Natural drinks for constipation relief
Natural drinks for constipation relief: ಸರಳ ವ್ಯಾಯಾಮ ಇಲ್ಲದೆ..ಕುಳಿತಲ್ಲೇ ಕುಳಿತು ಕೆಲಸ ಮಾಡುವ ವಿಧಾನ ಹಾಗೂ ಕರುಳಿನ ಚಲನೆಯಿಲ್ಲದೆ ಕಾಡುವ ಪೈಲ್ಸ್ ಅಥವಾ ಮೂಲವ್ಯಾಧಿ ಹೆಸರಿನ ಆರೋಗ್ಯ ಸಮಸ್ಯೆಯೂ ಸಾಕಷ್ಟು ಇಕ್ಕಟ್ಟಿಗೆ ಒಳಗಾಗುವಂತೆ ಮಾಡುತ್ತದೆ. ತುರಿಕೆ, ರಕ್ತ ಸ್ರಾವ, ಮಲ ವಿಸರ್ಜನೆಗೆ ಕಷ್ಟ ಪಡುವಂತೆ ಮಾಡುತ್ತದೆ. ಇದನ್ನು ಆಹಾರದ ಮೂಲಕ ನೈಸರ್ಗಿಕವಾಗಿಯೂ ಸರಿಪಡಿಸಿಕೊಳ್ಳಬಹುದಾಗಿದೆ. ಅದಕ್ಕೂ ಮುನ್ನ ನೀವು ಕುಡಿಯುವ ನೀರು ಹಾಗೂ ಪಾನಿಯಾದಿಂದಲೇ ಹೇಗೆ ಮಲಬದ್ಧತೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳೋದು ಎಂದು ನೋಡೋಣ.
ಗ್ಯಾಸ್ಟ್ರೋಲಜಿಸ್ಟ್ ಸೌರಭ್ ಸೇಥಿ ಅವರು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡ ಮಾಹಿತಿ ಪ್ರಕಾರ, ಕಾಫಿ ಮತ್ತು ಗ್ರೀನ್ ಟೀ,. ಪಾನೀಯ ಹಣ್ಣಿನ ರಸ ಹಾಗೂ ಚಿಯಾ ಸೀಡ್ಸ್ನಿಂದಾಗಿಯೇ ಮಲಬದ್ಧತೆಯಂತಹ ಸಮಸ್ಯೆಗೆ ಮುಕ್ತಿ ಕೊಟ್ಟುಕೊಳ್ಳಬಹುದು ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಕರುಳು ಸ್ನೇಹಿ ಪಾನೀಯಾಗಳು ಮಲಬದ್ಧತೆಯಂತಹ ಸಮಸ್ಯೆಯಿಂದ ದೂರವಿರಲು ಸಹಾಯ ಮಾಡುತ್ತದೆ. ಅದರಂತೆ ಕಾಫಿ ಮತ್ತು ಗ್ರೀನ್ ಚಹಾದಲ್ಲಿ ಕೆಫೀನ್ ಅಂಶವಿದ್ದು ಕೊಲೊನ್ನಲ್ಲಿ ಹೆಚ್ಚು ಕೆಲಸ ಮಾಡಿ, ಮಲಕ್ಕೆ ಹೋಗುವಂತೆ ಪ್ರಚೋದನೆ ಕೊಡುತ್ತದೆ. ಆದರೆ, ಗಮನಿಸಿ ಈ ಪಾನೀಯಗಳು ಕೆಲವರಲ್ಲಿ ನಿರ್ಜಲೀಕರಣ, ಚಡಪಡಿಕೆ ಅಥವಾ ಇನ್ನಿತರ ಸಮಸ್ಯೆಗೆ ಎಡೆಮಾಡಿಕೊಡಬಹುದು. ಹೀಗಾಗಿ ಗಂಭೀರ ಆರೋಗ್ಯ ಸಮಸ್ಯೆ ಅಥವಾ ಅಲರ್ಜಿಯನ್ನು ಹೊಂದಿರುವವರು ವೈದ್ಯರ ಸಲಹೆ ಮೇರೆಗೆ ಈ ಪಾನೀಯವನ್ನು ಸ್ವೀಕರಿಸಿ.
