಎಲ್ಲದಕ್ಕೂ ಮಾತ್ರೆ ತೆಗೆದುಕೊಳ್ಳಬೇಡಿ

ಯಾವುದೇ ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೆ ಸಾಕು, ಮಾತ್ರೆಗಳನ್ನು ತೆಗೆದುಕೊಳ್ಳುವ ಅಭ್ಯಾಸ ಮಾಡಿಕೊಂಡಿಬಿಡುತ್ತೇವೆ,. ಆದರೆ, ಇದು ತಮ್ಮ. ಕರುಳಿನಲ್ಲಿರುವ ಒಳ್ಳೆ ಬ್ಯಾಕ್ಟೀರಿಯವನ್ನು ಈ ಮಾತ್ರೆಗಳು ಕೊಲ್ಲುತ್ತವೆ. ನಮ್ಮ ಕರುಳಿನ ಬ್ಯಾಕ್ಟೀರಿಯಾ ದುರ್ಬಲಗೊಳ್ಳುತ್ತದೆ. ಇದು ನಮ್ಮನ್ನು ಹೆಚ್ಚು ಕಾಲ ಅಶಕ್ತರನ್ನಾಗಿಸಬಹುದು ಎನ್ನುತ್ತಾರೆ ವೈದ್ಯರು.

ಅಡುಗೆ ಮನೆ ಸ್ವಚ್ಛತೆಯಾಗಿರಲಿ

ಸರಿಯಾದ ಆಹಾರ ನೈರ್ಮಲ್ಯವನ್ನು ಕಾಪಾಡಿಕೊಳ್ಳದಿದ್ದರೆ ಮನೆಯಲ್ಲಿ ತಯಾರಿಸಿದ ಊಟವೂ ಸೋಂಕಿನ ಮೂಲವಾಗಬಹುದು. ಹಸಿ ಮಾಂಸ ಮತ್ತು ಸಿದ್ಧಪಡಿಸಿದ ಆಹಾರಕ್ಕೆ ಒಂದೇ ಕತ್ತರಿಸುವ ಬೋರ್ಡ್ ಅಥವಾ ಚಾಕುವನ್ನು ಬಳಸುವುದು ಕರುಳಿನ ಸಮಸ್ಯೆಗೆ ಕಾರಣವಾಗಬಹುದು

ಕರುಳು ಕಾಪಾಡಿಕೊಳ್ಳೋದು ಹೇಗೆ?

  • ಶುದ್ಧ ಅಥವಾ ಕುದಿಸಿ ಆರಿಸಿ ನೀರನ್ನು ಮಾತ್ರ ಕುಡಿಯಿರಿ
  • ಬಿಸಿ ಆಹಾರವನ್ನು ಸೇವಿಸಲು ಪ್ಲ್ಯಾನ್​ ಮಾಡಿಹುರಿದು
  • ಕರಿದ ಯಾವುದೇ ವಸ್ತುಗಳನ್ನು ತಿನ್ನಲೇ ಬೇಡಿ
  • ನಿ

    ಯಮಿತವಾಗಿ ಒಂದೇ ಸಮಯಕ್ಕೆ ಆಹಾರ ಸೇವಿಸೋದಕ್ಕೆ ಪ್ಲ್ಯಾನ್​ ಮಾಡಿ

  • ವೈದ್ಯರ ಸಲಹೆ ಇಲ್ಲದೆ ಯಾವುದೇ ಮಾತ್ರೆ ತೆಗೆದುಕೊಳ್ಳಬೇಡಿ
  • ಅಡುಗೆ ಮಾಡುವ ಮೊದಲು ನಂತೆರ ಸ್ವಚ್ಛವಾಗಿ ಕೈ ತೊಳೆಯಿರಿ, (ಏಜೆನ್ಸೀಸ್).