- ಬೆರ್ರಿ ಮತ್ತು ಕೆಫೀರ್ ಸ್ಮೂತಿ
ಪ್ರೊಬಯೋಟಿಕ್ ಅಂಶ ಇರುವ ಬೆರ್ರಿ ಮತ್ತು ಕೆಫೀರ್ ಸ್ಮೂತಿಯಿಂದಾಗಿ ಮಲಬದ್ಧತೆ ಸಮಸ್ಯೆಗೆ ಕೊಂಚ ಮುಕ್ತಿ ಸಿಗುವ ಸಾಧ್ಯತೆ ಇದೆ. ಇದರಲ್ಲಿರುವ ಹಾಲಿನಿಂದ ಹುದುಗಿಸಿರು ಕೆಫೀರ್ ಜೀರ್ಣಕ್ರಿಯೆ ಸುಲಭವಾಗಿಸಲು ಸಹಾಯ ಮಾಡುತ್ತದೆ. ಇನ್ನು ಬೆರ್ರಿ ಹಣ್ಣುಗಳಲ್ಲಿ ನಾರಿನಾಂಶವಿರುವ ಕಾರಣ ಇದು ಮಲವನ್ನು ಮೆದುಗೊಳಿಸುತ್ತದೆ. ಸ್ಮೂತಿಯಲ್ಲಿರುವ ತೇವಾಂಶವೂ ಮಲಬದ್ಧತೆಯನ್ನು ಕಡಿಮೆ ಮಾಡುತ್ತದೆ.
ಸೆನ್ನಾ, ಶುಂಠಿ, ಸೋಂಪು, ಚಕ್ಕೆ ಚಹಾಗಳು ಮಲಬದ್ಧತೆ ನಿವಾರಣೆಗೆ ಸಹಾಯ ಮಾಡುತ್ತದೆ. ಯಾವುದೇ ವೈದ್ಯಕೀಯ ಸಹಾಯ ವಿಲ್ಲದೆ ಅಥವಾ ವೈದ್ಯರ ಸಲಹೆ ಇಲ್ಲದೇ ಹೆಚ್ಚಾಗಿ ಹರ್ಬಲ್ ಟೀಯನ್ನು ಸೇವೆನೆ ಮಾಡುವುದಕ್ಕೆ ಕಡಿವಾಣ ಇರಲಿ.
ಸೇಬು, ಪೇರಳೆ ಹಣ್ಣು ಹಾಗೂ ನೇರಳೆಯಲ್ಲಿರುವ ಸೋರ್ಬಿಟೋಲ್ ಅಂಶವು ಮಲವನ್ನು ಮೆದುಗೊಳಿಸುತ್ತದೆ. ಸಾಮಾನ್ಯವಾಗಿ ಮಲವಿಸರ್ಜನೆಗೆ ಕಷ್ಟಪಡುವ ಪ್ರಸಂಗವು ಕಾಡೋದಿಲ್ಲ. ಹೀಗಾಗಿ ವಾರಕ್ಕೆ ಮೂರು ದಿನ ಅಥವಾ ನಿತ್ಯ ಒಂದೊಂದು ಹಣ್ಣಿನ ರಸ ಸೇವನೆ ಮಾಡುವುದು ಒಳಿತು ಎನ್ನುತ್ತಾರೆ ಸೌರಭ್ ಸೇಥಿ.
ತುಳಸಿ ಬೀಜ ಅಥವಾ ಚಿಯಾ ಸೀಡ್ಸ್ ಎಂದು ಕರೆಸಿಕೊಳ್ಳಿವ ಇವು ನೋಡಲು ಸಣ್ಣ ಕಂಡರೂ ಬಹಳ ದೊಡ್ಡ ಜಾದುವನ್ನೇ ಮಾಡುತ್ತದೆ. ಇದರಲ್ಲಿರುವ ನಾರಿನಾಂಶವು ಹಾಗೂ ಇದರ ಜೊತೆಗೆ ಹೊಟ್ಟೆ ಸೇರುವ ನೀರು ಮಲವನ್ನು ಮೆದುಗೊಳಿಸುತ್ತದೆ. ಇದರಿಂದ ಆರಾಮದಾಯಕವಾಗಿ ಮಲವಿಸರ್ಜನೆಯನ್ನು ಮಾಡಲು ಸಹಾಯ ಮಾಡುತ್ತದೆ. ಚಿಯಾ ಬೀಜವನ್ನು ತಿಂದ ಬಳಿಕ ಹೆಚ್ಚು ನೀರು ಸೇವನೆ ಮಾಡಬೇಕು ಇಲ್ಲವಾದಲ್ಲಿ ಕರುಳಿನಲ್ಲೇ ಚಿಯಾ ಬೀಜಗಳು ಉಳಿದುಕೊಂಡು ಮಲಬದ್ಧತೆ ಸಮಸ್ಯೆಯನ್ನು ಮತ್ತಷ್ಟು ದುಪ್ಪಟ್ಟು ಮಾಡುವ ಸಾಧ್ಯತೆ ಇದೆ, (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ, (ಏಜೆನ್ಸೀಸ್).